ಅಮೆರಿಕಾದಲ್ಲಿ ಬೀದರ್ ನ ತಂದೆ-ಮಗಳು ದುರ್ಮರಣ

ಅಮೆರಿಕಾದಲ್ಲಿ ಬೀದರ್ ನ ತಂದೆ-ಮಗಳು ದುರ್ಮರಣ

YK   ¦    Jun 08, 2019 04:16:16 PM (IST)
ಅಮೆರಿಕಾದಲ್ಲಿ ಬೀದರ್ ನ ತಂದೆ-ಮಗಳು ದುರ್ಮರಣ

ಬೆಂಗಳೂರು: ಅಮೆರಿಕಾದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಬೀದರ್ ನ ತಂದೆ-ಮಗಳು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ.

ಮೃತರನ್ನು ಬಾಲ್ಕಿ ತಾಲ್ಲೂಕಿನ ಮುಖೇಶ್ ಶಿವಾಜಿ ಹಾಗೂ ಮಗಳು ದಿವಿಜ ಎಂದು ಗುರುತಿಸಲಾಗಿದೆ.

ಮುಖೇಶ್ ಅವರು ಕಾರನ್ನು ಚಲಾಯಿಸುತ್ತಿದ್ದರು. ಚಾಲಕನ ನಿಯಂತ್ರಣ ಕಳೆದುಕೊಂಡ ಕಾರು ಟ್ಯಾಂಕರ್ ಗೆ ಡಿಕ್ಕಿ ಹೊಡೆದ ಪರಿಣಾಮ ಅವಘಡ ಸಂಭವಿಸಿದೆ. ತಂದೆ-ಮಗಳು ಅಪಘಾತದ ಭೀಕರತೆಗೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.