ದುಬೈ: ಕನ್ನಡಿಗರು ದುಬೈ ವತಿಯಿಂದ ಪ್ರೇಷಿಯಸ್ ಪಾಟೀಸ್ ಸಹಯೋಗದಿಂದ ಸಂಗೀತ ರಸಮಂಜರಿ ಕಾರ್ಯಕ್ರಮ “ಸಂಗೀತ ಸೌರಭ – 2017” ಕಳೆದ 28ನೇ ತಾರೀಖಿನಂದು ಅಲ್ ಕೂಸ್ ನಲ್ಲಿರುವ ಕ್ರೆಡೆನ್ಸ್ ಹೈ ಸ್ಕೂಲ್ ಸಭಾಂಗಣದಲ್ಲಿ ಅತೀ ವಿಜೃಂಭಣೆಯಿಂದ ನಡೆಯಿತು.
ತಾಯಿನಾಡಿನಿಂದ ಅನಿವಾಸಿ ಕನ್ನಡಿಗರನ್ನು ರಂಜಿಸಲು ಬಂದ ಖ್ಯಾತ ಸ್ಯಾಕ್ಸಾಫೋನ್ ವಾದಕರಾದ ಪದ್ಮಶ್ರೀ ಡಾ. ಕದ್ರಿ ಗೋಪಾಲನಾಥ್ ಮತ್ತು ಖ್ಯಾತ ಕೊಳಲು ವಾದಕರಾದ ಪಂಡಿತ್ ಪ್ರವೀಣ್ ಗೊಡ್ಕಿಂಡಿ ಅವರ ಜುಗಲ್ಬಂದಿ ಕಾರ್ಯಕ್ರಮ ಕಲಾಪ್ರೇಮಿಗಳ ಮನಸ್ಸಿನಲ್ಲಿ ತಂಗಾಳಿಯನ್ನು ಬೀಸುವಂತೆ ಮಾಡಿದರು. ಅದೇ ರೀತಿಯಲ್ಲಿ ಕರುನಾಡಿನಿಂದ ಕನ್ನಡ ರಾಪ್ ಸಂಗೀತ ಪ್ರೇಮಿಗಳನ್ನು ರಂಜಿಸಲೆಂದೇ ಬಂದ ಆಲ್ ಓಕೆ ಕನ್ನಡ ರಾಪ್ ತಂಡ ಕಿಕ್ಕಿರಿದು ನೆರೆದಿದ್ದ ಅನಿವಾಸಿ ಕನ್ನಡಿಗರನ್ನು ಕುಣಿಸುವಂತೆ ಮಾಡಿದರು, ಅದರಲ್ಲೂ ಕನ್ನಡ ಮತ್ತು ಕರ್ನಾಟಕದ ಬಗ್ಗೆ ಹಾಡಿದ ಹಾಡುಗಳಿಗೆ ಒಳ್ಳೆಯ ಪ್ರಶಂಸೆಯನ್ನು ಪಡೆದರು ಮತ್ತು ಕನ್ನಡದ ತಂಗಾಳಿ ದೂರದ ದುಬೈಯ ಮರಳುಗಾಡಿನಲ್ಲಿ ಬೀಸುವಂತೆ ಬಾಸವಾಯಿತ್ತು ,
ಈ ಸುಂದರ ಸಂಜೆಗೆ ಮುಖ್ಯ ಅತಿಥಿಗಳಾಗಿ ಆರ್ ಸಿ ಹಾಸ್ಪಿಟಾಲಿಟಿ ಮುಖ್ಯಸ್ಥರಾದ ರವೀಶ್ ಗೌಡ ಮತ್ತು ಎಮ್ ಸ್ಕ್ವೇರ್ ಮುಖ್ಯಸ್ಥರಾದ ಮುಸ್ತಫಾ ಮೊಹಮ್ಮದ್ ಅವರು ಆಗಮಿಸಿದ್ದರು. ಇದಲ್ಲದೆ ಈ ಕಾರ್ಯಕ್ರಮಕ್ಕೆ ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ , ಎಂ ಎಲ್ ಏ ಮೊಯಿದೀನ್ ಭಾವ ಮತ್ತು ಬಿಗ್ ಬಾಸ್ ಖ್ಯಾತಿಯ ಚಿತ್ರನಟಿ ಕಾರುಣ್ಯ ರಾಮ್ ಮುಂತಾದ ಗಣ್ಯರು ಪಾಲ್ಗೊಂಡು ಕಾರ್ಯಕ್ರಮಕ್ಕೆ ಇನ್ನೆಷ್ಟು ಮೆರಗನ್ನು ನೀಡಿದರು.
ಈ ಕಾರ್ಯಕ್ರಮ ಬಹಳ ಅಚ್ಚುಕಟ್ಟಾಗಿ ಶ್ರಮಿಸಿದ ಕನ್ನಡಿಗರು ದುಬೈ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಅರುಣ್ , ಚಂದ್ರಕಾಂತ್, ಮಮತಾ ರಾಘವೇಂದ್ರ, ಶ್ರೀನಿವಾಸ್ ಅರಸ್, ಬಾಲಕೃಷ್ಣ, ಚಂದ್ರಶೇಖರ್ ಪೂಜಾರಿ, ಮಲ್ಲಿಕಾರ್ಜುನ ಅಂಗಡಿ, ವಿನೀತ್ ರಾಜ್, ದೀಪಕ್ ಸೋಮಶೇಖರ್ ಮತ್ತು ವೆಂಕಟರಮಣ ಕಾಮತ್ ಅವರಿಗೆ ವಂದನೆಗಳನ್ನು ಸಮಿತಿಯ ಹಿರಿಯರು ಮಾಡಿದರು.
ಕಾರ್ಯಕ್ರಮದ ಕೊನೆಯಲ್ಲಿ ಎಲ್ಲಾ ಗಣ್ಯರನ್ನು ಕನ್ನಡಿಗರು ದುಬೈ ಸಂಘದ ಅಧ್ಯಕ್ಷರಾದ ವೀರೇಂದ್ರ ಬಾಬು ಮತ್ತು ಮಾಜಿ ಅಧ್ಯಕ್ಷರಾದ ಸದನ್ ದಾಸ್ ಮತ್ತು ಮಲ್ಲಿಕಾರ್ಜುನ ಗೌಡರು ಪುಷ್ಪಗುಚ್ಛ ಮತ್ತು ನೆನಪಿನ ಕಾಣಿಕೆ ನೀಡಿ ಗೌರವಿಸಿ ಕಾರ್ಯಕ್ರಮನ್ನು ಮುಗಿಸಿ ಕಾರ್ಯಕ್ರಮದ ಯಶಸ್ವಿಗೆ ದುಡಿದ ಎಲ್ಲಾ ಸಮಿತಿ ಸದಸ್ಯರಿಗೂ ಮತ್ತು ಕಾರ್ಯಕ್ರಮಕ್ಕೆ ಆಗಮಿಸಿದ ಸಮಸ್ತ ಅನಿವಾಸಿ ಕನ್ನಡಿಗರಿಗೆ ವಂದನೆಗಳನ್ನು ತಿಳಿಸಿ ಕಾರ್ಯಕ್ರಮವನ್ನು ಬಹಳ ಅಚ್ಚುಕಟ್ಟಾಗಿ ಮುಗಿಸಿದರು .