News Kannada
Wednesday, May 31 2023
ಅಮೇರಿಕಾ

ಯುಎಸ್ಎ: ತುಳು ಸಾಹಿತ್ಯದ ಜ್ಞಾನ ಒಂದೆಡೆ ಸೇರಲಿ, ಆಟ ಬಿಸು ಪರ್ಬ ಉತ್ಸವದಲ್ಲಿ ಡಾ. ಸಾಯೀಗೀತ

Let the knowledge of Tulu literature come together, let the game bisu purba festival be held by Dr. Dying
Photo Credit : News Kannada

ಯುಎಸ್ಎ: ತುಳುವಿನ ಜ್ಞಾನ ಹರಿದು ಒಂದೆಡೆ ಸೇರಲಿ, ಲೋಕಕ್ಕೆಲ್ಲ ಪಸರಿಸಲಿ ಎಂದು ನಿಟ್ಟೆ ವಿಶ್ವವಿದ್ಯಾಲಯದ ತುಳು ಅಧ್ಯಯನ ಪೀಠದ ಮುಖ್ಯಸ್ಥೆ ಡಾ. ಸಾಯೀಗೀತ ಅವರು ಹಾರೈಸಿದರು.

ಅವರು ಅಖಿಲ ಅಮೆರಿಕಾದ ತುಳು ಸಂಘಟನೆಗಳ ಒಕ್ಕೂಟ (ಆಟ ) ಆರಂಭಿಸಿದ ರಾಣಿ ಅಬ್ಬಕ್ಕ ಗೇನಾದ ಚಾವಡಿ ಎಂಬ ತುಳು ಅಂತರ್ಜಾಲದ ಗ್ರಂಥಾಲಯವನ್ನು ಉದ್ಘಾಟಿಸಿ, ತುಳು ಹೊಸ ವರ್ಷ ಬಿಸು ಹಬ್ಬದ ಕಾರ್ಯಕ್ರಮದಲ್ಲಿ ಗೌರವಾನ್ವಿತ ಅಥಿತಿಯಾಗಿ ಮಾತನಾಡಿದರು. ಆಟ ತುಳು ವಿಧ್ವಾನ್ಸರನ್ನು ಆಹ್ವಾನಿಸಿ ಹೊಸ ವರ್ಷ ಬಿಸು ಹಬ್ಬವನ್ನು ಅಂತರ್ಜಾಲ ತಾಣದಲ್ಲಿ ಕಳೆದ ೨೦೨೧ ರಿಂದ ಆಚರಿಸಿಕೊಂಡು ಬಂದಿದೆ. ತಮ್ಮ ಮಾತನ್ನು ಮುಂದುವರೆಸುತ್ತಾ ಡಾ.ಸಾಯಿಗೀತ ಅವರು ಬಿಸು ಹಬ್ಬದ ಮಹತ್ವವನ್ನು ಭಾವಪೂರ್ಣವಾಗಿ ವಿವರಿಸಿದರು.

ಕಾರ್ಯಕ್ರಮದ ಇನ್ನೋರ್ವ ಗೌರವಾನ್ವಿತ ಅಥಿತಿ, ಸಾಫ್ಟ್ವೇರ್ ಉದ್ಯಮಿ, ಮ್ರೆಸಲ್ಟ್ ನ ಸಂಸ್ಥಾಪಕ ಹಾಗೂ ಅಧ್ಯಕ್ಷ ಶೇಖರ್ ನಾಯ್ಕ್ ಮಾತನಾಡಿ, ಕಠಿಣ ಶ್ರಮ ಹಾಗೂ ಧ್ರಡ ನಿರ್ಧಾರ ಯಶಸ್ಸಿನ ಹಾದಿಯನ್ನು ಸುಗಮಗೊಳಿಸುತ್ತದೆ ಎಂದರು. ಪ್ರಖ್ಯಾತ ಸಂಶೋಧಕ ಹಾಗೂ ಯಕ್ಷಗಾನ ಕಲಾವಿದ ಇಂಡಿಯಾನಾದ ಡಾ. ರಾಜೇಂದ್ರ ಕೆದ್ಲಾಯ ಮಾತನಾಡಿ ಮುಂದಿನ ಪೀಳಿಗೆ ಕಲೆಯನ್ನು ಅರಿತು, ತನ್ನದಾಗಿಸುತ್ತದೆ ಎನ್ನುವ ಆಶಯದೊಂದಿಗೆ ಇಂಗ್ಲಿಷ್ ನಲ್ಲಿ ಯಕ್ಷಗಾನ ಕಲಿಕೆ ಆರಂಭಿಸಿರುವುದಾಗಿ ಹೇಳಿದರು. ಹಾಲಿವುಡ್ ನಲ್ಲಿ ತನ್ನದೇ ಆದ ಛಾಪು ಹೊಂದಿರುವ ರಘುರಾಮ್ ಶೆಟ್ಟಿ ಯವರು ಮಾತನಾಡಿ, ತಾಯ್ನಾಡಿನ ಕಲೆಗಳನ್ನು ಅಂತರರಾಷ್ತ್ರೀಯ ಮಟ್ಟದಲ್ಲಿ ಪರಿಚಯಿಸುತ್ತಿರುವ ತಮ್ಮ ಪ್ರಯತ್ನದ ಬಗ್ಗೆ ತಿಳಿಸಿದರು.

ಅಧ್ಯಕ್ಷ ಸ್ಥಾನ ದಿಂದ ಮಾತನಾಡಿದ ಭಾಸ್ಕರ್ ಶೇರಿಗಾರ್ ಆಟದ ಚಟುವಟಿಕೆಗಳ ಸಂಕ್ಷಿಪ್ತ ವಿವರ ನೀಡಿದರು. ಕಳೆದ ಎರಡು ವರ್ಷಗಳಲ್ಲಿ ಅಮೇರಿಕಾ ಹಾಗೂ ಕೆನಡಾದ ಮಕ್ಕಳಿಗೆ ಹಾಗು ಹಿರಿಯರಿಗೆ ತುಳು ಭಾಷಾ ಕಲಿಕೆ, ತುಳು ಲಿಪಿ ಕಲಿಕೆ, ಬಿಸು ಹಬ್ಬ ಆಚರಣೆ, ತುಳು ಉಚ್ಚಯ,ಕಾಲೇಜು ಅಭ್ಯಾಸದ ಕುರಿತ ತರಬೇತಿ, ಮಕ್ಕಳಿಗೆ ವೈಜ್ಞಾನಿಕ ಹಾಗು ವೈದ್ಯಕೀಯ ವಿಷಯಗಳ ಅರಿವು ಮೂಡಿಸುವುದು, ತುಳುನಾಡಿನ ಅಡಿಗೆ ಪಾಕ ಮೊದಲಾದ ಪರಿಣಾಮಕಾರಿ ಕಾರ್ಯಕ್ರಮಗಳನ್ನ ಆಯೋಜನೆ ಮಾಡಲಾಯಿತು. ತುಳು ಲಿಪಿಯಲ್ಲಿರುವ ತಾಳೆಗರಿ ಗ್ರಂಥಗಳ ಅಧ್ಯಯನ ಹಾಗೂ ಭಾಷಾಂತರ ಇನ್ನೊಂದು ಬಹು ಮುಖ್ಯ ಸಾಧನೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸಹಕಾರದೊಂದಿಗೆ ಆರಂಭವಾಗಿರುವ ರಾಣಿ ಅಬ್ಬಕ್ಕ ತುಳು ಆನ್ಲೈನ್ ಲೈಬ್ರರಿ, ತುಳು ಭಾಷೆಯಲ್ಲಿರುವ ಎಲ್ಲ ಸಾಹಿತ್ಯ ಸಂಪತ್ತನ್ನು ಕಾಯ್ದುಕೊಳ್ಳುವ ಒಂದು ಪ್ರಯತ್ನವಾಗಿದೆ. ಇದೇ ಸಂದರ್ಭದಲ್ಲಿ ನೂತನ ಅಧ್ಯಕ್ಷೆ ಶ್ರೀವಲ್ಲಿ ರೈ ಅತೀವ ಸಂತೋಷದಿಂದ, ಆಯ್ಕೆಗೊಳಿಸಿದ್ದಕ್ಕೆ ಧನ್ಯವಾದ ಸಮರ್ಪಿಸಿ,
ಆಟ ಸಂಸ್ಥೆಯನ್ನು ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯುವ ಅಭಿಲಾಷೆ ವ್ಯಕ್ತಪಡಿಸಿದರು.

ತುಳುನಾಡಿನ ಪ್ರಾಕೃತಿಕ ವರ್ಣನೆಯೊಂದಿಗೆ ನಿರೂಪಕರಾದ ಬಾಸ್ಟನ್ ನ ಅಂಬಾಸೆಡರ್ ಪ್ರಸನ್ನ ಲಕ್ಷ್ಮಣ್ ಹಾಗು ಲಾವಣ್ಯ ಲಕ್ಷ್ಮಣ್ ಕಾರ್ಯಕ್ರಮವನ್ನು ಆರಂಭಿಸಿದರು. ಬಾಸ್ಟನ್ ನ ಶಾಲಿನಿ ಕೆ.ಪಿ. ಶೆಟ್ಟಿಯವರ ಪ್ರಾರ್ಥನೆಯ ನಂತರ, ಆಟದ ನಿರ್ದೇಶಕ ಮಂಡಳಿಯ ಚೇರ್ಮನ್ ಡಾ. ಶ್ರೀಧರ್ ಆಳ್ವ ಎಲ್ಲರನ್ನು ಸ್ವಾಗತಿಸಿದರು. ಆಟದ ಉಪಾಧ್ಯಕ್ಷ ಶಿರೀಶ್ ಶೆಟ್ಟಿ, ಸಹ ಕಾರ್ಯದರ್ಶಿ ಪೂಜಾ ಶೆಟ್ಟಿ, ನಿರ್ದೇಶಕ ಪ್ರಶಾಂತ್ ಕುಮಾರ್, ಅಂಬಾಸೆಡರ್ ಸಂತೋಷ್ ಶೆಟ್ಟಿ ಅಥಿತಿಗಳನ್ನು ಸಭೆಗೆ ಪರಿಚಯಿಸಿದರು. ಕ್ಯಾಲಿಫೋರ್ನಿಯಾದ ಅಂಬಾಸೆಡರ್ ಅನಿತಾ ನಾಯ್ಕ್ ಅವರು ರಾಣಿ ಅಬ್ಬಕ್ಕ ಆನ್ಲೈನ್ ಗ್ರಂಥಾಲಯದ ಸ್ಥೂಲ ಪರಿಚಯ ನೀಡಿ, ತನ್ನ ಪ್ರಕಟಣೆಗಳನ್ನು ನೀಡಿ ಸಹಕರಿಸಿದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಗೆ, ಲೇಖಕರಿಗ ಹಾಗೂ ಗ್ರಂಥಾಲಯದ ಸುಂದರ ವೆಬ್ಸೈಟ್ ಮಾಡಿದ, ಸುಭಾಶ್ಚಂದ್ರ ಶೆಟ್ಟಿ ಅವರಿಗೆ ಒಕ್ಕೂಟದ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸಿದರು.

See also  ಬೆಂಗಳೂರು: ಕಾಂಗ್ರೆಸ್ ನ ಉನ್ನತ ನಾಯಕರನ್ನು ದೆಹಲಿಗೆ ಕರೆಸಿಕೊಂಡ ಹೈ ಕಮಾಂಡ್

ಸುಮಾರು ಎರಡು ಗಂಟೆಗಳ ಕಾಲ ನಡೆದ ಸಾಂಸ್ಕೃತಿಕ ಕಾರ್ಯಕ್ರಮದ ನಿರೂಪಣೆಯನ್ನು ಪೆನ್ಸಿಲ್ವಾನಿಯಾದ ಸುಷ್ಮಾ ಜಯಚಂದ್ರ ನೆರವೇರಿಸಿದರು. ಕನೆಕ್ಟಿಕಟ್ ನ ಅಪ್ಸರಾ ಶೆಟ್ಟಿ ಅವರ ಕೂಚಿಪುಡಿ ನೃತ್ಯದೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ, ಬಾಸ್ಟನ್ ನ ಅರ್ಚನಾ ನಾಯಕ್ ನಿರ್ದೇಶಿಸಿದ ಅನ್ಸಿಕಾ ಶೇರಿಗಾರ್,ಆನ್ಯಾ ಜೈನ್, ಆನ್ಯಾ ಭಂಡಾರಿ, ರಿಯಾ ಭಂಡಾರಿ ಅವರು ಭಾಗವಹಿಸಿದ ಭರತನಾಟ್ಯ, ಬಾಸ್ಟನ್ ನ ದೃತಿ ಪ್ರಸನ್ನ, ಮಾಂಟ್ರಿಯಲ್ ಕೆನಡಾದ ಅಂಕಿತ ರಾವ್ ಹಾಗೂ ಟೆಕ್ಸಾಸ್ ನ ಅನುಸೂಯ ಪೂಂಜಾ ಅವರ ಭರತನಾಟ್ಯ ಎಲ್ಲರ ಮನ ಸೆಳೆಯಿತು.

ಅಟ್ಲಾಂಟಾದ ಶ್ವೇತಾ ಶೆಟ್ಟಿ ನಿರ್ದೇಶಿಸಿ, ಅಗಸ್ತ್ಯ ಶೆಟ್ಟಿ, ಅನ್ಶ್ ಶೆಟ್ಟಿ, ಆಪ್ತ ಶೆಟ್ಟಿ, ಆರುಷ್ ಕಿರಾಣಿ, ದೀಪಾ ಕದ್ರಿ, ರಿಶಾನ್ ಶೆಟ್ಟಿ, ರಿವ್ಕ ಶೆಟ್ಟಿ, ರಯಾನ್ ಶೆಟ್ಟಿ, ಶರಣ್ಯ ಶೆಟ್ಟಿ ,ಶೈನಾ ಶೆಟ್ಟಿ, ಶೋಭಿತಾ ರೈ, ಸುಪ್ರಿತಾ ಶೆಟ್ಟಿ, ಶ್ವೇತ ಶೆಟ್ಟಿ ಅವರು ಭಾಗವಹಿಸಿದ ನೃತ್ಯ  ರೂಪಕ ದೈವಾರಾಧನೆ ಮತ್ತು ಸಿಯಾಟಲ್ ನ ಶಿಲ್ಪ ಶೇರಿಗಾರ್ ನಿರ್ದೇಶಿಸಿ, ಶಾಂಭವಿ ಪೂಜಾರಿ, ರಮ್ಯಾ ರಾವ್, ಪ್ರಿಯ ಶ್ರೀನಿವಾಸ, ದಿವ್ಯ ಚಾತ್ರ ಅವರೊಂದಿಗೆ ಭಾಗವಹಿಸಿದ ತುಳು ಅಪ್ಪೆ ಬರ್ಪಿನ ಪೊರ್ಲು ಹಾಗೂ ತುಳಸಿ ತುಳುಕೂಟ ಕ್ಯಾಲಿಫೋರ್ನಿಯಾದ ಜಗದೀಶ್ ಕುಮಾರ್, ರವಿಕಲಾ ಜಗದೀಶ್, ಸಂಹಿತಾ ಉಪಾಧ್ಯ, ಶಿಲ್ಪ ಆಳ್ವ, ಮೇಘಾ ಶೆಟ್ಟಿ ಅವರು ನಡೆಸಿಕೊಟ್ಟ ಬಾಕ್ಯಾರ್ ಕಂಡೊಡು ನೃತ್ಯ ಸಂಯೋಜನೆಗಳು ವಿಶೇಷ ಆಕರ್ಷಣೆಯಾಗಿತ್ತು.

ನಾರ್ತ್ ಕ್ಯಾರೊಲಿನಾದ ಸಾನ್ವಿ ಅಸೈಗೋಳಿ ಯವರ ಯಕ್ಷಗಾನ ಪದ್ಯ, ಬಾಸ್ಟನ್ ನಹೃದಾನ್ ಗೌತಮ್ ಅವರ ಹಾಡುಗಾರಿಕೆ ವಿಶಿಷ್ಟವಾದುದು. ಬಾಸ್ಟನ್ ನ ಮಸ್ತ್ ಡ್ರಾಮಾ ವರ್ಕ್ಸ್ ಪ್ರದರ್ಶಿದ ಭಾಸ್ಕರ್ ಶೇರಿಗಾರ್ ನಿರ್ದೇಶಿಸಿ, ಭಾವನಾ ಜೈನ್, ಸತೀಶ್ ಮೋವರ್, ಕಲ್ಪನಾ ಶೆಟ್ಟಿ, ಶರತ್ ಅಮೀನ್, ಫ್ರೆಡ್ರಿಕ್ಕ್ ಫೆರ್ನಾಂಡಿಸ್, ಧೀರಜ್ ದೇವಾಡಿಗ, ಗೌತಮ್  ಪೂಜಾರಿ, ಅಭಿನಯಿಸಿದ ಕಿರು ಹಾಸ್ಯ ನಾಟಕ ದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮ ಮುಕ್ತಾಯವಾಯಿತು. ಒಕ್ಕೂಟದ ಪ್ರಧಾನ  ಕಾರ್ಯದರ್ಶಿ ಟೆಕ್ಸಾಸ್ ನ ಪ್ರಕಾಶ್ ಉಡುಪ ಅವರು ಭಾಗವಹಿಸಿದ ಗಣ್ಯರಿಗೆ, ಸಭಿಕರಿಗೆ, ಎಲ್ಲ ಸಮಿತಿಗಳ ಸದಸ್ಯರಿಗೆ, ಗ್ರಾಂಡ್ ಪೇಟ್ರನ್, ಪೇಟ್ರನ್, ಸದಸ್ಯರಿಗೆ, ಸಹಕರಿಸಿದ ತುಳು ಸಾಹಿತ್ಯ ಅಕಾಡೆಮಿ, ಟೀಮ್ ಐಲೇಸಾ, ಪತ್ರಕರ್ತರಿಗೆ ಹಾಗೂ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೆ ಆಟದ ಪರವಾಗಿ ಧನ್ಯವಾದ ಸಮರ್ಪಿಸಿದರು.

ವರದಿ: ರೇಷ್ಮಾ ಶೇರಿಗಾರ್, ವರ್ಜೀನಿಯ, ಯುಎಸ್ಎ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು