News Kannada
Wednesday, October 05 2022

ಹೊರನಾಡ ಕನ್ನಡಿಗರು

ಅದ್ದೂರಿಯಾಗಿ ನೆರೆವೇರಿದ ಕರ್ನಾಟಕ ಸಂಘ ಶಾರ್ಜಾದ 15ನೇ ವಾರ್ಷಿಕೋತ್ಸವ - 1 min read

Photo Credit :

ಅದ್ದೂರಿಯಾಗಿ ನೆರೆವೇರಿದ ಕರ್ನಾಟಕ ಸಂಘ ಶಾರ್ಜಾದ 15ನೇ ವಾರ್ಷಿಕೋತ್ಸವ

ಶಾರ್ಜಾ: ಕರ್ನಾಟಕ ಸಂಘ ಶಾರ್ಜಾದ ಆಶ್ರಯದಲ್ಲಿ 62ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭ, ಕರ್ನಾಟಕ ಸಂಘ ಶಾರ್ಜಾದ 15ನೇ ವಾರ್ಷಿಕೋತ್ಸವ ಮತ್ತು “ಮಯೂರ ವಿಶ್ವ ಮಾನ್ಯಕನ್ನಡಿಗ ಪ್ರಶಸ್ತಿ” ಪ್ರಧಾನ ಸಮಾರಂಭ 2017 ನವೆಂಬರ್ 17ನೇ ತಾರೀಕು ಶುಕ್ರವಾರ ಸಂಜೆ 4.00ಗಂಟೆಯಿಂದ ಶಾರ್ಜಾ ಇಂಡಿಯನ್ ಅಸೋಸಿಯೇಶನ್ ಬೃಹತ್ ಸಭಾಂಗಣದಲ್ಲಿ ಅದ್ಧೂರಿಯಾಗಿ ನಡೆಯಿತು.

ಕನ್ನಡ ಧ್ವಜರೋಹಣದೊಂದಿಗೆ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ
ಕರ್ನಾಟಕ ಸಂಘ ಶಾರ್ಜಾದ ಅಧ್ಯಕ್ಷರು ಹಾಗೂ ಕಾರ್ಯಕಾರಿ ಸಮಿತಿಯ ಸರ್ವಸದಸ್ಯರ ಸಮ್ಮುಖದಲ್ಲಿ ಸಂಘದ ಪೋಷಕರಾದ ಮಾರ್ಕಡೆನಿಸ್ ಡಿ’ಸೋಜಾರವರು ಧ್ವಜ ಅರಳಿಸಿ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಿದರು. ಸಲಹೆಗಾರರಾದ ಎಂ. ಇ. ಮೂಳೂರು ಶುಭ ಸಂದೇಶವನ್ನು ನೀಡಿದರು.

ಕ್ಲಾಸಿಕಲ್ ರಿದಂಸ್ ತಂಡದ ವತಿಯಿಂದ ಸ್ವಾಗತ ನೃತ್ಯದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ರಾಡಿಕಲ್ ಡ್ಯಾನ್ಸ್ ಸ್ಟುಡಿಯೋ ತಂಡ, ಬಿಲ್ಲಾವಾಸ್ ದುಬಾಯಿ ತಂಡದವರ ನೃತ್ಯ ಹಾಗೂ ಊರಿನಿಂದ ಅತಿಥಿಯಾಗಿ ಆಗಮಿಸಿದ ಗಾಯಕಿ ಕು. ಲಹರಿ ಕೋಟ್ಯಾನ್, ಯು.ಎ.ಇ. ಮಟ್ಟದಲ್ಲಿ ಗಾಯನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದ ಗಾಯಕ ಗಾಯಕಿರಾದ ಕು. ಸನ್ನಿಧಿ ವಿಶ್ವನಾಥ್ ಶೆಟ್ಟಿ, ಮಧುರಾ ವಿಶ್ವನಾಥ್, ಶಾಹಿದ್ ಶಹಬಾಜ್, ಹರೀಶ್ ಶೇರಿಗಾರ್, ಸಾಯಿ ಮಲ್ಲಿಕಾ, ಕು. ಅಕ್ಷತಾರಾವ್ ಹಾಗೂ ಕು. ಅಮೋಘ ವರ್ಷ ಇವರುಗಳು ತಮ್ಮ ಸುಮಧುರ ಕಂಠದಿಂದ ಕನ್ನಡ ಚಲನಚಿತ್ರ ಗೀತೆಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದರು.

ಸಭಾ ಕಾರ್ಯಕ್ರಮವನ್ನು ಮುಖ್ಯ ಅತಿಥಿಗಳು ಜ್ಯೋತಿ ಬೆಳಗಿಸುವುದರ ಮೂಲಕ “ಮಯೂರ ವಿಶ್ವಮಾನ್ಯಕನ್ನಡಿಗ ಪ್ರಶಸ್ತಿ” ಸಮಾರಂಭಕ್ಕೆ ಚಾಲನೆ ನೀಡಿದರು. ಕರ್ನಾಟಕ ಸಂಘ ಶಾರ್ಜಾ ಅಧ್ಯಕ್ಷರಾದ ಸುಗಂಧರಾಜ್ ಬೇಕಲ್ ಸರ್ವರನ್ನು ಸ್ವಾಗತಿಸಿದರು.

2004ರಿಂದ ಮಯೂರ ವಿಶ್ವಮಾನ್ಯಕನ್ನಡಿಗ ಪ್ರಶಸ್ತಿ ಪುರಸ್ಕಾರ ಪಡೆದಿರುವವರನ್ನು ವೇದಿಕೆಗೆ ಬರಮಾಡಿಕೊಂಡು ಕರ್ನಾಟಕ ಸರ್ಕಾರದ ಮಾನ್ಯ ಸಚಿವರಾದ ಯು. ಟಿ. ಖಾದರ್ ಅವರು ಪದಕ ಪ್ರದಾನಿಸಿದರು. ಪದಕ ಪಡೆದಿರುವ ಪುರಸ್ಕೃತರು ಸುಜಾತ ಶ್ಯಾಂ ಸುಂದರ್, ಮಾರ್ಕಡೆನಿಸ್ ಡಿ’ಸೋಜಾ, ಇರ್ಶಾದ್ ಮೂಡಬಿದ್ರಿ, ಬಿ. ಜಿ. ಮೋಹನ್ ದಾಸ್, ಬಿ. ಕೆ. ಗಣೇಶ್ ರೈ, ಪ್ರಕಾಶ್ ರಾವ್ ಪಯ್ಯಾರ್, ಜೇಮ್ಸ್ ಮೆಂಡೋನ್ಸಾ, ಶೋಧನ್ ಪ್ರಸಾದ್, ಹರೀಶ್ ಶೇರಿಗಾರ್, ಎಂ. ಇ. ಮೂಳೂರ್, ಸುಧೀರ್ ಕುಮಾರ್ ಶೆಟ್ಟಿ, ಪ್ರವೀಣ್ ಕುಮಾರ್ ಶೆಟ್ಟಿ, ಜೋಸೆಫ್ ಮಥಿಯಸ್.

ಪ್ರತಿಷ್ಠಿತ “ಮಯೂರ ವಿಶ್ವಮಾನ್ಯಕನ್ನಡಿಗ ಪ್ರಶಸ್ತಿ” ಸರ್ವೋತ್ತಮ ಶೆಟ್ಟಿಯವರಿಗೆ ಪ್ರಧಾನ
ಕರ್ನಾಟಕ ಸಂಘ ಶಾಜಾ ಪ್ರತಿವರ್ಷ ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಸಾಧನೆ ಮಾಡಿರುವ ಕನ್ನಡಿಗರನ್ನು ಗುರುತಿಸಿ ನೀಡಲಾಗುತಿರುವ ಪ್ರತಿಷ್ಠಿತ “ಮಯೂರ ವಿಶ್ವಮಾನ್ಯಕನ್ನಡಿಗ ಪ್ರಶಸ್ತಿ” ಯನ್ನು ಡಾ. ಬಿ. ಆರ್. ಶೆಟ್ಟಿಯವರು ಮತ್ತು ಕರ್ನಾಟಕ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಮಾನ್ಯ ಸಚಿವರಾದ ಯು. ಟಿ. ಖಾದರ್ ಆಹ್ವಾನಿತ ಅತಿಥಿಗಳು, ಗಣ್ಯಾತಿಗಣ್ಯರ ಸಮ್ಮುಖದಲ್ಲಿ ಸಮ್ಮುಖದಲ್ಲಿ ಪ್ರದಾನಿಸಿದರು.

See also  ಕರ್ನಾಟಕ ಸಂಘ ಕತಾರ್ ಅಧ್ಯಕ್ಷರಾಗಿ ವೆಂಕಟರಾವ್ ಆಯ್ಕೆ

ಸಮಾರಂಭದಲ್ಲಿ ಗೌರವ ಅತಿಥಿಗಳಾದ ವಂದನೀಯ ಗುರುಗಳಾದ ಮ್ಯಾಕ್ಸಿಮ್ ಪಿಂಟೊ, ಶಾರ್ಜಾ ಇಂಡಿಯನ್ ಅಸೋಸಿಯೇಶನ್ ಅಧ್ಯಕ್ಷರಾದ ಅಡ್ವಕೇಟ್ ವೈ. ಎ. ರಹೀಂ, ಯು.ಎ.ಇ. ಎಕ್ಸ್ಚೆಂಜ್ ಅಧ್ಯಕ್ಷರಾದ ಸುಧೀರ್ ಕುಮಾರ್ ಶೆಟ್ಟಿ, ಕರ್ನಾಟಕ ಅನಿವಾಸಿ ಭಾರತೀಯ ಸಮಿತಿಯು.ಎ.ಇ. ಯಅಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿ, ಅಜ್ಮಾನ್ ಗಲ್ಫ್ ಮೆಡಿಕಲ್ ಕಾಲೇಜು ಆಸ್ಪತ್ರೆಯ ವತಿಯಿಂದ ಡಾ. ಸದಾಶಿವ ಬಂಗೇರಾ, ಪ್ರಮುಖ ಪ್ರಾಯೋಜಕರು ಹರೀಶ್ ಶೇರಿಗಾರ್, ಕರ್ನಾಟಕ ಸಂಘ ಶಾರ್ಜಾ ಪೋಷಕರು ಮಾರ್ಕ್ ಡೆನಿಸ್ ಡೆನಿಸ್, ಕರ್ನಾಟಕ ಸಂಘ ಶಾರ್ಜಾ ಅಧ್ಯಕ್ಷರಾದ ಸುಗಂಧರಾಜ್ ಬೇಕಲ್ ಸನ್ಮಾನ ಪ್ರಕ್ರಿಯೆಯಲ್ಲಿ ಭಾಗಿಗಳಾಗಿದ್ದರು. ಗಣ್ಯ ಅತಿಥಿಗಳನ್ನು ಮೆರವಣಿಗೆ ಮೂಲಕ ಸಭಾಂಗಣಕ್ಕೆ ಬರಮಾಡಿಕೊಂಡು ಸನ್ಮಾನ ಕಾರ್ಯಕ್ರಮದ ಪ್ರಾರಂಭದಲ್ಲಿ ಇರ್ಶಾದ್ ಮೂಡಬಿದರೆಯವರು ಸನ್ಮಾನ ಸಮಾರಂಭಕ್ಕೆ ರಚಿಸಿದ ಚುಟುಕುಗಳನ್ನು ವಾಚಿಸಿ ಬಿ. ಕೆ. ಗಣೇಶ್ ರೈ ಕಾರ್ಯಕ್ರಮ ನಿರೂಪಣೆ ಕಾರ್ಯವನ್ನು ನೆರವೇರಿಸಿದರು.

ಕರ್ನಾಟಕ ಸಂಘ ಶಾರ್ಜಾ ಸದಸ್ಯರಾದ ಶಶಿಕಾಂತ್ ದಂಪತಿಗೆ ಸನ್ಮಾನ
ಕರ್ನಾಟಕ ಸಂಘ ಶಾರ್ಜಾ ಸದಸ್ಯರಾದ ಶಶಿಕಾಂತ್ ಹಾಗೂ ಲತಾ ಶಶಿಕಾಂತ್ ಕಾನಂಗಿ ದಂಪತಿಗಳನ್ನು ಶಾಲು ಹೊದಿಸಿ, ಸ್ಮರಣಿಕೆ, ಸನ್ಮಾನ ಪತ್ರ ನೀಡಿ ಗೌರವಿಸಲಾಯಿತು.

ಯಕ್ಷಗಾನ ಕಲಾವಿದರು ಗುರುಗಳಾದ ಶೇಖರ್ ಡಿ. ಶೆಟ್ಟಿಗಾರ್ ಕಿನ್ನಿಗೋಳಿ ಅವರಿಗೆ “ಯಕ್ಷ ಮಯೂರ” ಬಿರುದು ಪ್ರದಾನ
ಯು.ಎ.ಇಯಲ್ಲಿ ಹಲವಾರು ವರ್ಷಗಳಿಂದ ಯಕ್ಷಗಾನ ಕಲೆಗೆ ಶಾಸ್ತ್ರೀಯ ಸ್ಪರ್ಶ ನೀಡಿ ಮಕ್ಕಳಿಂದ ವಿವಿಧ ವಯೋಮಿತಿಯ ಹವ್ಯಾಸಿ ಕಲಾವಿದರನ್ನು ಪೂರ್ಣ ಪ್ರಮಾಣದ ಕಲಾವಿದರನ್ನಾಗಿ ತಯಾರುಗೊಳಿಸಿರುವ ಶೇಖರ್ ಡಿ. ಶೆಟ್ಟಿಗಾರ್ ಕಿನ್ನಿಗೋಳಿ ಅವರಿಗೆ “ಯಕ್ಷ ಮಯೂರ” ಬಿರುದು ಪ್ರಧಾನಿಸಿ, ಸನ್ಮಾನಿಸಿ ಗೌರವಿಸಲಾಯಿತು.

ಗೌರವ ಅತಿಥಿಗಳಿಗೆ ಗೌರವ ಸಮರ್ಪಣೆ
ಸಮಾರಂಭದ ಮುಖ್ಯ ಅತಿಥಿಯಾಗಿ ಆಗಮಿಸಿದ ಡಾ. ಬಿ. ಆರ್. ಶೆಟ್ಟಿಯವರಿಗೆ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಗೌರವ ಅತಿಥಿಗಳಾಗಿ ಆಗಮಿಸಿದ ಕರ್ನಾಟಕ ಸರ್ಕಾರದ ಮಾನ್ಯ ಸಚಿವರಾದ ಯು. ಟಿ. ಖಾದರ್, ಧರ್ಮಗುರುಗಳಾದ ವಂದನೀಯ ಮ್ಯಾಕ್ಸಿಮ್ ಪಿಂಟೊ, ಶಾರ್ಜಾ ಇಂಡಿಯನ್ ಅಸೋಸಿಯೇಶನ್ ಅಧ್ಯಕ್ಷರಾದ ಅಡ್ವಕೇಟ್ ವೈ. ಎ. ರಹೀಂ, ಜಿ.ಎಂ.ಸಿ. ಹಾಸ್ಪಿಟಲ್ ಡಾ. ಸದಾಶಿವ ಬಂಗೆರಾ, ಇವರುಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.

ಸಮಾರಂಭದಲ್ಲಿ ಭಾಗಿಗಳಾಗಿರುವ ಕಲಾವಿದರು, ಗಾಯಕರು, ಪ್ರಾಯೋಜಕರು, ಸಂಘ ಸಂಸ್ಥೆಗಳ ಮುಖ್ಯಸ್ಥರು, ಮಾಧ್ಯಮ ಪ್ರತಿನಿಧಿಗಳನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಜನಮನ ಸೆಳೆದ “ಮಯೂರ ನಾಟ್ಯ ಮಂಜರಿ” ಯು.ಎ.ಇ. ಮಟ್ಟದ ಕನ್ನಡ ಸಮೂಹ ನೃತ್ಯ ಸ್ಪರ್ಧೆ
ಸಂಘಟನೆಗಳ ನೃತ್ಯ ತಂಡಗಳಿಗೆ ಯು.ಎ.ಇ. ಮಟ್ಟದಲ್ಲಿ ಕನ್ನಡ ಸಮೂಹ ನೃತ್ಯ ಸ್ಪರ್ಧೆಯನ್ನು ಸುಜಾತ ಶ್ಯಾಂಸುಂದರ್ ರಾವ್, ಸೌಮ್ಯ ಸುಧೀರ್, ಗುರುವಿಂದರ್ ಸಿಂಗ್ ಅವರು ತೀರ್ಪುಗಾರರಾಗಿ ಸ್ಪರ್ಧೆಯನ್ನು ನಡೆಸಿಕೊಟ್ಟರು. “ಮಯೂರ ನಾಟ್ಯ ಮಂಜರಿ” ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡ ತಂಡ ಒಶಿಯನ್ ಕಿಡ್ಸ್, ನಂತರದ ಸ್ಥಾನಗಳು ನಾಟ್ಯ ಲಾಸ್ಯ, ರಿದಂಸ್ ಶಾರ್ಜಾ, ಅತ್ಯುತ್ತಮ ನೃತ್ಯ ನಿರ್ದೇಶನ ಒಶಿಯನ್ ಕಿಡ್ಸ್ ನ ಪ್ರವೀಣ್, ಅತ್ಯುತ್ತಮ ಪ್ರದರ್ಶನ ನೀಡಿರುವ ತಂಡ ಒಶಿಯನ್ ಕಿಡ್ಸ್. ಸಮಾರಂಭದ ಕೊನೆಯಲ್ಲಿ ಪ್ರಶಸ್ತಿ ಬಹುಮಾನ ನೀಡಿ ಗೌರವಿಸಲಾಯಿತು.

See also  ಅಲ್ ಇಹ್ಸಾನ್ ಮಹಿಳಾ ಕಾಲೇಜು ಕಟ್ಟಡ ನಿರ್ಮಾಣ ಸಮಿತಿಯ ಅಧ್ಯಕ್ಷರಾಗಿ ಎಂ.ಇ .ಮೂಳೂರು ಪುನರಾಯ್ಕೆ

ಸಮಾರಂಭದ ಕಾರ್ಯಕ್ರಮ ನಿರೂಪಣೆಯನ್ನು ಅತ್ಯಂತ ಸೊಗಸಾಗಿ ನಿರೂಪಣೆ ಮಾಡಿದವರು ಆರತಿ ಆಡಿಗ ಮತ್ತು ಊರಿನಿಂದ ಅತಿಥಿಯಾಗಿ ಆಗಮಿಸಿದ ಯೋಗೇಶ್ ನಿರ್ಜಾನ್.
ಕರ್ನಾಟಕ ಸಂಘ ಶಾರ್ಜಾದ ಸರ್ವ ಸದಸ್ಯರ ಹಲವು ದಿನಗಳ ಪೂರ್ವತಯಾರಿ ಕಾರ್ಯಕ್ರಮದ ಯಶಸ್ಸಿಗೆ ಕಾರಣವಾಯಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು