News Kannada
Sunday, December 04 2022

ಹೊರನಾಡ ಕನ್ನಡಿಗರು

ಯಕ್ಷಪ್ರಿಯ ಬಳಗದ 3ನೇ ವಾರ್ಷಿಕೋತ್ಸವ ಸಮಾರಂಭ

Photo Credit :

ಯಕ್ಷಪ್ರಿಯ ಬಳಗದ 3ನೇ ವಾರ್ಷಿಕೋತ್ಸವ ಸಮಾರಂಭ

ಥಾಣೆ: ನಲಸೋಪಾರ ಪಶ್ಚಿಮದ ಗ್ಯಾಲಕ್ಸಿ ಹೋಟೆಲ್ ಸಭಾಗೃಹದಲ್ಲಿ ಯಕ್ಷಪ್ರಿಯ ಬಳಗ ಮೀರಾ ಭಾಯಂದರ್ ಇದರ 3ನೇ ವಾರ್ಷಿಕೋತ್ಸವು ನೆರವೇರಿತು.

ಎ.17ರಂದು ನಡೆದ ವಾರ್ಷಿಕೋತ್ಸವದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಣಿಕಂಠ ಸೇವಾ ಸಮಿತಿ ವಸಾಯಿ ಇದರ ಗೌರವ ಅಧ್ಯಕ್ಷ ಕರ್ನೂರು ಶಂಕರ ಆಳ್ವ ಅವರು, ಇಂದಿನ ದಿನಗಳಲ್ಲಿ ಯಕ್ಷಗಾನವು ಕಾಲಮಿತಿಯೊಳಗೆ ಪ್ರದರ್ಶನವಾಗುತ್ತಲಿದ್ದರೂ ಮೂಲ ಪರಂಪರೆಗೆ ಧಕ್ಕೆಯಾಗಿಲ್ಲ. ಯಕ್ಷಗಾನದಲ್ಲಿ ತುಳುನಾಡಿನ ಸಂಸ್ಕೃತಿಯಿದೆ. ಯುವ ಪೀಳಿಗೆಗೆ ಯಕ್ಷಗಾನದಲ್ಲಿ ತರಬೇತಿ ಪಡೆಯುತ್ತಿರುವುದು ಉತ್ತಮ ಬೆಳವಣಿಗೆ ಎಂದರು.

ಯಕ್ಷಪ್ರಿಯ ಬಳಗದ ರೂವಾರಿ, ನೃತ್ಯಗುರು ನಾಗೇಶ್ ಪೊಳಲಿ ಅವರಿಗೆ ಬಳಗದ ಕಲಾವಿದರು ಗುರುವಂದನೆ ಸಲ್ಲಿಸಿ, ಗೌರವಿಸಿದರು.

ಸಭಾ ಕಾರ್ಯಕ್ರಮದಲ್ಲಿ ಮೀರಾ ಭಾಯಂದರ್ ಬಿಜೆಪಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಲೀಲಾ ದೇವರಾಜ್ ಪೂಜಾರಿ, ಬಂಟರ ಸಂಘದ ವಸಾಯಿ-ಡಹಾಣು ಪ್ರಾದೇಶಿಕ ಸಮಿತಿಯ ಸಂಚಾಲಕ ಶಶಿಧರ್ ಕೆ. ಶೆಟ್ಟಿ, ಬಿಲ್ಲವರ ಅಸೋಸಿಯೇಶನ್ ಮೀರಾರೋಡ್ ಸ್ಥಳೀಯ ಸಮಿತಿಯ ಉಪಕಾರ್ಯಾಧ್ಯಕ್ಷ ಸುಂದರ ಪೂಜಾರಿ ಇವರನ್ನು ಸನ್ಮಾನಿಸಲಾಯಿತು.

See also  ಕಿಚ್ಚ ಸುದೀಪ್ ರವರಿಗೆ ದುಬಾಯಿಯಲ್ಲಿ "ಕನ್ನಡ ಕಲಾ ತಿಲಕ" ಬಿರುದು ಪ್ರದಾನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು