ಮುಂಬಯಿ: ಇಲ್ಲಿನ ಅಂಧೇರಿ ಪಶ್ಚಿಮದ ಶ್ರೀ ಮದ್ಭಾರತ ಮಂಡಳಿ ವತಿಯಿಂದ ಗ್ರಂಥ ಪಾರಾಯಣ ಹಾಗೂ ಮಂಡಳಿಯ 139ನೇ ವಾರ್ಷಿಕ ಮಂಗಳ್ಳೋತ್ಸವವು ಫೆ. 18, 19 ರಂದು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಶ್ರೀ ಲಕ್ಷ್ಮೀನಾರಾಯಣ ಮಂದಿರದಲ್ಲಿ ಜರಗಿತು.
ಫೆ. 18ರಂದು ಸಂಜೆ ಹೋಮ, ಬ್ರಾಹ್ಮಣ ಸತ್ಕಾರ, ರಾತ್ರಿ ಗ್ರಂಥ ಪಾರಾಯಣ, ಆನಂತರ ಉಪಕಾರ ಸ್ಮರಣೆ, ಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು. ಫೆ. 19ರಂದು ಬೆಳಗ್ಗೆ ಭಜನೆ, ಉತ್ತರ ಪೂಜೆ, ಅತಿಥಿಗಳಿಗೆ ಸತ್ಕಾರ, ಬಳಿಕ ಪ್ರಾರ್ಥನೆ, ಹರಕೆ ಸಮರ್ಪಣೆ, ಧಾರ್ಮಿಕ ಸಭೆ, ಮಧ್ಯಾಹ್ನ ಅನ್ನಸಂತರ್ಪಣೆಯಲ್ಲಿ ಸಾವಿರಾರು ಭಕ್ತಾದಿಗಳು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.
ಅಂದು ಅಪರಾಹ್ನ ಶ್ರೀ ದೇವರ ಮೂರ್ತಿಯನ್ನು ಪಲ್ಲಕ್ಕಿಯೊಂದಿಗೆ ಮೆರವಣಿಗೆಯೊಂದಿಗೆ ಕೊಂಡೊಯ್ಯಲಾಯಿತು. ಆನಂತರ ಮೊಗವೀರ ಭವನದಲ್ಲಿ ಅನ್ನಸಂತರ್ಪಣೆ ನಡೆಯಿತು. ಗುರುಪ್ರಸಾದ್ ಭಟ್ ಅವರ ಪೌರೋಹಿತ್ಯದಲ್ಲಿ ಮಂಗಳ್ಳೋತ್ಸವವು ಜರಗಿತು. ಮಂಡಳಿಯ ಅಧ್ಯಕ್ಷ ಜಗನ್ನಾಥ ಪಿ. ಪುತ್ರನ್, ಉಪಾಧ್ಯಕ್ಷರುಗಳಾದ ಒಡೆಯರಬೆಟ್ಟು ರಘು ನಾಥ್ ಬಿ. ಕುಂದರ್ ಮತ್ತು ಸಂಜೀವ ಬಿ. ಚಂದನ್, ಪ್ರಧಾನ ಕಾರ್ಯದರ್ಶಿ ಗುಂಡಿ ವಿ. ಕೆ. ಸುವರ್ಣ, ಜತೆ ಕಾರ್ಯದರ್ಶಿಗಳಾದ ಸಣ್ಣಗುಂಡಿ ಲೋಕನಾಥ್ ಸಿ. ಕಾಂಚನ್ ಮತ್ತು ಪಲಿಮಾರು ಹರಿಶ್ಚಂದ್ರ ಸಿ. ಕಾಂಚನ್, ಗೌರವ ಪ್ರಧಾನ ಕೋಶಾಧಿಕಾರಿ ಮೂಳೂರು ಕೇಶವ ಆರ್. ಪುತ್ರನ್, ಜತೆ ಕೋಶಾಧಿಕಾರಿಗಳಾದ ಮೂಳೂರು ನಾರಾಯಣ ಸಿ. ಸುವರ್ಣ ಮತ್ತು ಬೈಕಂಪಾಡಿ ಶ್ಯಾಮ ಕೆ. ಪುತ್ರನ್, ಪಾರುಪತ್ಯಗಾರರುಗಳಾದ ಜೆ. ಪಿ. ಪುತ್ರನ್, ವಿ. ಕೆ. ಸುವರ್ಣ, ನಾರಾಯಣ ಸಿ. ಸುವರ್ಣ, ಆನಂದ ಎ. ಅಮೀನ್, ನಾಗೇಶ್ ಎಲ್. ಮೆಂಡನ್, ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ನಾಗೇಶ್ ಎಲ್. ಮೆಂಡನ್, ಶಶಿಕುಮಾರ್ ಎಸ್. ಕೋಟ್ಯಾನ್, ಲೋಕನಾಥ ಓಡಿ ಮೆಂಡನ್, ವಾಸು ಎಸ್. ಉಪ್ಪೂರು, ದೇವದಾಸ್ ಪಿ. ಕರ್ಕೇರ, ಗೋವಿಂದ ಎನ್. ಪುತ್ರನ್, ಗಂಗಾಧರ ಎಸ್. ಕರ್ಕೇರ, ಎಚ್. ಮಹಾಬಲ್, ಸುರೇಂದ್ರನಾಥ್ ಹಳೆಯಂಗಡಿ, ಆನಂದ ಎ. ಅಮೀನ್, ಗಂಗಾಧರ ಟಿ. ಸಾಲ್ಯಾನ್ ಮೊದಲಾದವರು ಉಪಸ್ಥಿತರಿದ್ದರು.