ಮುಂಬಯಿ: ಮಲಾಡ್ ಪೂರ್ವ, ಕುರಾರ್ ವಿಲೇಜ್ ನ ಶ್ರೀ ಶನಿ ಮಹಾತ್ಮಾ ಪೂಜಾ ಸಮಿತಿಯ ವತಿಯಿಂದ ಇತ್ತೀಚೆಗೆ ಅಭ್ಯುದಯ ಬ್ಯಾಂಕಿನ ಆಡಳಿತ ನಿರ್ದೇಶಕರಾಗಿ ಭಡ್ತಿ ಹೊಂದಿದ ಪ್ರೇಮನಾಥ ಸಾಲ್ಯಾನ್ ಅವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು.
ಶ್ರೀ ಶನಿ ಮಹಾತ್ಮಾ ಪೂಜಾ ಸಮಿತಿಯ ಅಧ್ಯಕ್ಷ ಶ್ರೀನಿವಾಸ ಸಾಫಲ್ಯ, ಪ್ರಧಾನ ಕಾರ್ಯದರ್ಶಿ ಎಂ.ಡಿ. ಬಿಲ್ಲವ, ಮಾಜಿ ಅಧ್ಯಕ್ಷರುಗಳಾದ ಶ್ರೀಧರ ಆರ್. ಶೆಟ್ಟಿ, ಬಾಬು ಎನ್. ಚಂದನ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶೀತಲ್ ಕೋಟ್ಯಾನ್ ಹಾಗೂ ಇತರ ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಉಪಸ್ಥಿತರಿದ್ದು ಪ್ರೇಮನಾಥ ಸಾಲ್ಯಾನ್ ಅವರನ್ನು ಅವರ ತಾಯಿ ಮಲಾಡ್ ನ ಮನಪಾ ಕನ್ನಡ ಶಾಲೆಯ ನಿವೃತ ಮುಖ್ಯ ಶಿಕ್ಷಕಿ ಅಹಲ್ಯಾ ಸಾಲ್ಯಾನ್, ಪತ್ನಿ ಕವಿತಾ ಹಾಗೂ ಇಬ್ಬರು ಪುತ್ರರ ಉಪಸ್ಥಿತಿಯಲ್ಲಿ ಸನ್ಮಾನಿಸಲಾಯಿತು.
ಪ್ರೇಮನಾಥ ಸಾಲ್ಯಾನ್ ಹಲವಾರು ವರ್ಷಗಳಿಂದ ಮಲಾಡ್ ನಲ್ಲಿ ನೆಲೆಸಿದ್ದು, ಈ ಪರಿಸರದಲ್ಲಿ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯದಲ್ಲಿ ಇವರ ಕೊಡುಗೆ ಅಪಾರ.
ವರದಿ : ಈಶ್ವರ ಎಂ. ಐಲ್
ಚಿತ್ರ : ದಿನೇಶ್ ಕುಲಾಲ್