ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ವಾರ್ಷಿಕ ಮಹಾಸಭೆ

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ವಾರ್ಷಿಕ ಮಹಾಸಭೆ

IA   ¦    Sep 10, 2019 04:28:48 PM (IST)
ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ವಾರ್ಷಿಕ ಮಹಾಸಭೆ

ಮುಂಬೈ: ಅಧಿವೇಶನ ಅರ್ಥಪೂರ್ಣವಾಗಿ ನಡೆದಿದೆ. ನಮ್ಮ ಜಿಲ್ಲೆಗಳ ಅಭಿವೃದ್ದಿಯ ಬಗ್ಗೆ ನಮ್ಮ ಜಿಲ್ಲೆಗಳ ಎಲ್ಲಾ ರಾಜಕೀಯ ಧುರೀಣರು ನಮಗೆ ಸಹಕರಿಸುತ್ತಿದ್ದು, ಮಹಾನಗರದಲ್ಲಿನ ಎಲ್ಲಾ ಜಾತೀಯ ಸಂಘಟನೆಗಳ ಸಹಕಾರದಿಂದ ಜಿಲ್ಲೆಗಳ ಸಮಸ್ಯೆಗಳನ್ನು ಬಗೆಯರಿಸಲು ಅಸಾಧ್ಯವಾಗದು ಎಂದು ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕ ಹಾಗೂ ಅಧ್ಯಕ್ಷರಾದ ತೋನ್ಸೆ ಜಯಕೃಷ್ಣ ಶೆಟ್ಟಿ ಯವರು ಹೇಳಿದರು.

ಸಮಿತಿಯ ಜಿಲ್ಲಾ ಉಪಾಧ್ಯಕ್ಷ ರಾದ ಜಗದೀಶ್ ಅಧಿಕಾರಿ ಅವರು ಮಾತನಾಡುತ್ತಾ ನಮ್ಮವರೇ ಆದ ಜಾರ್ಜ್ ಫೆರ್ನಾಂಡಿಸ್ ರ ಪ್ರೇರಣೆಯಿಂದ ಹಲವು ಪ್ರಗತಿಪರ ಕೆಲಸಗಳು ಆಗಿದ್ದು, ಹಲವು ಸಾಧನೆಗಳನ್ನು ಮಾಡಿರುವ ನಮ್ಮದು ಶ್ರೀಮಂತ ಜೆಲ್ಲೆಗಳು   ರೈಲ್ವೇ, ಹೈವೇ, ಪೋರ್ಟ್, ಏರ್ ಪೋರ್ಟ್ ಗಳನೊಂದಿದ ನಮ್ಮ ಜಿಲ್ಲೆಗಳು ಕರ್ನಾಟಕದ ಹೆಬ್ಬಾಗಿಲು. ಪೂರ್ಣ ಚಂದ್ರನ ವ್ಯಕ್ತಿತ್ವವನ್ನು ಹೊಂದಿರುವ ತೋನ್ಸೆ ಜಯಕೃಷ್ಣ ಶೆಟ್ಟಿ ಯವರು ಎಲ್ಲ ಸಮುದಾಯದವರನ್ನು ಒಂದು ಗೂಡಿಸಿ ಜಿಲ್ಲೆಗಳ ಪ್ರಗತಿಗಾಗಿ ಹೋರಾಡುತ್ತಿದ್ದು ಅಭಿನಂದನೀಯ.

 

ಉಪಾಧ್ಯಕ್ಷ ಪೆಲಿಕ್ಸ್ ಡಿ. ಸೋಜಾ, ಬಿಲ್ಲವರ ಅಸೊಷಿಯೇಶನ್ ಮುಂಬಯಿ ಅಧ್ಯಕ್ಷ  ಚಂದ್ರಶೇಖರ ಪೂಜಾರಿ, ಸಫಲಿಗ ಸೇವಾ ಸಂಘ ಮುಂಬಯಿ ಅಧ್ಯಕ್ಷ ಶ್ರೀನಿವಾಸ ಸಾಫಲ್ಯರು,ಕುಲಾಲ ಸಂಘ ಮುಂಬಯಿಯ ಅಧ್ಯಕ್ಷ ದೇವದಾಸ ಕುಲಾಲ್ ,ಅಧ್ಯಕ್ಷ ಜಿತೇಂದ್ರ ಗೌಡ,

ಭಂಡಾರಿ ಸೇವಾ ಸಮಿತಿಯ ಅಧ್ಯಕ್ಷ ನ್ಯಾ. ಆರ್. ಎಂ. ಭಂಡಾರಿ,ಕರ್ನಾಟಕ ವಿಶ್ವಕರ್ಮ ಅಸೋಶಿಯೇಶನ್ ಮುಂಬಯಿ ಅಧ್ಯಕ್ಷ ಸದಾನಂದ ಆಚಾರ್ಯ,ಗಾಣಿಗ ಸಮಾಜ ಮುಂಬಯಿ ಅಧ್ಯಕ್ಷರಾದ ರಾಮಚಂದ್ರ,ಮುಂಬಯಿ ದೇವಾಡಿಗ ಸಂಘದ ಅಧ್ಯಕ್ಷ ರವಿ ದೇವಾಡಿಗ, ಬಿಲ್ಲವ ಚೇಂಬರ್ ಆಪ್ ಕಾಮರ್ಸ್ ಮತ್ತು ಇಂಡಷ್ಟ್ರೀಸ್ ನ ಕಾರ್ಯಾಧ್ಯಕ್ಷರಾದ ಎನ್. ಟಿ. ಪೂಜಾರಿ, ಬಂಟ್ಸ್ ಚೇಂಬರ್ ಆಪ್ ಕಾಮರ್ಸ್ ಮತ್ತು ಇಂಡಷ್ಟ್ರೀಸ್ ನ ಕಾರ್ಯಾಧ್ಯಕ್ಷರಾದ ಕೆ ಸಿ ಶೆಟ್ಟಿ, ನ್ಯಾ. ಡಿ. ಕೆ. ಶೆಟ್ಟಿ, ಬಿ. ಎಸ್. ಕೆ. ಬಿ. ಅಸೋಷಿಯೇಶನಿನ ಅಧ್ಯಕ್ಷ ಸುರೇಶ್ ಎಸ್, ಸಮಿತಿಯ ಮಾಜಿ ಅಧ್ಯಕ್ಷ ನ್ಯಾ. ಪ್ರಕಾಶ್ ಎಲ್ ಶೆಟ್ಟಿ, ಉಪಾಧ್ಯಕ್ಷರಾದ ಎಲ್. ವಿ. ಅಮೀನ್  ನ್ಯಾ. ಡಿ. ಕೆ. ಶೆಟ್ಟಿ, ಪ್ರವೀಣ್ ನಾರಾಯಣ ದೇವಾಡಿಗ ಮಾತನಾಡಿದರು.

 

 

More Images