ಮುಂಬಯಿ: ಮಲಾಡ್ ಪೂರ್ವ ಕುರಾರ್ ವಿಲೇಜ್, ತಾನಾಜಿ ನಗರದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಹತ್ತನೇ ಪ್ರತಿಷ್ಠಾವರ್ದಂತಿ ಉತ್ಸವ ಸಮಾರಂಭವು ಎ. 20ರಿಂದ ಎ. 22 ರ ತನಕ ಮೂರು ದಿನಗಳ ಕಾಲ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನೆರವೇರಿತು.
ಎ. 20 ರಂದು ಸಂಜೆ 5 ರಿಂದ ಸಾಮೂಹಿಕ ಪ್ರಾರ್ಥನೆ, ಸ್ವಸ್ತಿಪುಣ್ಯಾಹವಾಚನ, ತೋರಣ ಮೂಹೂರ್ತ, ಋತ್ವಿ ಗ್ವರಣೆ, ವಾಸ್ತು ಪೂಜೆ, ವಾಸ್ತು ಬಲಿ, ವಾಸ್ತು ಹೋಮ, ರಕ್ಷೋಘ್ನ ಹೋಮ, ದಿಕ್ಪಾಲ ಬಲಿ ನಡೆಯಿತು. ಅಂದು ಸಂಜೆ ಶ್ರೀ ದುರ್ಗಾಪರಮೇಶ್ವರಿ ಸಮಿತಿಯ ಅಧ್ಯಕ್ಷ ಶೇಖರ ಕೆ. ಪೂಜಾರಿ ಭ್ರಹ್ಮಾವರ ಇವರ ಅಧ್ಯಕ್ಷತೆಯಲ್ಲಿ ನಡೆದ ಸಭಾಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರಕ್ಕೆ ಬಹಳ ಕಾಲದಿಂದ ಸೇವೆ ಸಲ್ಲಿಸುತ್ತಾ ಬಂದಿರುವ ರಾಜು ಪೂಜಾರಿ, ಭಾಸ್ಕರ ಎಸ್. ಸನಿಲ್, ಗೋಪಾಲ್ ಟಿ. ಪೂಜಾರಿ, ರಮೇಶ್ ಕೋಟ್ಯಾನ್ ಮತ್ತು ರತ್ನಾಕರ ಡಿ. ಕೋಟ್ಯಾನ್ ದಂಪತಿಗಳನ್ನು ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರಾದ ಶ್ರೀ ಕೃಷ್ಣ ವಿಠಲ ಪ್ರತಿಷ್ಠಾನದ ಅದ್ಯಕ್ಷ ವಿದ್ವಾನ್ ಕೈರಬೆಟ್ಟು ವಿಶ್ವನಾಥ ಭಟ್, ಮಾಜಿ ನಗರಸೇವಕರುಗಳಾದ ಅಜಿತ್ ರಾವ್ ರಾಣ ಮತ್ತು ಸುನಿಲ್ ಗುಜ್ಜರ್, ಅಭ್ಯುದಯ ಬ್ಯಾಂಕಿನ ಎಂ.ಡಿ. ಪ್ರೇಮನಾಥ ಸಾಲ್ಯಾನ್, ನಗರ ಸೇವಕ ವಿನೋದ್ ಮಿಶ್ರ, ಠಾಕೂರ್ ಮಹಾವಿದ್ಯಾಲಯದ ಟ್ರಸ್ಟಿ ರಾಕೇಶ್ ವಿ. ಸಿಂಗ್, ಶ್ರೀ ದುರ್ಗಾಪರಮೇಶ್ವರಿ ಸಮಿತಿಯ ಉಪಾಧ್ಯಕ್ಷರುಗಳಾದ ಎಸ್. ಬಿ. ಕೋಟ್ಯಾನ್ ಮತ್ತು ಗಣೇಶ್ ಕುಂದರ್, ಕೋಶಾಧಿಕಾರಿ ಬಾಬು ಎಂ. ಸುವರ್ಣ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಭಾರತಿ ಎನ್. ಕೋಟ್ಯಾನ್, ಉಪಕಾರ್ಯಾಧ್ಯಕ್ಷೆ ಪುಷ್ಪ ವಿ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದು ಸನ್ಮಾನಿಸಿದರು. ಸನ್ಮಾನ ಪತ್ರವನ್ನು ತನುಜ ಪೂಜಾರಿ, ಶ್ರೀಲತ ಪೂಜಾರಿ, ಗೀತಾ ಜತ್ತನ್ ವಾಚಿಸಿದರು.
ಅಂಕಿತ ನಾಯಕ್, ಸೌಜನ್ಯ ಬಿಲ್ಲವ, ಲಾಸ್ಯ ಡಿ. ಕುಲಾಲ್ ಮತ್ತು ಶ್ರುತಿ ನಾಯಕ್ ಅವರ ನೃತ್ಯ ಪ್ರದರ್ಶನ ಹಾಗೂ ಪದ್ಮನಾಭ ಸಸಿಹಿತ್ಲು ನಿರ್ದೇಶನದ ಕಲಾ ಸೌರಭ ತಂಡದಿಂದ ಸಂಗೀತ ರಸಮಂಜರಿ ನಡೆಯಿತು. ಎ. 21 ರಂದು ಬೆಳಿಗ್ಗೆ 8 ರಿಂದ ಮಹಾಗಣಪತಿ ಹೋಮ ನಂತರ ಗಣಪತಿ ದೇವರ ಸನ್ನಿಧಿಯಲ್ಲಿ ನವಕಲಶಾರಾಧನೆ, ಪ್ರಧಾನ ಹೋಮ, ಶ್ರೀ ದೇವಿ ಸನ್ನಿಧಿಯಲ್ಲಿ 25 ಕಲಶಾರಾಧನೆ, ಪ್ರಧಾನ ಹೋಮ, ಪಂಚಾಮೃತಾಭಿಷೇಕ, ಮಹಾಪೂಜೆ, ಪಲ್ಲ ಪೂಜೆ ಹಾಗೂ ಪ್ರಸಾದ ವಿತರಣೆ ನಡೆಯಿತು. ಸಂಜೆ ಉತ್ಸವ ಬಲಿಗೆ ಮೊದಲು, ಶ್ರೀ ದೇವೀ ಸನ್ನಿಧಿಯಲ್ಲಿ ಲಲಿತಾ ಸಹಸ್ರನಾಮಾರ್ಚನೆ, ಕುಂಕುಮಾರ್ಚನೆ, ಮಹಾಪೂಜೆ, ರಂಗಪೂಜೆ ಬಳಿಕ ಕಟ್ಟೆಪೂಜೆ, ಅನುಗ್ರಹ ಪ್ರಾರ್ಥನೆ ನಂತರ ಪ್ರಸಾದ ವಿತರಣೆ ನಡೆಯಿತು. ಸಾಣೂರು ಸಾಂತಿಂಜ ಜನಾರ್ಧನ ಭಟ್, ದಹಿಸರಿನ ಶಂಕರಗುರು ಭಟ್ ಇವರ ಉಪಸ್ಥಿತಿಯಲ್ಲಿ ನಡೆದ ಈ ಧಾರ್ಮಿಕ ಕಾರ್ಯದಲ್ಲಿ ಮಧ್ಯಾಹ್ನ ಅನ್ನ ಸಂತರ್ಪಣೆ ನಡೆದಿದ್ದು ಬಾಲಕೃಷ್ಣ ಭಟ್ ಅವರು ಅನ್ನದಾನದ ಪ್ರಸಾದವನ್ನು ತಯಾರಿಸಿದ್ದರು. ಜರಿಮರಿಯ ದಿನೇಶ್ ಕೋಟ್ಯಾನ್ ಅವರ ವಾದ್ಯದೊಂದಿಗೆ ವಿಷ್ಣು ಭಟ್ ಅವರು ಶ್ರೀ ಕ್ಶೇತ್ರದಿಂದ ಕುರಾರ್ ವಿಲೇಲ್ ಪರಿಸರದಲ್ಲಿ ಉತ್ಸವ ಬಲಿ ನಡೆದಿದ್ದು ಸಾವಿರಾರು ಭಕ್ತಾಭಿಮಾನಿಗಳು ಉಪಸ್ಥಿತಿತರಿದ್ದರು.
ಕೊನೆಯ ದಿನ, ಎ. 22 ರಂದು ಬೆಳಿಗ್ಗೆ ಮಹಾಗಣಪತಿ ಹೋಮ, ನವಕ ಪ್ರಧಾನ, ಕಲಶಾರಾಧನೆ, ಪ್ರಧಾನ ಹೋಮ, ಕಲಶಾಭಿಶೇಕ, ಮಹಾಮಂತ್ರಾಕ್ಷತೆ, ಋತ್ವಿಕ್ ಸಂಭಾವನೆ ನಂತರ ಪ್ರಸಾದ ವಿತರಣೆ ನಡೆಯಿತು. ಡೊಂಬಿವಲಿಯ ಶಂಕರನಾರಾಯಣ ತಂತ್ರಿಯವರ ನೇತೃತ್ವದಲ್ಲಿ ಕ್ಷೇತ್ರದ ಪ್ರಧಾನ ಅರ್ಚಕರಾದ ಸೂಡ ಶ್ರೀ ರಾಘವೇಂದ್ರ ಭಟ್ ಅವರ ಪೌರೋಹಿತ್ಯದಲ್ಲಿ ಎಲ್ಲ ಪೂಜಾ ಕಾರ್ಯಗಳು ನೆರವೇರಿತು.
ಕಾರ್ಯಕ್ರಮದ ಯಶಸ್ಸಿಗೆ ಶ್ರೀ ದುರ್ಗಾಪರಮೇಶ್ವರಿ ಸಮಿತಿಯ ಅಧ್ಯಕ್ಷರಾದ ಶೇಖರ ಕೆ. ಪೂಜಾರಿ ಬ್ರಹ್ಮಾವರ, ಉಪಾಧ್ಯಕ್ಷರುಗಳಾದ ಎಸ್. ಬಿ. ಕೋಟ್ಯಾನ್, ಗಣೇಶ್ ಕುಂದರ್ ಮತ್ತು ಪದ್ಮನಾಭ ಟಿ. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಬಿ. ದಿನೇಶ್ ಕುಲಾಲ್, ಜೊತೆ ಕಾರ್ಯದರ್ಶಿಗಳಾದ ಜಗನ್ನಾಥ ಎಚ್. ಮೆಂಡನ್, ಶೈಲೇಶ್ ಬಿ. ಪೂಜಾರಿ, ತನುಜ ಜಿ. ಪೂಜಾರಿ, ಗೌ. ಕೋಶಾಧಿಕಾರಿ ಬಾಬು ಎಂ. ಸುವರ್ಣ, ಜೊತೆ ಕೋಶಾಧಿಕಾರಿಗಳಾದ ಗೋಪಾಲ್ ಎಂ. ಪೂಜಾರಿ, ಮತ್ತು ಗೀತಾ ಸಿ. ಜತ್ತನ್, ಸಲಹಾ ಸಮಿತಿಯ ಸದಸ್ಯರುಗಳಾದ ಶಂಕರ್ ಎಲ್. ಪೂಜಾರಿ, ಅಡ್ವಕೇಟ್ ಜಗನ್ನಾಥ ಎನ್. ಶೆಟ್ಟಿ, ಸಂತೋಸ್ ಕೆ. ಪೂಜಾರಿ, ಭಾಸ್ಕರ್ ಎಸ್. ಸನಿಲ್, ರಮೆಶ್ ಕೋಟ್ಯಾನ್, ಮತ್ತು ಗೋಪಾಲ್ ಬಿ. ಕೋಟ್ಯಾನ್, ಕಾರ್ಯಕಾರಿ ಸದಸ್ಯರುಗಳು, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಭಾರತಿ ಎನ್. ಕೋಟ್ಯಾನ್, ಉಪಕಾರ್ಯಾಧ್ಯಕ್ಷರುಗಳಾದ ಪುಷ್ಪ ವಿ ಶೆಟ್ಟಿ, ಶ್ಯಾಮಲ ಜಿ. ಪೂಜಾರಿ ಮತ್ತು ಯಮುನ ಆರ್ ಕೋಟ್ಯಾನ್, ಕಾರ್ಯದರ್ಶಿ ಶೀಲ ಎಂ. ಪೂಜಾರಿ, ಜೊತೆ ಕಾರ್ಯದರ್ಶಿಗಳಾದ ಭಾರತಿ ಎಸ್ ಕೋಟ್ಯಾನ್, ಪ್ರೇಮ ವಿ ಪೂಜಾರಿ, ಜಯಶ್ರೀ ವೈ ಪೂಜಾರಿ, ಕೋಶಾಧಿಕಾರಿ ವಿಧ್ಯಾ ಬಿ ಸನಿಲ್, ಜೊತೆ ಕೋಶಾಧಿಕಾರಿಗಳಾದ ಲತಾ ಜಿ, ಕುಂದರ್ ಮತ್ತು ಸ್ಮಿತ ಅಬು ಹಾಗೂ ಮಹಿಳಾ ವಿಭಾಗದ ಸಮಿತಿಯ ಎಲ್ಲಾ ಸದಸ್ಯರುಗಳು ಸಹಕರಿಸಿದರು.