News Kannada
Monday, October 03 2022

ಹೊರನಾಡ ಕನ್ನಡಿಗರು

ಡಾ. ಸುನೀತಾ ಎಂ. ಶೆಟ್ಟಿ ಅವರಿಗೆ `ತುಳುರತ್ನ’ ಬಿರುದು - 1 min read

Photo Credit :

ಡಾ. ಸುನೀತಾ ಎಂ. ಶೆಟ್ಟಿ ಅವರಿಗೆ `ತುಳುರತ್ನ' ಬಿರುದು

ಮುಂಬಯಿ: ಹಿರಿಯ ಸಾಹಿತಿ ಡಾ. ಸುನೀತಾ ಎಂ. ಶೆಟ್ಟಿ ಅವರು ತುಳುನಾಡೋಚ್ಚಯ-2017 ಇದರ ಪ್ರತಿಷ್ಠಿತ “ತುಳು ರತ್ನ’ ಬಿರುದು ಪ್ರಶಸ್ತಿ ಗೆ ಆಯ್ಕೆಯಾಗಿದ್ದಾರೆ.

ಡಿ. 23 ಮತ್ತು ಡಿ. 24 ಮಂಗಳೂರಿನ ಪಿಲಿಕುಲದಲ್ಲಿ ತುಳುನಾಡಿನಲ್ಲಿ ಜಾತಿ, ಮತ, ಭಾಷಾ ಸೌಹಾರ್ದತೆ ಎಂಬ ನೆಲೆಗಟ್ಟಿನಲ್ಲಿ ವಿಶ್ವ ತುಳುವೆರೆ ಆಯನೊ ಕೂಟ ಮತ್ತು ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮ ಮತ್ತು ವಿವಿಧ ಸಂಘ-ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ತುಳುನಾಡೋಚ್ಚಯ-2017 ಸಂಭ್ರಮವು ನಡೆಯಲಿದ್ದು, ಡಿ. 24ರಂದು ಮಧ್ಯಾಹ್ನ 12ರಿಂದ ನಡೆಯಲಿರುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಡಾ. ಸುನೀತಾ ಎಂ. ಶೆಟ್ಟಿ ಅವರಿಗೆ ಗಣ್ಯರ ಉಪಸ್ಥಿತಿಯಲ್ಲಿ “ತುಳುರತ್ನ’ ಬಿರುದು ಪ್ರದಾನಿಸಿ ಗೌರವಿಸಲಾಗುವುದು.

ಮಂಗಳೂರು ಕಳವಾರು ಎಂಬಲ್ಲಿ ಜನಿಸಿದ ಡಾ. ಸುನೀತಾ ಎಂ. ಶೆಟ್ಟಿ ಅವರು ಮಂಬಯಿಯ ಹಿರಿಯ ಸಾಹಿತಿ, ಕವಿ, ಲೇಖಕಿಯಾಗಿ ಜನಪ್ರಿಯರಾದರು. ಉತ್ತಮ ವಾಗ್ಮಿಯಾಗಿರುವ ಡಾ. ಸುನೀತಾ ಎಂ. ಶೆಟ್ಟಿ ಅವರು ವೃತ್ತಿಯಲ್ಲಿ ಪ್ರಾಧ್ಯಾಪಕಿ. `ಶಿವರಾಮ ಕಾರಂತರ ಕಾದಂಬರಿಗಳಲ್ಲಿ ಸ್ತ್ರೀ’ ಎಂಬ ಸಂಶೋಧನ ಮಹಾಪ್ರಬಂಧಕ್ಕೆ ಪಿಎಚ್‌ಡಿ ಪದವಿಯನ್ನು ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದಿಂದ ಪಡೆದಿದ್ದಾರೆ.

ವಡಾಲದ ಎನ್‌ಕೆಇಎಸ್‌ ಹೈಸ್ಕೂಲ್‌, ಮಾಟುಂಗದ ಖಾಲ್ಸಾ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸಿದ ಇವರು ಮುಂಬಯಿ ವಿಶ್ವವಿದ್ಯಾಲಯದಲ್ಲೂ ದಶಕಗಳಿಗೂ ಹೆಚ್ಚು ಕಾಲ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.

See also  ಗಣೇಶ್ ರೈ ಮುಡಿಗೆ ವಿಶ್ವ ಮಾನ್ಯ ಪ್ರಶಸ್ತಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು