ವಿಟ್ಲ: ಇಲ್ಲಿನ ಸಮೀಪದ ಕುಕ್ಕುತ್ತಡ್ಕ ನಿವಾಸಿಯೊಬ್ಬರು ಹೃದಯಾಘಾತದಿಂದ ಸೌದಿ ಅರೇಬಿಯಾದ ರಿಯಾದ್ ನಲ್ಲಿ ಸಾವನ್ನಪ್ಪಿದ ಘಟನೆ ಶುಕ್ರವಾರ ನಡೆದಿದೆ. ಮೃತ ವ್ಯಕ್ತಿಯನ್ನು ಮಹಮೂದ್ (55) ಎಂದು ಗುರುತಿಸಲಾಗಿದೆ.
ಕುಕ್ಕುತ್ತಡ್ಕ ಮೋನು ಬ್ಯಾರಿ ಅವರ ಪುತ್ರರಾಗಿರುವ ಮಹಮೂದ್ ಕಳೆದ 18 ವರ್ಷಗಳಿಂದ ಗಲ್ಫ್ ನಲ್ಲಿ ಉದ್ಯೋಗದಲ್ಲಿದ್ದರು.
ಇತ್ತೀಚೆಗೆ ಊರಿಗೆ ರಜೆಯಲ್ಲಿ ಬಂದು ಸೌದಿಗೆ ಮರಳಿದ್ದರು. ಅವರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.