News Kannada
Sunday, October 02 2022

ಹೊರನಾಡ ಕನ್ನಡಿಗರು

ನ.11ರಂದು ಅಬುದಾಬಿಯಲ್ಲಿ ಗಾಯಕ ಕೆವಿನ್ ಮಿಸ್ಕಿತ್ ಸಂಗೀತ ರಸಸಂಜೆ - 1 min read

Photo Credit :

ನ.11ರಂದು ಅಬುದಾಬಿಯಲ್ಲಿ ಗಾಯಕ ಕೆವಿನ್ ಮಿಸ್ಕಿತ್ ಸಂಗೀತ ರಸಸಂಜೆ

ಅಬುದಾಬಿ: ಹೆಸರಾಂತ ಗಾಯಕ ಕೆವಿನ್ ಮಿಸ್ಕಿತ್ ಹಾಗೂ ಹಲವು ಪ್ರತಿಭಾವಂತ ಯುವ ಕಲಾವಿದರನ್ನು ಒಳಗೊಂಡ ಮಂಗಳೂರಿನ ಜನಪ್ರಿಯ ತಂಡವಾದಂತಹ ಮೈಲ್ ಸ್ಟೋನ್ ಬ್ಯಾಂಡ್ ಗ್ರೂಪ್ ಮಧ್ಯಪೂರ್ವ ಯು.ಎ.ಇ ಹಾಗೂ ಒಮನ್ ನಲ್ಲಿ ನಿರಂತರ ಕಾರ್ಯಕ್ರಮಗಳನ್ನು ನೀಡಲಿದೆ.

ಈ ವಿದೇಶ ಪ್ರವಾಸದಲ್ಲಿ ನವೆಂಬರ್ 11ರಂದು ಇಂಡಿಯನ್ ಸೋಶಿಯಲ್ ಹಾಗೂ ಕಲ್ಚರಲ್ ಸೆಂಟರ್ ಅಬುದಾಬಿಯಲ್ಲಿ ವಿಭಿನ್ನ ಹಾಗೂ ವಿನೂತನವಾದ ಸಂಗೀತ ಕಾರ್ಯಕ್ರಮವನ್ನು ಪ್ರಸ್ತುತ ಪಡಿಸಲಿದೆ.  ಎಲ್ಲರೂ ಇಷ್ಟಪಡುವ ಹೊಸ ಶೈಲಿಯ ಜೊತೆಗೆ ವಿಭಿನ್ನವಾಗಿ ಈ ಕಾರ್ಯಕ್ರಮ ನಡೆಯಲಿದ್ದು, ಈ ಕಾರ್ಯಕ್ರಮದ ನಿರೂಪಣೆಯನ್ನು ತನ್ನ ಅದ್ಬುತವಾದ ಕಾವ್ಯಾತ್ಮಕ ಸೊಬಗಿಗೆ  ಹೆಸರುವಾಸಿಯಾದಂತ ಕವಿ ಟೈಟಸ್ ನೊರೋನ್ಹಾ ಮಾಡಲಿದ್ದಾರೆ.

ಈ ಸಂಗೀತ ಕಾರ್ಯಕ್ರಮವು ಕವನ ಹಾಗೂ ಸಂಗೀತದ ಪರಿಪೂರ್ಣ ಮಿಶ್ರಣವಾಗಿದ್ದು,  ಸುಮಧುರವಾದ, ಮನಸ್ಸಿಗೆ ಮುದ ನೀಡುವಂತಹ ಅತ್ಯತ್ತಮವಾದ ಹಾಡುಗಳನ್ನು ಖ್ಯಾತ ಗಾಯಕ ಕೆವಿನ್  ಜೊತೆಯಲ್ಲಿ ಇನ್ನಿತರ ಯುವ ಪ್ರತಿಭಾವಂತ ಗಾಯಕರು ಈ ವಿನೂತನ ಸಂಗೀತ ಸಂಜೆಯಲ್ಲಿ ದನಿಗೂಡಿಸಲಿದ್ದಾರೆ.

ಸಂಗೀತ ಪ್ರಿಯರಿಗೆ ಹೇಳಿ ಮಾಡಿಸಿದಂತಹ ಕಾರ್ಯಕ್ರಮ ಇದಾಗಿದ್ದು, ಇದೀಗಲೇ ಹಲವು ಟಿಕೆಟ್ ಗಳು ಬುಕ್ ಆಗಿದೆ. ಇನ್ನು ಕೆಲವೇ ಕೆಲವು ಟಿಕೆಟ್ ಗಳು ಬಾಕಿ ಇದ್ದು, ಈ ಕಾರ್ಯಕ್ರಮಕ್ಕೆ ಬರಲು ಇಚ್ಚಿಸುವ  ಸಂಗೀತ ರಸಿಕರು ಆದಷ್ಟು ಬೇಗ ತಮ್ಮ ಪ್ರವೇಶವನ್ನು ಖಚಿತಪಡಿಸಿಕೊಳ್ಳಬೇಕಾಗಿ ವಿನಂತಿ.

ಈ ಕಾರ್ಯಕ್ರಮದ ಪ್ರಾಯೋಜಕತ್ವವನ್ನು ಅಲ್ ಮಜ್ಹ್ ರಾಯ್ ಮತ್ತು ಕ್ಲೆವಿ ಆಟೋ ಮೊಬೈಲ್ ಸರ್ವೀಸಸ್ ಹಾಗೂ ಸಹ ಪ್ರಾಯೋಜಕತ್ವವನ್ನು ಐ ಕೇರ್ ಬಿಲ್ಡರ್ಸ್ ಮತ್ತು ಡೆವೆಲಾಪರ್ಸ್ ವಹಿಸಲಿದ್ದು, ಯು.ಎ.ಇ ಮತ್ತು ಒಮನ್ ನಲ್ಲಿ ನಡೆಯುವ ಕೆವಿನ್ ಮಿಸ್ಕಿತ್ ಅವರ ಮೈಲ್ ಸ್ಟೋನ್ ಬ್ಯಾಂಡ್ ಗ್ರೂಪ್ ನ ಕಾರ್ಯಕ್ರಮಗಳಿಗೆ ಐ ಕೇರ್ ಬಿಲ್ಡರ್ಸ್ ಮತ್ತು ಡೆವೆಲಪರ್ಸ್ ಪ್ರವರ್ತಕರಾಗಿದ್ದಾರೆ.

ಈ ಕಾರ್ಯಕ್ರಮದ ಅಧಿಕೃತ ಮಾಧ್ಯಮ ಪಾಲುದಾರರಾಗಿ ನ್ಯೂಸ್ ಕರ್ನಾಟಕ ಕಾರ್ಯಕ್ರಮ ಪಾಲುದಾರರಾಗಿ ಬ್ರೋಡ್ ವೇ ಇವೆಂಟ್ ಮಾನೇಜ್ ಮೆಂಟ್ ಹಾಗೂ ಪ್ರಿಂಟ್ ವೆಲ್ ಗ್ರಾಫಿಕ್ಸ್ ಮುದ್ರಣ ಪಾಲುದಾರರಾಗಿ ಈ ಸಂಗೀತ ರಸ ಸಂಜೆಯಲ್ಲಿ ಸಹಕರಿಸಲಿದ್ದಾರೆ.

See also  ಬಿಲ್ಲವ ಸಮಾಜದ ಕಡೆಗಣನೆ ಖೇದಕರ: ಹರಿಕೃಷ್ಣ ಬಂಟ್ವಾಳ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು