News Kannada
Tuesday, February 07 2023

ಹೊರನಾಡ ಕನ್ನಡಿಗರು

ಕುಲಾಲ ಸಂಘ ನವಿಮುಂಬಯಿ ಸಮಿತಿಯ ವಾರ್ಷಿಕ ಸ್ನೇಹ ಸಮ್ಮಿಲನ

Photo Credit :

ಕುಲಾಲ ಸಂಘ ನವಿಮುಂಬಯಿ ಸಮಿತಿಯ ವಾರ್ಷಿಕ ಸ್ನೇಹ ಸಮ್ಮಿಲನ

ಮುಂಬಯಿ: ಕುಲಾಲ ಸಂಘ ಮುಂಬಯಿ ಇದರ ನವಿಮುಂಬಯಿ ಸ್ಥಳೀಯ ಸಮಿತಿಯ ವಾರ್ಷಿಕ ಸ್ನೇಹ ಸಮ್ಮಿಲನವು ಅ. 21ರಂದು ವಾಶಿಯ ನವಿಮುಂಬಯಿ ಕನ್ನಡ ಸಂಘದ ಸಭಾಗೃಹದಲ್ಲಿ ಸಂಘದ ಉಪಾಧ್ಯಕ್ಷರಾದ ರಘು ಎ ಮೂಲ್ಯ ಇವರ ಅಧ್ಯಕ್ಷತೆಯಲ್ಲಿ ಜರಗಿತು.

ಈ ಸಂದರ್ಭದಲ್ಲಿ ಹಿರಿಯ ಕಾರ್ಯಕರ್ತರಾದ ಕೃಷ್ಣ ಕೆ ಮೂಲ್ಯ , ಖಾರ್ಘರ್ ಮತ್ತು ಸುಮಿತ್ರಾ ರಾಜು ಸಾಲ್ಯಾನ್ ಇವರನ್ನು ಸನ್ಮಾನಿಸಲಾಯಿತು. ಅಲ್ಲದೆ ಸಮಾಜದ 6 ಮಕ್ಕಳನ್ನು ದತ್ತು ಸ್ವೀಕರಿಸಲಾಯಿತು.

ನಾನಿಲ್ತಾರ್ ಕುಲಾಲ ಅಭಿಮಾನಿ ಬಳಗದ ವತಿಯಿಂದ ಮಂಗಳೂರು ಕುಲಾಲ ಭವನಕ್ಕೆ ಒಂದು ಲಕ್ಷದ ದೇಣಿಗೆ ಹಸ್ತಾಂತರಿಸಲಾಯಿತು. ನವಿಮುಂಬಯಿ ಸ್ಥಳೀಯ ಮಹಿಳಾ ವಿಭಾಗದ ವತಿಯಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಮೂಡಬಿದ್ರೆಯ ರಕ್ಷಿತಾ ಕುಲಾಲ್ ಗೆ 20 ಸಾವಿರ ರೂ. ಧನಸಹಾಯ ಹಸ್ತಾಂತರಿಸಲಾಯಿತು. ಸ್ಥಳೀಯ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸತ್ಕರಿಸಲಾಯಿತು.

ಕುಲಾಲ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಕರುಣಾಕರ್ ಬಿ. ಸಾಲ್ಯಾನ್ ಅವರು ಮಾತನಾಡುತ್ತಾ ಸ್ಥಾಪಕ ಸದಸ್ಯರು ಒಳ್ಳೆಯ ಉದ್ದೇಶವಿಟ್ಟು ರಚಿಸಿದ ಈ ಸ್ಥಳೀಯ ಸಮಿತಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಜನರ ಮನೆಮನಕ್ಕೆ ತಲುಪುವಲ್ಲಿ ಯಶಸ್ವಿಯಾಗಿದೆ. ನಮ್ಮ ಧರ್ಮ ಸಂಸ್ಕೃತಿಯ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸುವುದು ಪಾಲಕರ ಕರ್ತವ್ಯ. ಯುವಪೀಳಿಗೆ ಸಂಘದ ಎಲ್ಲಾ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದೆ. ಇದು ಉತ್ತಮ ಬೆಳವಣಿಗೆ. ಮಂಗಳೂರಿನ ಕುಲಾಲ ಭವನ ಕೆಲಸ ವೇಗವಾಗಿ ಸಾಗುತ್ತಿದೆ. ಆದಷ್ಟು ಬೇಗ ಲೋಕಾರ್ಪಣೆಗೊಳ್ಳಲು ನಿಮ್ಮೆಲ್ಲರ ಸಹಕಾರ ಅಗತ್ಯ. ಸಂಘದ ವಿದ್ಯಾರ್ಥಿ ಸಹಾಯಧನದ ಪ್ರಯೋಜನ ಪಡೆದುಕೊಳ್ಳಿ ಎಂದರು.

ಸಂಘದ ಗೌರವ ಕೋಶಾಧಿಕಾರಿ ಜಯ ಎಸ್ ಅಂಚನ್ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ ನವಿಮುಂಬಯಿ ಸ್ಥಳೀಯ ಯುವಕರು ನೀಡಿದ ದತ್ತು ಸ್ವೀಕಾರ ಎಲ್ಲರಿಗೆ ಮಾದರಿ. ಕುಲಾಲ ಭವನದ ಧನಸಹಾಯದಲ್ಲಿ ಸ್ಥಳೀಯ ಸಮಿತಿ ಹೆಚ್ಚು ಮುತುವರ್ಜಿಯಲ್ಲಿ ಕೆಲಸಮಾಡುತ್ತಿದೆ. ಸಮಾಜ ಬಾಂಧವರು ಇನ್ನಷ್ಟು ಸಹಾಯಧನ ನೀಡಿ ಮಂಗಳೂರು ಕುಲಾಲ ಭವನದ ಕಾರ್ಯದಲ್ಲಿ ಕೈಜೋಡಿಸಿ ಎಂದರು.

ಸಂಘದ ಮಾಜಿ ಅಧ್ಯಕ್ಷರಾದ ಗಿರೀಶ್ ಬಿ ಸಾಲ್ಯಾನ್ ಮಾತನಾಡಿ, ಸಂಘಟನೆಯನ್ನು ಬಲಿಷ್ಠ ಮಾಡುವುದೇ ಸ್ಥಳೀಯ ಸಮಿತಿಯ ಉದ್ದೇಶ. ಯುವ ಪೀಳಿಗೆ ಸಕ್ರೀಯವಾಗಿ ಪಾಲ್ಗೊಳ್ಳುತ್ತಿದ್ದಾರೆ. ಮಕ್ಕಳನ್ನು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಹೆಚ್ಚು ಪ್ರೋತ್ಸಾಹಿಸಬೇಕು. ಮಂಗಳೂರು ಭವನ ಆದಷ್ಟು ಬೇಗ ಲೋಕಾರ್ಪಣೆಗೊಳ್ಳುವತ್ತ ನಾವು ಪ್ರಯತ್ನಿಸುತ್ತಿದ್ದೇವೆ. ಸದ್ಯದಲ್ಲೇ ಜ್ಯೋತಿಯ ಪೂನಾ ಬ್ರ್ಯಾಂಚ್ ಸ್ಥಾಪನೆಯಾಗಲಿದೆ. ಸಮಾಜ ಬಾಂಧವರು ಸ್ವಂತ ವ್ಯಾಪಾರದತ್ತ ಹೆಚ್ಚು ಒಲವು ತೋರಿಸಿ ಅದಕ್ಕೆ ಬೇಕಾಗುವ ಬಂಡವಾಳವನ್ನು ಜ್ಯೋತಿ ಬ್ಯಾಂಕ್ ನಿಂದ ಸಾಲದ ಸವಲತ್ತಿನ ಮುಖಾಂತರ ಪಡೆದು ಅಭಿವೃದ್ಧಿ ಹೊಂದಿ ಸಮಾಜಕ್ಕೆ ಮಾದರಿಯಾಗಬೇಕು. ನಾನಿಲ್ತಾರ್ ಕುಲಾಲ ಅಭಿಮಾನಿ ಬಳಗದ ದೇಣಿಗೆಗೆ ನಾವು ಚಿರಋಣಿ ಎಂದರು.

ಮಹಿಳಾ ವಿಭಾಗದ ಉಪಕಾರ್ಯಾಧ್ಯಕ್ಷೆ ಸುಚಿತ್ರಾ ಡಿ ಬಂಜನ್, ಅಮೂಲ್ಯ ಸಂಪಾದಕ ಶಂಕರ್ ವೈ ಮೂಲ್ಯ, ಸಂಘದ ಠಾಣೆ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಡಿ. ಐ ಮೂಲ್ಯ, ಚರ್ಚ್ ಗೇಟ್ – ದಹಿಸರ್ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ, ಗಣೇಶ್ ಸಾಲ್ಯಾನ್, ಸಿ.ಎಸ್.ಟಿ. ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಶೇಖರ್ ಎಸ್ ಮೂಲ್ಯ , ಮೀರಾ ವಿರಾರ್ ಸ್ಥಳೀಯ ಸಮಿತಿಯ ಕಾರ್ಯದರ್ಶಿ ಮೋಹನ್ ಬಂಜನ್ ಮಾತನಾಡುತ್ತಾ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

See also  ಅಬುಧಾಬಿ ಕರ್ನಾಟಕ ಸಂಘದ ಆಶ್ರಯದಲ್ಲಿ ಅದ್ಧೂರಿ ಕನ್ನಡ ರಾಜ್ಯೋತ್ಸವ

ಅಧ್ಯಕ್ಷತೆಯನ್ನು ವಹಿಸಿದ ರಾಘು ಎ ಮೂಲ್ಯ ಪಾದೆಬೆಟ್ಟು ಅವರು ಮಾತನಾಡಿ ಕುಲಾಲ ಸಮಾಜದ ಅಭಿವೃದ್ಧಿಯಲ್ಲಿ ಎಲ್ಲರೂ ಒಟ್ಟಗೆ ಚಿಂತನೆ ಮಾಡುವ ಅಗತ್ಯವಿದೆ. ಸ್ಥಳೀಯ ಯುವಕರು ಸ್ವಯಂ ಇಚ್ಛೆಯಿಂದ ನಮ್ಮೊಂದಿಗೆ ಸಾಮಾಜಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎನ್ನಲು ಹರ್ಷವಾಗುತ್ತಿದೆ. ಈ ವರ್ಷ ಯುವಕರೇ ಮಕ್ಕಳನ್ನು ದತ್ತು ಪಡೆದು ಇತರರಿಗೆ ಮಾದರಿಯಾಗಿದ್ದಾರೆ. ಇದೇ ರೀತಿ ತಮ್ಮ ವಿದ್ಯಾಭ್ಯಾಸ ಪೂರ್ಣಗೊಂಡು ಕೆಲಸಕ್ಕೆ ಸೇರಿದ ಯುವಕರು ಸಮಾಜದ ಬಡ ವಿದ್ಯಾರ್ಥಿಗಳಿಗೆ ಸಹಾಯಮಾಡಬೇಕು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಅವರಿಗೆ ಅಭಿನಂದನೆಗಳು. ಕುಲಾಲ ಸಮಾಜ ಧರ್ಮ ಸಂಸ್ಕೃತಿ ಆಚಾರ ವಿಚಾರಗಳನ್ನು ಗೌರವಿಸುವ ಸಮಾಜ. ಯುವಕರು ಹಿರಿಯರಿಗೆ ಗೌರವ ಕೊಡುತ್ತಾ ಅವರ ಮಾರ್ಗದರ್ಶನದಲ್ಲಿ ತನ್ನ ಲಕ್ಷ್ಯದತ್ತ ಸಾಗಿರಿ. ಮಹಿಳಾ ವಿಭಾಗದ ವೈದ್ಯಕೀಯ ಧನಸಹಾಯ ಶ್ಲಾಘನೀಯ. ಎಲ್ಲಾ ಸ್ಥಳೀಯ ಸಮಿತಿಗಳು ಇತರರಿಗೆ ಮಾದರಿಯಾಗುವಂತಹ ಕೆಲಸಗಳನ್ನು ಮಾಡಬೇಕು, ಆಗ ಮಾತ್ರ ಸಂಘಟನೆ ಬಲಿಷ್ಟವಾಗಲು ಸಾಧ್ಯ ಎಂದರು.

ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ವಾಸು ಎಸ್ ಬಂಗೇರ ಸ್ವಾಗತಿಸಿದರೆ, ಬೇಬಿ ವಿ ಬಂಗೇರ, ಪದ್ಮ ಎಲ್ ಮೂಲ್ಯ ಮತ್ತು ಉಷಾ ಆರ್ ಮೂಲ್ಯ ಪ್ರಾರ್ಥನೆಗೈದರು. ಚಿತ್ರಕಲಾ ಸ್ಪರ್ಧೆಯ ತೀರ್ಪುಗಾರರಾಗಿ ರಮೇಶ್ ಬಂಜನ್ ಥಾಣೆ ಮತ್ತು ಶ್ರುತಿ ಜೆ ಅಂಚನ್ ಸಹಕರಿಸಿದರು. ಸನ್ಮಾನಿತರ ಪರಿಚಯವನ್ನು ಮಾಲತಿ ಜೆ ಅಂಚನ್ ಮತ್ತು ಕೃಪೇಶ್ ಕುಲಾಲ್ ಮಾಡಿದರು.

ಸಭಾ ಕಾರ್ಯಕ್ರಮವನ್ನು ಎಲ್ ಆರ್ ಮೂಲ್ಯ ಮತ್ತು ಪಿ ಶೇಖರ್ ಮೂಲ್ಯ ನಿರೂಪಿಸಿದರೆ, ಸುರೇಶ್ ಕೆ ಕುಲಾಲ್ ಧನ್ಯವಾದವಿತ್ತರು. ಸಾಂಸ್ಕೃತಿಕ ಕಾರ್ಯಕ್ರಮವನ್ನು ಶಶಿಕುಮಾರ್ ವಿ. ಕುಲಾಲ್ ಮತ್ತು ಸೂರಜ್ ಎಸ್ ಕುಲಾಲ್ ನಿರೂಪಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸ್ಥಳೀಯ ಮಕ್ಕಳಿಂದ ಮತ್ತು ಸದಸ್ಯರಿಂದ ವಿವಿಧ ಮನೋರಂಜನಾ ಕಾರ್ಯಕ್ರಮ ನಡೆಯಿತು. ಶಶಿಕುಮಾರ್ ವಿ. ಕುಲಾಲ್ ರಚಿಸಿ ನಿರ್ದೇಶಿಸಿದ ಸ್ಥಳೀಯ ಸಮಿತಿಯ ಮಕ್ಕಳ ಅಭಿನಯದ “ಬಲೀಂದ್ರೆ” ಪೌರಾಣಿಕ ತುಳು ಕಿರುನಾಟಕ ಮತ್ತು ಸ್ಥಳೀಯ ಸದಸ್ಯರು ಅಭಿನಯಿಸಿದ “ಕಲ್ಜಿಗದ ಕರ್ಣೇ” ಎಂಬ ತುಳು ಸಾಮಾಜಿಕ ನಾಟಕಗಳು ಜನಮನ ರಂಜಿಸಿತು .

ವರದಿ: ಈಶ್ವರ ಎಂ. ಐಲ್
ಚಿತ್ರ: ದಿನೇಶ್ ಕುಲಾಲ್

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು