ಮಹತೋಭಾರ ಶ್ರೀ ಶನೀಶ್ವರ ಮಂದಿರ ಲಕ್ಷ್ಮಣ್ ನಗರ ಮಲಾಡ್ ಧೃಡಕಲಶ ಸಂಪನ್ನ

ಮಹತೋಭಾರ ಶ್ರೀ ಶನೀಶ್ವರ ಮಂದಿರ ಲಕ್ಷ್ಮಣ್ ನಗರ ಮಲಾಡ್ ಧೃಡಕಲಶ ಸಂಪನ್ನ

Team NK   ¦    Feb 28, 2021 07:51:40 PM (IST)
ಮಹತೋಭಾರ ಶ್ರೀ ಶನೀಶ್ವರ ಮಂದಿರ ಲಕ್ಷ್ಮಣ್ ನಗರ ಮಲಾಡ್ ಧೃಡಕಲಶ ಸಂಪನ್ನ
ಮುಂಬಯಿ : ಮಲಾಡ್ ಪೂರ್ವ ಕುರಾರ್  ವಿಲೇಜ್ ನ ಲಕ್ಷ್ಮಣ್ ನಗರದ  ಶ್ರೀ ಶನೀಶ್ವರ ಮಂದಿರದಲ್ಲಿ ದೃಢ ಕಲಸ ಫೆ.16 ರಿಂದ 18 ರವರೆಗೆ ಮೂರು ದಿನಗಳ ಕಾಲ ನಡೆಯಿತು. ಫೆ. 18 ರಂದು ನಡೆದ ಧೃಡಕಲಶ ಸಂಪನ್ನ ದ ನಂತರ ಭಕ್ತಾಭಿಮಾನಿಗಳಿಗೆ ಕೃತಜ್ನತೆಯನ್ನು ಸಲ್ಲಿಸುತ್ತಾ ದೇವಸ್ಥಾನದ ಪೂಜಾ ಸಮಿತಿಯ ಅಧ್ಯಕ್ಷ ಶ್ರೀನಿವಾಸ  ಸಾಫಲ್ಯ ಅವರು ನಿರಂತರವಾಗಿ ಇಲ್ಲಿ ಧಾರ್ಮಿಕ ಕಾರ್ಯ ನಡೆಯುತ್ತಿದ್ದು ಭಕ್ತರು ನಿರಂತರವಾಗಿ ಪ್ರೋತ್ಸಾಹಿಸುತ್ತಿರುವರು. ಕೊರೋನಾ ಸಂದರ್ಭದಲ್ಲಿ ಸಮಿತಿಯು ಕ್ರೀಯಾಶೀಲವಾಗಿತ್ತು. ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ದೃಢ ಕಲಸ ಕ್ಕೆ ಭಕ್ತರು ತುಂಬಾ ಸಹಕರಿಸಿರುವರು ಎನ್ನುತ್ತಾ ಪುರೋಹಿತರಿಗೆ, ಆಡಳಿತ ಮಂಡಳಿಯ ಎಲ್ಲಾ ಸದಸ್ಯರಿಗೆ ಹಾಗೂ ಭಕ್ತಭಿಮಾನಿಗಳಿಗೆ ಕೃತಜ್ನತೆ ಸಲ್ಲಿಸಿದರು.
  
ಅಬ್ಯುದಯ ಕೋ ಅಪರೇಟಿವ್ ಬ್ಯಾಂಕಿನ ಎಂ.ಡಿ. ಮತ್ತು ಸಿಇಓ ಪ್ರೇಮನಾಥ್ ಸಾಲ್ಯಾನ್ ಮತ್ತು ಅವರ ಧರ್ಮಪತ್ನಿಯವರು ಶ್ರೀ ಸತ್ಯನಾರಾಯಣ ಪೂಜೆಯ ಯಜಮಾನಿಕೆ ವಹಿಸಿದರು.  ಬಳಿಕ ಮಾತನಾಡಿದ ಪ್ರೇಮನಾಥ್ ಸಾಲ್ಯಾನ್ ರು ನನ್ನ ಬದುಕು ಪ್ರಾರಂಭಗೊಂಡದ್ದು ಈ ಕುರಾರ್ ವಿಜೇಜ್ ನ ಶನಿ ಮಂದಿರದ ಪರಿಸರದಲ್ಲಿ. ನಿರಂತರವಾಗಿ ಇಲ್ಲಿ ನಾನು ಸೇವೆಯನ್ನು ಮಾಡುತ್ತಿರುವೆನು. ಧಾರ್ಮಿಕ ಸಾಮಾಜಿಕ ಸೇವೆ ಈ ಕ್ಷೇತ್ರದಲ್ಲಿ ನಿರಂತರವಾಗಿ ನಡೆಸುತ್ತಿರುವುದು ಪರಿಸರದ ಅಭಿವೃದ್ದಿಗೆ ಪೂರಕ  ಎಂದರು.
 
ಪೂಜಾ ವಿಧಿಗಳನ್ನು ದೇವಸ್ಥಾನದ ಪ್ರಧಾನ ಅರ್ಚಕ ತುಂಗಾ ರಾಘವೇಂದ್ರ ಭಟ್ ನೆರವೇರಿಸಿದ್ದು ನಾರಾಯಣ್ ಭಟ್ ಅವರು ಸಹಕರಿಸಿದರು.
 
ಶ್ರೀ ಕ್ಷೇತ್ರದಲ್ಲಿ ಫೆ. 16 ರಂದು ಸಾಮೂಹಿಕ ಪ್ರಾರ್ಥನೆ ಗ್ರಹಪೂಜೆ  ಸ್ವಸ್ತಿ ಶ್ರೀ ಪುಣ್ಯಾಹವಾಚನ ದೃಡಕಲಶಕ್ಕೆ ಮಂಡಲ ರಚನೆ ನಡೆಯಿತು.
ಫೆ. 17 ರಂದು ಮಹಾಗಣಪತಿ ಹೋಮ ದುರ್ಗಾಹೋಮ ರುದ್ರ ಹೋಮ ಮತ್ತು ಶ್ರೀ ಶನೀಶ್ವರ ಹೋಮ.ಕಲಶ ಪೂಜೆ ಮತ್ತು ಕಲಶಾಭಿಷೇಕ,  ಮಹಾಪೂಜೆ ಮತ್ತು ಪ್ರಸಾದ ವಿತರಣೆ ನಡೆಯಿತು. ಅಂದು ಮದ್ಯಾಹ್ನ ಶನಿ ಮಹಾಪೂಜೆ(ಶನಿ ಕಥೆ)ಸಂಜೆ  ಮಹಾಪೂಜೆ ತಿಲ ದೀಪೋತ್ಸವ ಮತ್ತು ಪ್ರಸಾದ ವಿತರಣೆ ನಡೆಯಿತು.
ಫೆ. 18 ರಂದು ಗಣ ಹೋಮ ದುರ್ಗಾಹೋಮ ರುದ್ರ ಹೋಮ ಮತ್ತು ಶನಿ ಶಾಂತಿ ಹವನ  ಪಂಚಾಮೃತ ಸಹಿತ ಕಲಶಾಭಿಷೇಕ ಮಹಾಪೂಜೆ ಪ್ರಸಾದ ವಿತರಣೆ ಸಂಜೆ ಶ್ರೀ ಸತ್ಯನಾರಾಯಣ ಪೂಜೆ ಮತ್ತು ರಂಗ ಪೂಜೆ ಹಾಗೂ ಪ್ರಸಾದ ವಿತರಣೆ ನಡೆಯಿತು.
 
ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಿಗೆ ಸಮಿತಿಯ ಕಾರ್ಯದರ್ಶಿ ಸಂತೋಷ್ ಶೆಟ್ಟಿ. ಕೋಶಧಿಕಾರಿ ಹರೀಶ್ ಜೆ ಸಾಲ್ಯಾನ್ ಮತ್ತು ಇತರ ಪದಾಧಿಕಾರಿಗಳು ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಶೀತಲ್ ಆನಂದ್ ಕೋಟ್ಯಾನ್ ಮತ್ತು ಪದಾಧಿಕಾರಿಗಳು . ಹಿರಿಯ ಸದಸ್ಯರಾದ ಐತು ದೇವಾಡಿಗ, ನಾರಾಯಣ ಶೆಟ್ಟಿ, ಬಾಬು ಚಂದನ್,  ಶ್ರೀಧರ್ ಶೆಟ್ಟಿ ಹಾಗೂ ಸರ್ವ ಸದಸ್ಯರು ಸಹಕರಿಸಿದರು.