News Kannada
Friday, October 07 2022

ಹೊರನಾಡ ಕನ್ನಡಿಗರು

ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ ನ 20 ನೇ ವಾರ್ಷಿಕ ಸಮ್ಮೇಳನ ಡಿ.2,3 ಮತ್ತು 4ರಂದು ನಡೆಯಲಿದೆ - 1 min read

Photo Credit :

ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ ನ 20 ನೇ ವಾರ್ಷಿಕ ಸಮ್ಮೇಳನ ಡಿ.2,3 ಮತ್ತು 4ರಂದು ನಡೆಯಲಿದೆ

ದುಬೈ: ಗಲ್ಫ್ ಪ್ರವಾಸಿಗಳ ಬ್ರಹತ್ ಸುನ್ನಿ ಸಂಘಟನೆ ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್(ಡಿ.ಕೆ.ಎಸ್.ಸಿ) ಇದರ ಅಧೀನದಲ್ಲಿ ಉಡುಪಿ ಜಿಲ್ಲೆಯ ಮೂಳೂರಿನಲ್ಲಿ “ಅಲ್ ಇಹ್ಸಾನ್ ಎಜುಕೇಷನ್ ಸೆಂಟರ್ “ಎಂಬ ಬ್ರಹತ್ತಾದ ಧಾರ್ಮಿಕ ಹಾಗೂ ಶೈಕ್ಷಣಿಕ ಸ್ಥಾಪನೆಯು ಅನಾಥಾಲಯ, ವಸತಿ ಶಾಲೆ, ಶರೀಅತ್ ಕಾಲೇಜು, ಹಿಫ್ಲುಲ್ ಕುರ್ಆನ್ ಕಾಲೇಜು, ಅಲ್ ಇಹ್ಸಾನ್ ಆಂಗ್ಲ ಮಾಧ್ಯಮ ಶಾಲೆ, ನರ್ಸರಿ, ಪ್ರಾಥಮಿಕ ಮತ್ತು ಪ್ರೌಢಶಾಲೆ, ಮಹಿಳಾ ಕಾಲೇಜುಗಳು ಕಾರ್ಯಾಚರಿಸುತ್ತಿವೆ. 

ಈಗ ಸಂಘಟನೆಯು 20 ಸಂವತ್ಸರವನ್ನು ಪೂರ್ತಿಗೊಳಿಸಿದ ಸಂತೋಷದಲ್ಲಿ ಡಿ.ಕೆ.ಎಸ್.ಸಿ ಯ ಪ್ರವರ್ತಕರು. ಇದರ ಅಂಗವಾಗಿ 20 ನೇ ವಾರ್ಷಿಕ ಸಮ್ಮೇಳನವನ್ನು ತಾಯ್ನಾಡಿನಲ್ಲಿ ಸಮುದಾಯದ ಅಭಿವೃದ್ಧಿಗೆ 20 ಅಂಶಗಳ ವಿವಿಧ ಜನೋಪಯೋಗಿ ಅಭಿವೃದ್ಧಿ ಕಾರ್ಯಕ್ರಮಗಳೊಂದಿಗೆ ನಡೆಸುವ ಸಂಭ್ರಮ. ಈಗಾಗಲೇ ಕಾರ್ಯಕ್ರಮವು ಸ್ವಾಗತ ಸಮಿತಿ ಅಧ್ಯಕ್ಷರಾದ ಬಿ.ಎಂ.ಮಮ್ತಾಜ್ ಅಲಿರವರ ಸಾರತ್ಯದಲ್ಲಿ ಸಮ್ಮೇಳನದ ಉದ್ಘಾಟನೆಯು ಸಂಸ್ಥೆಯ ಅಧ್ಯಕ್ಷರಾದ ಕೆ.ಎಸ್.ಆಟಕೋಯ ತಂಙಳ್ ಕುಂಬೋಲ್ ರವರ ಅಧ್ಯಕ್ಷತೆಯಲ್ಲಿ, ದಕ್ಷಿಣ ಕನ್ನಡ ಜಿಲ್ಲಾ ಖಾಝಿತ್ವಾಖ ಅಹ್ಮದ್ ಮುಸ್ಲಿಮಾರ್, ಉಡುಪಿ ಜಿಲ್ಲಾ ಖಾಝಿ ಬೇಕಲ ಇಬ್ರಾಹೀಂ ಮುಸ್ಲಿಯಾರ್ ಸೇರಿದಂತೆ ಧಾರ್ಮಿಕ, ಸಾಮಾಜಿಕ ಗಣ್ಯರ ಉಪಸ್ಥಿತಿಯಲ್ಲಿ ಮಂಗಳೂರಿನ ಪುರಭವನದಲ್ಲಿ ವಿಜೃಂಭಣೆಯಿಂದ ನಡೆದಿರುತ್ತದೆ.

ಈ ಕಾರ್ಯಕ್ರವಲ್ಲಿ ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಹೊಲಿಗೆ ಯಂತ್ರ, ಆರ್ಥಿಕವಾಗಿ ಹಿಂದುಳಿದವರಿಗೆ ಸಣ್ಣ ವ್ಯಾಪಾರ ನಡೆಸಲು ತಳ್ಳುವ ಗಾಡಿ, ಒಂದೇ ಮಸೀದಿಯಲ್ಲಿ 20 ವರ್ಷಗಳಿಕ್ಕಿಂತಲೂ ಮೇಲ್ಪಟ್ಟು ಸೇವೆಗೈದ ಮುದರ್ರಿಸ್ / ಖತೀಬ್ / ಸದರ್ / ಮುಅಲ್ಲಿಂ / ಮುಅಝ್ಹಿನ್ ರವರಿಗೆ  ಸನ್ಮಾನ, ಕನಿಷ್ಠ 20 ವರ್ಷಗಳಿಂದ ಸೇವೆಗೈಯ್ಯುತ್ತಿರುವ ಧಾರ್ಮಿಕ / ಲೌಕಿಕ ಶಿಕ್ಷಣ ಸಂಸ್ಥೆಗಳಿಗೆ ಪ್ರಶಸ್ತಿ ಅಲ್ಲದೆ ಶಾಂತಿ ಮತ್ತು ಸೌಹಾರ್ದತೆಯಿಂದ ಸಾಮಾಜಿಕವಾಗಿ ಸೇವೆ ನೀಡುತ್ತಿರುವ ಮುಸ್ಲಿಂ, ಹಿಂದೂ ಮತ್ತು ಕ್ರ್ಯೆಸ್ತ ಸಹೋದರರರಿಗೆ “ಡಿ.ಕೆ.ಎಸ್.ಸಿ ಸದ್ಭಾವನಾ ಪ್ರಶಸ್ತಿ” ಹಾಗೂ ಪ್ರತಿಷ್ಠಿತ ದೇವರಾಜ ಅರಸು ಪ್ರಶಸ್ತಿ ಪುರಸ್ಕೃತ ಮಾಜಿ ಸಚಿವ ಅಲ್ ಹಾಜ್ ಬಿ.ಎ.ಮೊಹಿದಿನ್ ರವರಿಗೆ “ಡಿ.ಕೆ.ಎಸ್.ಸಿ. ಜೀವಮಾನ ಸಾಧನಾ ಪ್ರಶಸ್ತಿ” ನೀಡಿ ಗೌರವಿಸಲಾಗಿದೆ.

ಡಿ.2, 3 ಮತ್ತು 4ರಂದು ಮೂಳೂರಿನ ಮರ್ಕಝ್ ಕ್ಯಾಂಪಸ್ ನಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಈ ಮಹತ್ತಾದ ಸಮಾರಂಭದಲ್ಲಿ ಸಾದಾತುಗಳು, ಉಲಮಾಗಳು, ರಾಜಕೀಯ ನೇತಾರರು, ಉಮರಾಗಲು ಭಾಗವಹಿಸಲಿದ್ದು ಡಿ. 4 ರಂದು ನಡೆಯುವ ಕಾರ್ಯಕ್ರಮದಲ್ಲಿ 20 ಜೋಡಿ ಬಡ ಕುಟುಂಬಗಳ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಿದ್ದು, ವಧುವಿಗೆ ಎಂಟು ಪವನ್ ಚಿನ್ನ ಹಾಗೂ ಇತರ ಖರ್ಚಿಗಾಗಿ 50 ಸಾವಿರ ರೂ., ವರನಿಗೆ ವಧುದಕ್ಷಿಣೆ ಮತ್ತಿತರ ಖರ್ಚುಗಳಿಗಾಗಿ 50 ಸಾವಿರ ರೂ. ನೀಡಿ ನಡೆಸಲಿರುವುದು. ಸಮಾರೋಪ ಸಮಾರಂಭ ಹಾಗೂ 20 ನೇ  ವಾರ್ಷಿಕ ಸಮ್ಮೇಳನ ಇದನ್ನು ಯು.ಎ.ಇ ವಿವಿಧ ಕಡೆಗಳಲ್ಲಿ ಪ್ರಚಾರ ಪಡಿಸಲು ಜನಾಬ್.ಹಾಜಿ .ಮೊಯಿದ್ದೀನ್ ಕುಟ್ಟಿ ಕಕ್ಕಿಂಜೆ ಯವರ ಅಧ್ಯಕ್ಷತೆಯಲ್ಲಿ ಕಮಿಟಿಯನ್ನು ರಚಿಸಲಾಗಿದ್ದು ವಿವಿಧ ಕಡೆಗಳಲ್ಲಿ ಅಕ್ಟೊಬರ್ 28 ರಿಂದ ನವಂಬರ್ 25 ರವರೆಗೆ ನಡೆಯಲಿರುವ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲು ಡಿ.ಕೆ.ಎಸ್.ಸಿ.ಯ ಪ್ರವರ್ತಕರು ಹಿತೈಷಿಗಳು ಸಹಕರಿಸುವಂತೆ ಡಿ.ಕೆ.ಎಸ್.ಸಿ.ಯು.ಎ.ಇ ರಾಷ್ಟೀಯ ಸಮಿತಿ ಅಧ್ಯಕ್ಸರಾದ ಜನಾಬ್.ಹುಸೈನ್ ಹಾಜಿ ಕಿನ್ಯ ರವರು ವಿನಂತಿಸಿರುತ್ತಾರೆ.  

See also  ಮುಂಬೈ: ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು