News Kannada
Monday, December 05 2022

ಹೊರನಾಡ ಕನ್ನಡಿಗರು

ದುಬೈ: ಅಸಾಧಾರಣ ಸಾಧಕರಿಗೆ ವಿಶ್ವಮಾನ್ಯ ಪ್ರಶಸ್ತಿ

World-renowned awards for outstanding achievers
Photo Credit : News Kannada

ದುಬೈ: ಕನ್ನಡಿಗ ದುಬೈ ಸಹಯೋಗದೊಂದಿಗೆ ದುಬೈನ ಶೇಖ್ ರಶೀದ್ ಸಭಾಂಗಣದಲ್ಲಿ ನ.19 ರಂದು ವಿಶ್ವಕನ್ನಡ ಹಬ್ಬದಲ್ಲಿ ಅಸಾಧಾರಣ ಸಾಧಕರಿಗೆ ‘ವಿಶ್ವ ಮಾನ್ಯ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮ  ನಡೆಯಿತು.

ಈ ಸಂಧರ್ಭದಲ್ಲಿ ಮೈಸೂರಿನ ಮಹಾರಾಜ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷ  ಸರ್ವೋತ್ತಮ ಶೆಟ್ಟಿ(ಸಾಮಾಜಿಕ ಕ್ಷೇತ್ರ)ಕರ್ನಾಟಕ ಅನಿವಾಸಿ ಭಾರತೀಯ ವೇದಿಕೆಯ ಮಾಜಿ ಉಪಾಧ್ಯಕ್ಷೆ ಆರತಿ ಕೃಷ್ಣ (ಸಾಮಾಜಿಕ ಕ್ಷೇತ್ರ), ದುಬೈಯ ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್ಸ್ ನ,  ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ವಕ್ವಾಡಿ ಪ್ರವೀಣ್ ಶೆಟ್ಟಿ (ಸಾಮಾಜಿಕ ಕ್ಷೇತ್ರ) ಮತ್ತು ಅಂತರರಾಷ್ಟ್ರೀಯ ಕನ್ನಡಿಗರ ಒಕ್ಕೂಟದ ಸಂಚಾಲಕ ಹಿದಾಯತ್ ಅಡ್ಡೂರು (ಕನ್ನಡ ಸೇವೆ ಮತ್ತು ಸಾಮಾಜಿಕ ಕ್ಷೇತ್ರ),ರೊನಾಲ್ಡ್ ಕೊಲಾಸೋ (ಕಲೆ ಮತ್ತು ಸಂಸ್ಕೃತಿ ಕ್ಷೇತ್ರ) ,  ತುಂಬಾಯ್ ಮೊಯಿದೀನ್ (ಸಾಮಾಜಿಕ ಹಾಗೂ ಉದ್ಯಮ ಕ್ಷೇತ್ರ),  ವರದರಾಜ್ ಶೆಟ್ಟಿ (ಉದ್ಯಮ ಕ್ಷೇತ್ರದ),  ಹರೀಶ್ ಶೇರಿಗಾರ್ (ಸಾಮಾಜಿಕ ಕ್ಷೇತ್ರದ) , ಮಣಿಗಾರ್ ಮೀರಾನ್ ಸಾಹೇಬ್ (ಸಾಮಾಜಿಕ ಕ್ಷೇತ್ರದ),  ಮೊಹಮ್ಮದ್ ಮುಸ್ತಾಫಾ(ಸಾಮಾಜಿಕ ಕ್ಷೇತ್ರದ),  ಜೋಸೆಫ್ ಮಥ್ಯಾಸ್ (ಸಾಮಾಜಿಕ ಕ್ಷೇತ್ರದ), ಡಾ. ಬಿ.ಕೆ ಯೂಸುಫ್ ( ಸಾಮಾಜಿಕ ಕ್ಷೇತ್ರ), ಛಾಯಾದೇವಿ (ಸಾಮಾಜಿಕ ಕ್ಷೇತ್ರದ),  ಡಾ. ರಶ್ಮಿ ನಂದ ಕಿಶೋರ್ (ಸಮಾಜ ಸೇವಕಿ),  ಇಬ್ರಾಹಿಂ ಖಲೀಲ್(ವಕೀಲರು),  ಈರಣ್ಣ ಮೂಲೀಮನಿ(ಸಾಮಾಜಿಕ ಕ್ಷೇತ್ರ),  ನೋಯೆಲ್ ಅಲೈದಾ(ಸಾಮಾಜಿಕ ಕ್ಷೇತ್ರ), ಗಲ್ಫ್ ರಾಷ್ಟ್ರ ಕರ್ನಾಟಕ ಪ್ರಸ್ ಕ್ಲಬ್ ಕೌನ್ಸಿಲ್ ನ ಅಧ್ಯಕ್ಷ ಸಾದನ್ ದಾಸ್, ಗಲ್ಫ್ ರಾಷ್ಟ್ರದ ಕನ್ನಡ ಚಲನಚಿತ್ರ ವಿತರಕರು ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ನ ದೀಪಕ್ ಅವರಿಗೆ ‘ವಿಶ್ವಮಾನ್ಯ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.

ಈ ವೇಳೆ ಕನ್ನಡ ತಾರೆಯರ ನೃತ್ಯ ಹಾಗೂ ಗಾಯನ ಸಂಭ್ರಮ ಕಾರ್ಯಕ್ರಮ ಜರುಗಿತು.

 

See also  ಜುಲೈ 4 ರಂದು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ವೇದಿಕೆ ಹಂಚಿಕೊಳ್ಳಲಿರುವ ಮೆಗಾಸ್ಟಾರ್‌ ಚಿರಂಜೀವಿ!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

1616

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು