ಧ್ವನಿ ವಿಶ್ವ ಸಾಹಿತ್ಯ ಚಾವಡಿ: ಅನಿವಾಸಿ ಕಥಾ ಸ್ಪರ್ಧೆ

ಧ್ವನಿ ವಿಶ್ವ ಸಾಹಿತ್ಯ ಚಾವಡಿ: ಅನಿವಾಸಿ ಕಥಾ ಸ್ಪರ್ಧೆ

Sep 29, 2020 01:47:29 PM (IST)
ಧ್ವನಿ ವಿಶ್ವ ಸಾಹಿತ್ಯ ಚಾವಡಿ: ಅನಿವಾಸಿ ಕಥಾ ಸ್ಪರ್ಧೆ

ದುಬೈ: ಯು.ಏ.ಇ. ಯ ಧ್ವನಿ ಪ್ರತಿಷ್ಠಾನದ 35ನೇ ವಾರ್ಷಿಕೋತ್ಸವದ ಅಂಗವಾಗಿ ಪ್ರಪಂಚದ ಎಲ್ಲೆಡೆಯಲ್ಲಿ ನೆಲೆಸಿರುವಂತಹ ಕನ್ನಡ ಕಥೆಗಾರರ ಕಥೆಗಳನ್ನು ಒಂದೆಡೆ ಪ್ರಕಟಿಸುವ ಉದ್ದೇಶದಿಂದ ವಿಶ್ವ ಸಾಹಿತ್ಯ ಚಾವಡಿ ಕಥಾ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

ಉತ್ತಮ ಕಥೆಗೆ ವಿಶ್ವ ಸಾಹಿತ್ಯ ಚಾವಡಿ 2020 ಪ್ರಶಸ್ತಿ ಹಾಗೂ 10 ಸಾವಿರ ರೂ. ನಗದು ಪ್ರಥಮ, ರೂ.5 ಸಾವಿರ ದ್ವಿತೀಯ ಬಹುಮಾನ ಹಾಗೂ ರೂ.1,500/- ಮೂರು ಸಮಾಧಾನಕರ ಬಹುಮಾನಗಳನ್ನು ನೀಡಲಾಗುವುದು. ಕಥೆಗಳು ಅವರವರು ನೆಲೆಸಿರುವ ದೇಶದ ಪರಿಸರವನ್ನು ಬಂಬಿಸುವಂತ್ತಿದ್ದರೆ ಉತ್ತಮವಾಗಿರುವುದು. ಆಯ್ದ ಕಥೆಗಳ ಸಂಕಲನವನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುವುದು.

ಸ್ಪರ್ಧೆಗೆ ನಿಯಮಗಳು ಈ ಕೆಳಗಿನಂತ್ತವೆ.

  1. ಕಥೆ 1/8 ಸೈಜ್ ಎಂಟು ಪುಟಗಳ ಮಿತಿಯಲ್ಲಿರಬೇಕು.
  2. ಕಥೆ ಸ್ವರಚಿತವಾಗಿದ್ದು, ಅಪ್ರಕಟಿತವಾಗಿರಬೇಕು.
  3. ವಿಶ್ವದ ಯಾವುದೇ ರಾಷ್ಟ್ರದಲ್ಲಿ ನೆಲೆಸಿರುವ ಭಾಗವಹಿಸಬಹುದು.
  4. ಕಥೆ ಬರಹ, ನುಡಿ ಅಥವಾ ಯುನಿಕೋಡ್ ತಂತ್ರಾಂಶದಲ್ಲಿರಬೇಕು.
  5. ಕಥೆಯ ಜೊತೆಗೆ ಲೇಖಕರ ಹೆಸರು ವಿಳಾಸ ಕಿರು ಪರಿಚಯ, ದೂರವಾಣಿ ಸಂಖ್ಯೆ ಹಾಗೂ ಭಾವಚಿತ್ರ ಇರಬೇಕು.
  6. ನಿಮ್ಮ ಕಥೆಯನ್ನು ಕಳುಹಿಸ ಬೇಕಾದ ವಿಳಾಸ: dhwanipratishthan@gmail.com Tel.Phone: +971 50 6976081(whatsapp)
  7. ಕಥೆಯನ್ನು ನವಂನರ್ 30, 2020 ಒಳಗೆ ಕಳುಹಿಸಬೇಕು.
  8. ತೀರ್ಪುಗಾರರ ನಿರ್ಧಾರವೇ ಅಂತಿಮ.

ಅನಿವಾಸಿ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸ್ಪರ್ಧೆಯ ಸದುಪಯೋಗ ಪಡೆದುಕೆೊಳ್ಳಬೇಕಾಗಿ ಪ್ರತಿಷ್ಠಾನದ ಅಧ್ಯಕ್ಷ ಪ್ರಕಾಶ್ ರಾವ್ ಪರ್ಯಾರ್ ವಿನಂತಿಸಿಕೊಂಡಿದ್ದಾರೆ.