`ಮೃಚ್ಛಕಟಿಕ’ ನಾಟಕ ಯುಟ್ಯೂಬ್ ಲೋಕಾರ್ಪಣೆ

`ಮೃಚ್ಛಕಟಿಕ’ ನಾಟಕ ಯುಟ್ಯೂಬ್ ಲೋಕಾರ್ಪಣೆ

Jul 09, 2020 07:24:11 PM (IST)
`ಮೃಚ್ಛಕಟಿಕ’ ನಾಟಕ ಯುಟ್ಯೂಬ್ ಲೋಕಾರ್ಪಣೆ

ದುಬೈ: ಧ್ವನಿ ಪ್ರತಿಷ್ಠಾನವು ದುಬೈಯ ಏಮಿರೇಟ್ಸ್ ಥಿಯೇಟರ್ ಸಭಾಗಂಣದಲ್ಲಿ 34ನೇ ವಾರ್ಷಿಕೋತ್ಸವದ ಅಂಗವಾಗಿ ರಂಗವೇರಿಸಿದ ಡಾ.ಎನ್.ಎಸ್. ಲಕ್ಷ್ಮೀನಾರಾಯಣ ಭಟ್ ಕನ್ನಡಕ್ಕೆ ಭಾಷಾಂತರಿಸಿದ ಶೂದ್ರಕ ಮಹಾಕವಿಯ ಮೃಚ್ಛಕಟಿಕ ನಾಟಕವನ್ನು ಇಂದು ಯುಟ್ಯೂಬ್ ವೀಕ್ಷಕರಿಗಾಗಿ ಲೋಕಾರ್ಪಣೆಗೊಳಿಸಲಾಯಿತು.

ಲೋಕಾರ್ಪಣೆಗೊಳಿಸಿದ ತುಂಬೆ ಗ್ರೂಫ್ ಆಫ್ ಕಂಪೆನಿಯ ಸ್ಥಾಪಕ ಹಾಗೂ ಅಧ್ಯಕ್ಷ ಡಾ. ತುಂಬೆ ಮೊಯಿದ್ದೀನ್ ಅವರು ಕಳೆದ ಮೂವತೈದು ವರ್ಷಗಳಿಂದ ಹೊರನಾಡು ಮತ್ತು ವಿದೇಶದಲ್ಲಿ ಕನ್ನಡ ರಂಗ ಸೇವೆ ನಡೆಸುತ್ತಾ ಬಂದಿರುವ ಧ್ವನಿ ಪ್ರತಿಷ್ಠಾನದ ಚಟುವಟಿಕೆ ಗಳನ್ನು ಶ್ಲಾಘಿಸಿದರು.

ನಾಟಕದ ನಿರ್ದೇಶಕ ಹಾಗು ಧ್ವನಿ ಅಧ್ಯಕ್ಷ ಪ್ರಕಾಶ್ ರಾವ್ ಪಯ್ಯಾರ್ ಅವರು ಯುವ ಜನಾಂಗಕ್ಕೆ ಭಾರತೀಯ ರಂಗ ಭೂಮಿಯನ್ನು ಪರಿಚಯಿಸುವ ಉದ್ದೇಶದಿಂದ ಧ್ವನಿ ಕೆಲವು ವರ್ಷಗಳಿಂದ ಪುರಾತನ ನಾಟಕಗಳನ್ನು ಆಯ್ಕೆ ಮಾಡಿ ದುಬೈಯಲ್ಲಿ ಪ್ರರ್ದಶಿಸುತ್ತಾ ಬಂದಿದೆ ಎಂದು ಹೇಳಿದರು.

ಅಜ್ಮಾನ್ ನ ತುಂಬೆ ಮೆಡಿಕಲ್ ಕಾಲೇಜಿನಲ್ಲಿ ನೆರವೇರಿದ ಈ ಕಾರ‍್ಯಕ್ರಮದಲ್ಲಿ ಧ್ವನಿ ಕಾರ‍್ಯಕಾರಿ ಸಮಿತಿಯ ಸದಸ್ಯರಾದ ಆಶೋಕ ಅಂಚನ್, ಸುಗಂಧರಾಜ್ ಬೇಕಲ್, ಆಶೋಕ ಬೈಲೂರ್, ಗಣೇಶ್ ಕುಲಾಲ್ ಹಾಗೂ ವಿಘ್ನೇಶ ಉಪಸ್ಥಿತರಿದ್ದರು.