ಆಲ್ ಖಲೀದಿಯಾ ಸಂಸ್ಥೆಯಿಂದ 8ನೇ ವರ್ಷದ ಇಫ್ತಾರ್ ಕೂಟ

ಆಲ್ ಖಲೀದಿಯಾ ಸಂಸ್ಥೆಯಿಂದ 8ನೇ ವರ್ಷದ ಇಫ್ತಾರ್ ಕೂಟ

YK   ¦    Jun 02, 2019 08:01:36 PM (IST)
ಆಲ್ ಖಲೀದಿಯಾ ಸಂಸ್ಥೆಯಿಂದ 8ನೇ ವರ್ಷದ ಇಫ್ತಾರ್ ಕೂಟ

ಅಬುದಾಬಿ: ಆಲ್ ಖಲೀದಿಯಾ ಸಂಸ್ಥೆ ತಮ್ಮ ಸಿಬ್ಬಂದಿ ಹಾಗೂ ಗ್ರಾಹಕರೊಂದಿಗೆ ಮೇ 30ರಂದು 8ನೇ ವರ್ಷದ ಇಫ್ತಾರ್ ಕೂಟವನ್ನು ಆಲ್ ಬಸ್ಟನ್ ನೋವೋಟೆಲ್ ನಲ್ಲಿ ಹಮ್ಮಿಕೊಂಡಿತು.

ಈ ಇಫ್ತಾರ್ ಕೂಟದಲ್ಲಿ ಸಂಸ್ಥೆಯ ಸಿಬ್ಬಂದಿ, ಗ್ರಾಹಕರು, ಉದ್ಯಮಿಗಳು ಭಾಗವಹಿಸಿದರು. ಉಪಹಾರ ಸೇವನೆಗೂ ಮುನ್ನಾ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.

ಹಣಕಾಸು ವ್ಯವಸ್ಥಾಪಕ ಅರುಣ್ ಲಾಸ್ರಾಡೊ ಸ್ವಾಗತಿಸಿ, ವ್ಯವಸ್ಥಾಪಕ ನಿರ್ದೇಶಕ ಬೆನೆಡಿಕ್ಟೋ ಪಿಂಟೋ ತಮ್ಮ ಸಿಬ್ಬಂದಿಯ ಕರ್ತವ್ಯ ನಿಷ್ಠೆಗೆ ಕೃತಜ್ಞನೆ ಸಲ್ಲಿಸಿದರು.