ದುಬೈ: ಕರ್ನಾಟಕ ಇಸ್ಲಾಮಿಕ್ ಸೆಂಟರ್ ತನ್ನ ಹದಿನೈದು ವರ್ಷಗಳ ಯಶಸ್ವೀ ಪಯಣವನ್ನು ಪೂರ್ತಿಗೊಳಿಸಿದ್ದು ಆ ಪ್ರಯುಕ್ತ ಹಾಗೂ ಕುಂಬ್ರ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿರುವ ಸಮನ್ವಯ ವಿದ್ಯಾ ಸಂಸ್ಥೆಯ ಪರಚಾರಾರ್ಥ ಡಿಸೆಂಬರ್ 11 ರಂದು ಕೇಂದ್ರ ಸಮಿತಿ ಅಧೀನದಲ್ಲಿ ಕೆ ಐ ಸಿ ಕ್ರಿಸ್ಟಲ್ ಜುಬಿಲಿ ಮೀಟ್ ಎಂಬ ಬೃಹತ್ ಕಾರ್ಯಕ್ರಮವನ್ನು ಹಮ್ಮಿ ಕೊಂಡಿದೆ.
ದುಬೈಯ ಪ್ರತಿಷ್ಟಿತ ಇರಾನಿಯನ್ ಕ್ಲಬ್ ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ತಾಯಿನಾಡಿನಿಂದ ಹಲವಾರು ಉಲಮಾ ಉಮರಾ ನೇತಾರರು, ಯು ಎ ಇ ಸೌದಿ ಅರೇಬಿಯಾ ಕುವೈಟ್ ಖತಾರ್ ಮೊದಲಾದ ಅರಬ್ ರಾಷ್ಟ್ರಗಳ ಉದ್ಯಮಿಗಳು, ಕೆ ಐ ಸಿ ಹಿತೈಷಿಗಳು, ವಿವಿದ ಕ್ಷೇತ್ರಗಳಲ್ಲಿ ಸಾಧನೆ ಗೈದ ನೇತಾರರು ಭಾಗವಹಿಸಲಿದ್ದು, ಆ ಪ್ರಯುಕ್ತ ಕಾರ್ಯಕ್ರಮದ ಸಮಾಲೋಚನಾ ಸಭೆಯು ರಾಫೀ ಹೋಟೆಲ್ ಸಭಾಂಗಣದಲ್ಲಿ ನಡೆಯಿತು.
ಕೆ ಐ ಸಿ ಕ್ರಿಸ್ಟಲ್ ಜುಬಿಲಿ ಮೀಟ್ ಸ್ವಾಗತ ಸಮಿತಿ ಅಧ್ಯಕ್ಷರಾದ ಜನಾಬ್ ಶರೀಫ್ ಬಿ ಕೆ ಕಾವು ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ಕೆ ಐ ಸಿ ಕೇಂದ್ರ ಸಮಿತಿ ಗೌರವಾಧ್ಯಕ್ಷರಾದ ಸಯ್ಯದ್ ಅಸ್ಕರ್ ಅಲಿ ತಂಙಲ್ ಕೊಲ್ಪೆ ಮಾತನಾಡಿ , ಕೆ ಐ ಸಿ ಇಂದು ಸಮುದಾಯದಲ್ಲಿ ಸಮಾಜದಲ್ಲಿ , ಅದರಂತೆ ಗುಲ್ಫ್ ರಾಷ್ಟ್ರಗಳಲ್ಲಿ ಅತ್ಯಂತ ಹೆಚ್ಚು ಪ್ರಚಲಿತದಲ್ಲಿರುವ ವಿದ್ಯಾ ಸಂಸ್ಥೆಯಾಗಿದೆ. ಹಲವಾರು ಪ್ರತಿಭೆಗಳನ್ನು ಇಂದು ಸಮಾಜದ ಮುಖ್ಯವಾಹಿನಿಯಲ್ಲಿ ಪರಿಚಯಿಸಿಕೊಂಡು , ಸಮುದಾಯದಲ್ಲಿನ ಬಡ ವರ್ಗದ ವಿಧ್ಯಾರ್ಥಿಗಳ ಲೌಕಿಕ ಹಾಗೂ ಧಾರ್ಮಿಕ ಶಿಕ್ಷಣವನ್ನು ಉಚಿತವಾಗಿ ನೀಡುತ್ತಾ ಬಂದ ಈ ಸಂಸ್ಥೆಯು ಇಂದು ತನ್ನ ಹದಿನೈದನೇ ವರ್ಷದ ಸಂಭ್ರಮದಲ್ಲಿದ್ದು ಪ್ರಸಕ್ತ ಕಾರ್ಯಕ್ರಮವನ್ನು ಯಶಸ್ವೀ ಗೊಳಿಸುವಲ್ಲಿ ತಾವೆಲ್ಲರೂ ಶಕ್ತಿಮೀರಿ ಪ್ರಯತ್ನಿಸುವಂತೆ ಕೇಳಿಕೊಂಡು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ನಂತರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೇಂದ್ರ ಸಮಿತಿ ಅಧ್ಯಕ್ಷರಾದ ಮೊಹಿಯುದ್ದೀನ್ ಕುಟ್ಟಿ ಹಾಜಿ ದಿಬ್ಬರವರು, ಪ್ರಸಕ್ತ ಸನ್ನಿವೇಶದಲ್ಲಿ ಸಮುದಾಯದ ಯುವ ಸಮೂಹಗಳು ಭಿನ್ನ ಭಿನ್ನರಾಗಿ ಚದುರಿ ಹೋಗುತ್ತಿದ್ದು ಪಾಶ್ಚಾತ್ಯ ಸಿನಿಮಾ ನಟರನ್ನು ಅನುಸರಿಸುತ್ತಾ ಇಸ್ಲಾಂ ಗೆ ಕಪ್ಪು ಚುಕ್ಕೆಯಾಗಿ ಇತರ ಸಮುದಾಯಗಳ ಎಡೆಯಲ್ಲಿ ಪ್ರಶ್ನಾರ್ಹರಾಗುತ್ತಿದ್ದು ಇಂತಹ ಸಂದರ್ಭದಲ್ಲಿ ಕೆ ಐ ಸಿ ಯು ಆರ್ಥಿಕವಾಗಿ ಹಿಂದುಳಿದ ವಿಧ್ಯಾರ್ಥಿಗಳನ್ನು ಗುರುತಿಸಿಕೊಂಡು ಉಚಿತವಾಗಿ ವಿದ್ಯಾದಾನವನ್ನು ನೀಡುತ್ತಾ ಬಂದಿದ್ದು, ಈ ಸಂಸ್ಥೆಯು ಯು ಎ ಇ ಯಲ್ಲಿ ಜನ್ಮ ತಾಳಿ ಇಂದು ಹದಿನೈದು ವರ್ಷಗಳನ್ನು ಪೂರ್ತಿಗೊಳಿಸಿದೆ. ಅಲ್ಲದೆ ಸಂಸ್ಥೆಯು ಮುಂದೆ ಸಮುದಾಯದ ವಿದ್ಯಾರ್ಥಿಗಳ ಸದುಪಯೋಗಕ್ಕಾಗಿ ಹಲವಾರು ಆಯೋಜನೆಗಳನ್ನು ಹಾಕಿದ್ದು, ಆ ಪ್ರಯುಕ್ತ ಸಂಸ್ಥೆಯ ಪ್ರಚಾರಾರ್ಥ, ಹದಿನೈದು ವರ್ಷಗಳ ಸುದೀರ್ಘ ನಡೆಯ ಸಂಭ್ರಮಾಚರಣೆಯ ಸಲುವಾಗಿ ಡಿಸೆಂಬರ್ 11 ರಂದು ಬೃಹತ್ ಕಾರ್ಯಕ್ರಮವನ್ನು ಆಯೋಜಿಸಿದ್ದು ತಾವೆಲ್ಲರೂ ಆ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಕೇಳಿಕೊಂಡು ಖುರ್ ಆನಿನ ಸೂಕ್ತದೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ವೇದಿಕೆಯಲ್ಲಿ ಉಪಸ್ತಿತರಿದ್ದ ದುಬೈ ಸಮಿತಿ ಅಧ್ಯಕ್ಷರಾದ ಜನಾಬ್ ಅಶ್ರಫ್ ಖಾನ್ , ಶಂಸುದ್ದೀನ್ ಹನೀಫಿ ಉಸ್ತಾದ್ ರವರು ಸಂಧರ್ಬ್ಹೊಚಿತವಾಗಿ ಮಾತನಾಡಿ ಕೆ ಐ ಸಿ ಕೇಂದ್ರ ಸಮಿತಿ ಯು ತನ್ನ ಹದಿನೈದನೆ ವರ್ಷದ ಸಂಭ್ರಮಾಚರಣೆಯ ಹೊಸ್ತಿಲಲ್ಲಿ ಇದ್ದು, ಹಲವಾರು ನಿರೀಕ್ಷೆಗಳೊಂದಿಗೆ ಬೃಹತ್ ಕಾರ್ಯಕ್ರಮವನ್ನು ಆಯೋಜಿಸಿದ್ದು ಪದಾಧಿಕಾರಿಗಳಾದ ತಾವೆಲ್ಲರೂ ಅತ್ಯುತ್ಸಾಹದಿಂದ ಕಾರ್ಯನಿರ್ವಹಿಸುವಂತೆ ಕೇಳಿಕೊಂಡು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಅಲ್ಲದೆ ಇದೇ ಸಂದರ್ಭದಲ್ಲಿ ಕೆ ಐ ಸಿ ಸ್ಥಾಪಕ ಸದಸ್ಯರು, ಯು ಎ ಇ ಯಲ್ಲಿ ಕೆ ಐ ಸಿ ಎಂಬ ಬೃಹತ್ ಸಂಸ್ಥೆಯನ್ನು ಆರಂಭಕಾಲದಿಂದ ಇಂದಿನವರೆಗೆ ಪೋಷಿಸಿ ಪ್ರೋತ್ಸಾಹಿಸುತ್ತಾ ಬಂದ ಜನಾಬ್ ಅಬ್ದುಲ್ ರಝಾಕ್ ಸೊಂಪಾಡಿ ಹಾಗೂ ಜನಾಬ್ ಅಬ್ಬಾಸ್ ಕೇಕುಡೆ ರವರು ಮಾತನಾಡಿ ಆರಂಭ ಕಾಲದಲ್ಲಿ ಇದ್ದ ಕೆ ಐ ಸಿ ಯ ಸ್ಥಿತಿಗತಿ ಹಾಗೂ ಇಂದು ಕಾಣುತ್ತಿರುವ ಕೆ ಐ ಸಿ ಯ ಕಾರ್ಯ ವೈಖರಿಗಳನ್ನು ಪ್ರಶಂಸಿ ಉದ್ದೇಶಿತ ಕಾರ್ಯಕ್ರಮವು ಸರ್ವ ಕ್ಷೇತ್ರಗಳಲ್ಲಿ ಯಶಸ್ಸನ್ನು ಸಾಧಿಸಲಿ ಎಂದು ಶುಭ ಹಾರೈಸಿದರು.
ನಂತರ ಸಭಾಧ್ಯಕ್ಷತೆ ವಹಿಸಿದ್ದ ಕೆ ಐ ಸಿ ಕ್ರಿಸ್ಟಲ್ ಜುಬಿಲಿ ಮೀಟ್ ಸ್ವಾಗತ ಸಮಿತಿ ಅಧ್ಯಕ್ಷರಾದ ಜನಾಬ್ ಶರೀಫ್ ಬಿ ಕೆ ಕಾವು ರವರು ಮಾತನಾಡುತ್ತಾ , ಪ್ರಸಕ್ತ ಸನ್ನಿವೇಶದಲ್ಲಿ ಕೆ ಐ ಸಿ ಯು ಇಂತಹ ಒಂದು ಬೃಹತ್ ಕಾರ್ಯಕ್ರಮವನ್ನು ಆಯೋಜಿಸಿರುವುದರ ಕುರಿತು ವಿವರಿಸಿ, ಅರಬ್ ರಾಷ್ಟ್ರದಲ್ಲಿ ತನ್ನ ಕಾರ್ಯಚಟುವಟಿಕೆಗಳ ಮೂಲಕ ಕಳೆದ ಹದಿನೈದು ವರ್ಷಗಳ ಹಿಂದೆ ಜನ್ಮ ತಾಳಿದ ಈ ಸಂಸ್ಥೆಯು ಇಂದು ಹೆಮ್ಮರವಾಗಿ ಬೆಳೆದು ಬಂದಿದ್ದು , ಹಲವಾರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾ ದಾನವನ್ನು ನೀಡಿದ ಸಂಸ್ಥೆಯಾಗಿದ್ದು , ಮುಂದೆ ಈ ವಿದ್ಯಾ ಸಂಸ್ಥೆಯನ್ನು ವಿಸ್ತರಿಸಿಕೊಂಡು ಕೈಗಾರಿಕಾ ಕಲಿಕೆ, ಇತರ ಕಲಿಕಾ ಕೇಂದ್ರ ಗಳನ್ನೂ ಹುಟ್ಟು ಹಾಕುವ ಯೋಜನೆಯಿದ್ದು , ಇವೆಲ್ಲದರ ಮೇಲಾಗಿ ಕಳೆದ ಹದಿನೈದು ವರ್ಷಗಳಿಂದ ನಮ್ಮನ್ನು ಪ್ರೋತ್ಸಾಹಿಸಿ ಪ್ರಶಂಸಿದ ಕೆ ಐ ಸಿ ಹಿತೈಷಿ ಬಳಗಕ್ಕೆ ಕೃತಜ್ಞತೆ ಯೊಂದಿಗೆ ಕೆ ಐ ಸಿ ನಡೆಸಿಕೊಂಡ ಬಂದ ಕಾರ್ಯವೈಖರಿಯನ್ನು ಸಮುದಾಯದ ಮುಂದೆ ಸಮರ್ಪಿಸುವ ಸಲುವಾಗಿ ಡಿಸೆಂಬರ್ 11 ರಂದು ಬೃಹತ್ ಕಾರ್ಯಕ್ರಮವನ್ನು ಆಯೋಜಿಸಿದ್ದು ತಾಯಿನಾಡಿನಿಂದ ಹಾಗೂ ಅರಬ್ ರಾಷ್ಟ್ರಗಳಿಂದ ಹಲವಾರು ಗಣ್ಯಾತಿಗಣ್ಯರು ಭಾಗವಿಸಲಿದ್ದು ಸುಮಾರು ಒಂದು ಸಾವಿರಕ್ಕಿಂತಲೂ ಅಧಿಕ ಕೆ ಐ ಸಿ ಹಿತೈಷಿ ಬಳಗವು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಆದ್ದರಿಂದ ಪಧಾಧಿಕಾರಿಗಳಾದ ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವೀ ಗೊಳಿಸುವಂತೆ ಕರೆ ನೀಡಿದರು, ಅಲ್ಲದೆ ಇದೇ ಸಂದರ್ಬದಲ್ಲಿ ಅವರು ಕೆ ಐ ಸಿ ಎಂಬ ಸ್ಥಾಪನೆ ಯು ಗಲ್ಫ್ ರಾಷ್ಟ್ರಗಳಲ್ಲಿ ಉದಯಿಸಿ ಹೆಮ್ಮರವಾಗಿ ಬೆಳೆಯಲು ಕಾರಣ ಕರ್ತರಾದ ಸ್ಥಾಪಕ ಸದಸ್ಯರನ್ನು ಸ್ಮರಿಸಿ ಅವರ ಅಂದಿನ ಸೇವಾ ಮನೋಭಾವದ ಪಲವಾಗಿ ಇಂದು ನಾವೆಲ್ಲರೂ ಹೆಮ್ಮೆಯಿಂದ ಕೆ ಐ ಸಿ ಎಂಬ ನಾಮ ದಿಂದ ಪರಿಚಿತರಾಗುತಿದ್ದು ಅವರೆಲ್ಲರಿಗೂ ಸಮಿತಿಯು ಚಿರ ಋನಿಯಾಗಿದ್ದು ಕೃತಜ್ಞತೆ ಸಮರ್ಪಿಸಿದರು.
ಕಾರ್ಯಕ್ರಮದಲ್ಲಿ ದಾರುನ್ನೂರು ಎಜುಕೇಶನ್ ಸೆಂಟರ್ ಕಾಶಿಪಟ್ನ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಬದ್ರುದ್ದೀನ್ ಹೆಂತಾರ್ , ಕೆ ಐ ಸಿ ದುಬೈ ಸಮಿತಿ ಗೌರವಾಧ್ಯಕ್ಷರು ಅಬ್ದುಲ್ ಖಾದರ್ ಬೈತಡ್ಕ , ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ನೂರ್ ಮುಹಮ್ಮದ್ ನೀರ್ಕಜೆ, ಶಾರ್ಜಾ ಸಮಿತಿ ಅಧ್ಯಕ್ಷರಾದ ಅಬ್ದುಲ್ ರಝಾಕ್ ಮಣಿಲ, ಶಾರ್ಜಾ ಸಮಿತಿ ಕೋಶಾಧಿಕಾರಿ ಯೂಸುಫ್ ಹಾಜಿ ಬೆರಿಕೆ, ಕೆ ಐ ಸಿ ಅಲ್ ಕೌಸರ್ ಯೂತ್ ವಿಂಗ್ ಗೌರವಾಧ್ಯಕ್ಷ ಅಬ್ದುಲ್ ರಫೀಕ್ ಅತೂರ್, ಅಧ್ಯಕ್ಷರಾದ ಜಬ್ಬಾರ್ ಬೈತಡ್ಕ ಮುಂತಾದವರು ಉಪಸ್ಥಿತರಿದ್ದರು.