News Kannada
Tuesday, November 29 2022

ಹೊರನಾಡ ಕನ್ನಡಿಗರು

ಶೈಖ್ ಝಾಯಿದ್ ಸಾಮರಸ್ಯ ಪ್ರಶಸ್ತಿಗೆ ಝೈನಿ ಕಾಮಿಲ್ ಆಯ್ಕೆ - 1 min read

Photo Credit :

ಶೈಖ್ ಝಾಯಿದ್ ಸಾಮರಸ್ಯ ಪ್ರಶಸ್ತಿಗೆ ಝೈನಿ ಕಾಮಿಲ್ ಆಯ್ಕೆ

ದುಬೈ: ಯುವ ವಿದ್ವಾಂಸ, ಸಂಘಟನಾ ದಿಗ್ಗಜ, ಭಾಷಣ ಪೀಠದ ಮಿನುಗು ತಾರೆ, ಸುನ್ನಿ ಸಾಹಿತ್ಯ ಲೋಕದ ಅದ್ವಿತೀಯ ಬರಹಗಾರ, ಮೌಲಾನಾ ಎಮ್ಮೆಸ್ಸೆಂ ಅಬ್ದುಲ್ ರಶೀದ್ ಸಖಾಫಿ ಝೈನಿ ಕಾಮಿಲ್ ರವರಿಗೆ 2016 ನೇ ಸಾಲಿನ ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿಯು ಪ್ರಧಾನ ಮಾಡುವ “ಶೈಖ್ ಝಾಯಿದ್ ಸಾಮರಸ್ಯ ಪ್ರಶಸ್ತಿ”ಗೆ ಆಯ್ಕೆಯಾಗಿದ್ದಾರೆ.

ಡಿಸೆಂಬರ್ 9ರಂದು ನಡೆಯುವ ಯುಎಇ ರಾಷ್ಟೀಯ ದಿನಾಚರಣೆ ಸಮಾವೇಶದಲ್ಲಿ ಅಖಿಲ ಭಾರತ ಸುನ್ನಿ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಶೈಖುನಾ ಸುಲ್ತಾನುಲ್ ಉಲಮಾ ಎಪಿ ಅಬೂಬಕರ್ ಮುಸ್ಲಿಯಾರ್ ರವರು ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ.   ವಿವಿಧ ಧರ್ಮ, ಜಾತಿ ಪಂಗಡಗಳ ಜನರು ಒಗ್ಗಟಾಗಿ ಬಾಳುವಲ್ಲಿ ಶಾಂತಿ ಸಾಮರಸ್ಯ ದೊಂದಿಗೆ ಜಗತ್ತಿನ ಅತ್ಯಂತ ಸಹಬಾಳ್ವಿಕೆಯ ರಾಷ್ಟ್ರ ಕಟ್ಟುವಲ್ಲಿ ಯಶಸ್ವಿಯಾದ ಯುಎಇ ರಾಷ್ಟ್ರಪಿತ ಶೈಖ್ ಝಾಯಿದ್ ಹೆಸರಿನಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

ತನ್ನ ಆಕರ್ಷಣೀಯ ವಾಕ್ ಧೋರಣೆಗಳಿಂದ ಸಭಿಕರನ್ನು ಮನಗೆದ್ದು ಕಳೆದ ಎರಡೂವರೆ ದಶಕಗಳಿಂದ ಕರ್ನಾಟಕ ಮತ್ತು ದಕ್ಷಿಣ ಭಾರತದ ವಿವಿಧ ರಾಜ್ಯಗಳಲ್ಲಿ ಶಾಂತಿ ಸೌಹಾರ್ದತೆಯ ಭಾಷಣಗಳಿಂದ ಅಖಂಡ ಭಾರತ ನಿರ್ಮಾಣಕ್ಕಾಗಿ ಯುವ ಜನತೆಯನ್ನು ಸ್ಪೂರ್ತಿ ನೀಡಿ ಜಾತ್ಯಾತೀತ ಭಾರತದ ಐಕ್ಯತೆಗೆ ಭದ್ರ ಬುನಾದಿ ನೀಡುತ್ತಿರುವ ಝೈನಿ ರವರು ಧಾರ್ಮಿಕ ಕ್ಷೇತ್ರದಲ್ಲಿ ಝೈನಿ , ಕಾಮಿಲ್ ಸಖಾಫಿ ಬಿರುದನ್ನು ಪಡೆದು ಲೌಕಿಕ ವಿಷಯದಲ್ಲಿ ಎಂ ಪದವೀಧರರಾಗಿದ್ದಾರೆ.  

ಸುನ್ನಿ ಸಂಘ ಸಂಸ್ಥೆಗಳ ಬೆನ್ನೆಲುಬಾಗಿ, ಸಾಮಾಜಿಕ ಕ್ಷೇತ್ರಗಳಲ್ಲಿ ವಿವಿಧ ಹುದ್ದೆಗಳನ್ನೂ ನಿರ್ವಹಿಸಿ ಸಂಘಟನೆಯ ಮುಂಚೂಣಿ ನಾಯಕರಾಗಿದ್ದು ಪ್ರಸ್ತುತ ಎಸ್ ವೈ ಎಸ್ ಕರ್ನಾಟಕ ಪ್ರಾಂತೀಯ ಕಾರ್ಯದರ್ಶಿ, ಕೆಸಿಎಫ್ ಅಂತರ ರಾಷ್ಟ್ರೀಯ ಸಮಿತಿಯ ಉಪಾಧ್ಯಕ್ಷ, ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜು ಹಾಗೂ ಮಿಸ್ಬಾಉಲ್ ಹುದಾ ಕೃಷ್ಣಾಪುರ ಇದರ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಖ್ಯಾತ ಬರಹಗಾರರಾಗಿ, ವಿಶಿಷ್ಟ ವ್ಯಕ್ತಿತ್ವದೊಂದಿಗೆ ಮನೆಮಾತಾಗಿರುವ ಝೈನಿ ರವರು ಸಕಾಲಿಕ ಅಂಕಣಗಳೊಂದಿಗೆ ಹೆಸರು ವಾಸಿಯಾಗಿರುತ್ತಾರೆ, ಅನೇಕ ವಿದ್ವಾಂಸರನ್ನು ಹಾಗೂ ಬರಹಗಾರರನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಭಾಷಣ ಮತ್ತು ಬರಹಗಳ ಮೂಲಕ ಮಾನವೀಯತೆಯನ್ನು ಮೆರೆದು ರಾಷ್ಟ್ರದ ಸಂಕಲ್ಪಕ್ಕೆ ಇವರು ನೀಡಿದ ಕೊಡುಗೆಯವನ್ನು ಗೌರವಿಸಿ ಕೆಸಿಎಫ್ ಈ ಬಾರಿಯ ಶೈಖ್ ಝಾಯಿದ್ ಸಾಮರಸ್ಯ ಪ್ರಶಸ್ತಿ ಯನ್ನು ನೀಡಲು ನಿರ್ಧರಿಸಿದೆ.

ಯುಎಇ ಯ ಸರ್ಕಾರದ ಪ್ರತಿನಿಧಿಗಳು, ಹಿರಿಯ ಉದ್ಯಮಿಗಳು, ಧಾರ್ಮಿಕ, ರಾಜಕೀಯ ಸಾಮಾಜಿಕ ಕ್ಷೇತ್ರದ ಗಣ್ಯರು ಕಾರ್ಯಕ್ರಮದಲ್ಲಿ  ಭಾಗವಹಿಸಲಿದ್ದಾರೆಂದು ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಉಸ್ಮಾನ್ ಹಾಜಿ ನಾಪೋಕ್ಲು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

See also  ಕಲಾವಿದ ಝುಬೇರ್ ಖಾನ್ ಕುಡ್ಲಗೆ ಗೌರವ ಡಾಕ್ಟರೇಟ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು