News Kannada
Monday, March 27 2023

ಹೊರನಾಡ ಕನ್ನಡಿಗರು

ಬಹ್ರೈನ್ನ ಪ್ರತಿಷ್ಠಿತ ಇಂಡಿಯನ್ ಕ್ಲಬ್ ನ ಆಂತರಿಕ ಲೆಕ್ಕಪರಿಶೋಧಕರಾಗಿ ಕನ್ನಡಿಗ ಲೀಲಾಧರ್ ಬೈಕಂಪಾಡಿ ಆಯ್ಕೆ

Photo Credit :

ಬಹ್ರೈನ್ನ ಪ್ರತಿಷ್ಠಿತ ಇಂಡಿಯನ್ ಕ್ಲಬ್ ನ ಆಂತರಿಕ ಲೆಕ್ಕಪರಿಶೋಧಕರಾಗಿ ಕನ್ನಡಿಗ ಲೀಲಾಧರ್ ಬೈಕಂಪಾಡಿ ಆಯ್ಕೆ

ಗುದೈಬಿಯಾ, ಬಹ್ರೈನ್: ಸುಮಾರು 4 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿದ್ದು, ಬಹ್ರೈನ್ನ ಒಟ್ಟು ಜನಸಂಖ್ಯೆಯ 31 ಪ್ರತಿಶತದಷ್ಟಿರುವ ಅನಿವಾಸಿ ಭಾರತೀಯರ ಅತಿ ಹಿರಿಯ ಹಾಗೂ ಅತ್ಯಂತ ಪ್ರತಿಷ್ಠಿತ ಸಾಮಾಜಿಕ ಸಂಸ್ಥೆಯೇ ಇಂಡಿಯನ್ ಕ್ಲಬ್. ಸ್ವಾತಂತ್ರ್ಯಪೂರ್ವದಲ್ಲಿ ಅಂದರೆ ಕೊಲ್ಲಿ ಮತ್ತು ಭಾರತದಲ್ಲಿ ಸಮಾನ ಆಂಗ್ಲ ವಸಾಹತುಶಾಹಿ ಅಸ್ತಿತ್ವದಲ್ಲಿದ್ದ ಕಾಲದಲ್ಲಿ ಬಹ್ರೈನ್ ದ್ವೀಪರಾಷ್ಟ್ರಕ್ಕೆ ವ್ಯವಹಾರದ ಕಾರಣಗಳಿಗಾಗಿ ವಲಸೆ ಬಂದಿದ್ದ ಸಮಾನಮನಸ್ಕ ಭಾರತೀಯರಿಂದ ಈ ಸಂಸ್ಥೆಯು ‘ನಿಲ್ ಡೆಸ್ಪೆರೆಂಡಂ’ ಧ್ಯೇಯವಾಕ್ಯದೊಂದಿಗೆ 1915 ರಲ್ಲಿ ಸ್ಥಾಪಿತವಾಗಿರುತ್ತದೆ. ಆರಂಭದಲ್ಲಿ ‘ಬಹ್ರೈನ್ ಸ್ಪೋರ್ಟ್ಸ್ ಕ್ಲಬ್’ ಎಂದು ಕರೆಯಲ್ಪಡುತ್ತಿದ್ದ ಇದು ಬಹ್ರೈನ್ ರಾಷ್ಟ್ರದಲ್ಲಿನ ಅತಿ ಹಿರಿಯ ಅನಿವಾಸಿ ಸಂಘಟನೆಗಳಲ್ಲಿ ಒಂದಾಗಿದೆಯಲ್ಲದೆ ಒಟ್ಟು 102 ವರ್ಷಗಳ ಅದ್ಭುತ ಇತಿಹಾಸವನ್ನು ಹೊಂದಿರುತ್ತದೆ.

ಅನಿವಾಸಿ ಭಾರತೀಯರ ಹೆಮ್ಮೆಯ ಈ ಸಂಸ್ಥೆಯಲ್ಲಿ ಸುಮಾರು 1,500 ರ ಸದಸ್ಯಬಲವಿದ್ದು, ಇಲ್ಲಿ ಭಾರತದ ವಿವಿಧ ರಾಜ್ಯಗಳ ನಾಗರಿಕರು ಸದಸ್ಯತ್ವವನ್ನು ಹೊಂದಿರುತ್ತಾರೆ ಹಾಗೂ ಎರಡು ವರ್ಷಗಳಿಗೊಮ್ಮೆ ಇಲ್ಲಿ ಪ್ರಜಾಸತ್ತಾತ್ಮಕ ಶೈಲಿಯಲ್ಲಿ ಆಡಳಿತ ಸಮಿತಿಯ ಆಯ್ಕೆಗೆ ಚುನಾವಣೆ ನಡೆಯುತ್ತದೆ. ಆ ಪ್ರಕಾರ ಇತ್ತೀಚೆಗೆ ಜರಗಿದ ಸಂಸ್ಥೆಯ ವಾರ್ಷಿಕ ಮಹಾಸಭೆಯಲ್ಲಿ ನೂತನ ಆಡಳಿತ ಮಂಡಳಿಯ ರಚನೆಯಾಗಿದೆಯಲ್ಲದೆ, ಈ ಸಂದರ್ಭದಲ್ಲಿ ಅನಿವಾಸಿ ಕನ್ನಡಿಗ ಲೀಲಾಧರ್ ಬೈಕಂಪಾಡಿಯವರು ಮುಂದಿನ ಅವಧಿಗೆ ನೂತನ ಆಂತರಿಕ ಲೆಕ್ಕಪರಿಶೋಧಕರಾಗಿ ಆಯ್ಕೆಯಾಗಿದ್ದಾರೆ.

ಸಾಮಾಜಿಕ ಮತ್ತು ಸಂಘಟನಾ ಕ್ಷೇತ್ರಗಳಲ್ಲಿ ಹಲವು ವರ್ಷಗಳ ಸಾಧನೀಯ ಸೇವೆಯ ಅನುಭವವಿರುವ ಲೀಲಾಧರ್ ಬೈಕಂಪಾಡಿಯವರು ಸುಮಾರು 19 ವರ್ಷಗಳಿಂದ ಬಹ್ರೈನ್ನಲ್ಲಿ ವಾಸ್ತವ್ಯವಿದ್ದಾರೆ ಹಾಗೂ ಹಲವು ತುಳು – ಕನ್ನಡ ಮತ್ತಿತರ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದಾರೆ. ವೃತ್ತಿಯಲ್ಲಿ ಪ್ರಾದೇಶಿಕ ಖಾಸಗಿ ಉದ್ಯಮ ಸಮೂಹದ ವಿತ್ತ ಪ್ರಬಂಧಕರಾಗಿರುವ ಇವರು, ಲೆಕ್ಕಶಾಸ್ತ್ರ ಮತ್ತು ಲೆಕ್ಕಪರಿಶೋಧನೆಯ ಶೈಕ್ಷಣಿಕ ಹಿನ್ನೆಲೆಯನ್ನು ಹೊಂದಿದವರಾಗಿರುತ್ತಾರೆ. ತನ್ನ ಬಹುಮುಖ ಪ್ರತಿಭೆಗೆಗಾಗಿ ಸದಾ ಗುರುತಿಸಲ್ಪಡುವ ಇವರು, ತನ್ನ ನಿರಂತರವಾದ ವೈವಿಧ್ಯಮಯ ಸೇವೆ ಮತ್ತು ಸಾಧನೆಗಳಿಗೆ ದೇಶ ಮತ್ತು ಹೊರದೇಶಗಳಲ್ಲಿ ಅನೇಕ ಪ್ರಶಸ್ತಿ, ಸನ್ಮಾನಗಳನ್ನು ಸ್ವೀಕರಿಸಿರುತ್ತಾರೆ.

ಸ್ಥಳೀಯವಾಗಿ ಕರ್ನಾಟಕ ಸೋಶಿಯಲ್ ಕ್ಲಬ್, ಮಹಾರಾಷ್ಟ್ರ ಮಂಡಳ, ಮೊಗವೀರ್ಸ್ ಬಹ್ರೈನ್ ಸಂಸ್ಥೆಗಳಲ್ಲಿ ಸದಸ್ಯರಾಗಿರುವ ಇವರು, ತನ್ನದೇ ಸಂಯೋಜಕತ್ವದ ಕಾಂಚನ್ ಪ್ರತಿಷ್ಠಾನದ ಮೂಲಕವೂ ಸದಾ ಸೇವಾಕಾರ್ಯಗಳನ್ನು ನಡೆಸುತ್ತಿರುತ್ತಾರೆ. ಬಹ್ರೈನ್ ನೆಲದಲ್ಲಿ ಕರ್ನಾಟಕದ ಮುಖ್ಯಮಂತ್ರಿಯನ್ನು ಕಾಣುವ ಬಹ್ರೈನ್ ಕನ್ನಡಿಗರ ಬಹುಕಾಲದ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ಡಾ. ಬಿ. ಎಸ್. ಯಡಿಯೂರಪ್ಪ ಅವರು ಬಹ್ರೈನ್ಗೆ ಭೇಟಿ ನೀಡುವಂತೆ ಪ್ರತ್ನಿಸಿ, ಅವರು ಬಹ್ರೈನ್ನಲ್ಲಿ ಕನ್ನಡ ಭವನದ ಸ್ಥಾಪನೆಗೆ ರೂ. 1 ಕೋಟಿಯ ಅನುದಾನ ನೀಡುವಂತೆ ಮಾಡಿದುದು ಇವರು ವಿದೇಶಿ ನೆಲದಲ್ಲಿ ಕನ್ನಡ ಮತ್ತು ಕನ್ನಡಿಗರಿಗಾಗಿ ಗೈದ ಮಹತ್ವದ ಸಾಧನೆಯಾಗಿರುತ್ತದೆ.

ತನ್ನ ಎರಡೂವರೆ ದಶಕಗಳಿಗೂ ಮೀರಿದ ವೈವಿಧ್ಯಮಯ ಸಾಧನೆಗಳಿಗೆ ಇವರು ಈಗಾಗಲೇ ರಾಷ್ಟ್ರೀಯ ಭೂಷಣ ಪ್ರಶಸ್ತಿ, ಸಮಾಜ ರತ್ನ ಪ್ರಶಸ್ತಿ, ರಾಷ್ಟ್ರೀಯ ಏಕತಾ ಪ್ರಶಸ್ತಿ, ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ, ಕರ್ನಾಟಕ ಸೌರಭ ಪ್ರಶಸ್ತಿ, ಸೃಷ್ಟಿ ಕಲಾಶ್ರೀ ಪ್ರಶಸ್ತಿಗಳನ್ನು ಪಡೆದಿರುತ್ತಾರೆ. ಪ್ರಸ್ತುತ ಬಹ್ರೈನ್ ನೆಲದ ಪ್ರತಿಷ್ಠಿತ ಇಂಡಿಯನ್ ಕ್ಲಬ್ನ ಆಂತರಿಕ ಲೆಕ್ಕಪರಿಶೋಧಕರಾಗಿ ಆಯ್ಕೆಯಾಗಿರುವ ಇವರಿಗೆ ಸಮಸ್ತ ಕನ್ನಡಿಗರ ಪರವಾಗಿ ಶುಭಾಶಯಗಳು ಹಾಗೂ ಇವರು ತನ್ನ ನೂತನ ಸಾಮಾಜಿಕ ಸೇವಾ ಹುದ್ದೆಯಲ್ಲಿ ಅಪ್ರತಿಮ ಯಶಸ್ಸನ್ನು ಕಾಣಲಿ ಎಂಬ ಶುಭಹಾರೈಕೆಗಳು.

See also  ವಚನ ಮಂಟಪ ಉಪನ್ಯಾಸ ನೀಡಲಿರುವ ಡಾ. ಬಂಜಗೆರೆ ಜಯಪ್ರಕಾಶ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು