ಧ್ವನಿ ಪ್ರತಿಷ್ಠಾನದ ೩೫ನೇ ವಾರ್ಷಿಕೋತ್ಸವ ಆಚರಣೆ

ಧ್ವನಿ ಪ್ರತಿಷ್ಠಾನದ ೩೫ನೇ ವಾರ್ಷಿಕೋತ್ಸವ ಆಚರಣೆ

YK   ¦    May 25, 2020 01:40:45 PM (IST)
ಧ್ವನಿ ಪ್ರತಿಷ್ಠಾನದ ೩೫ನೇ ವಾರ್ಷಿಕೋತ್ಸವ ಆಚರಣೆ

ದುಬೈ: ಮುಂಬೈಯಲ್ಲಿ ೧೯೮೫ ರಲ್ಲಿ ಅಸ್ತಿತ್ವಕ್ಕೆ ಬಂದ ಧ್ವನಿ ಪ್ರತಿಷ್ಠಾನ ತನ್ನ ೩೫ನೇ ವಾರ್ಷಿಕೋತ್ಸವನ್ನು ಇತ್ತೀಚೆಗೆ ಪತ್ರಕರ್ತ ರವಿ ಹೆಗ್ಡೆ, ಹಿರಿಯ ಕವಿ ಡಾ. ಎಚ್. ಎಸ್. ವೆಂಕಟೇಶ್ ಮೂರ್ತಿ ಹಾಗೂ ಸಂಘಟಕ ಶ್ರೀನಿವಾಸ ಕಪ್ಪಣ್ಣ ಅವರ ಉಪಸ್ಥಿತಿಯಲ್ಲಿ ದುಬೈಯಲ್ಲಿ ಆಚರಿಸಿತು.

ಧ್ವನಿ ೨೦೦೨ ರಿಂದ ಅಂದರೆ ಸುಮಾರು ಕಳೆದ ಎರಡು ದಶಕಗಳಿಂದ ದುಬೈಯಲ್ಲಿ ನಿರಂತರವಾಗಿ ನೆರವೇರಿಸುತ್ತಾ ಬಂದಿರುವ ಕನ್ನಡ ಸಾಹಿತ್ಯ ಹಾಗು ರಂಗ ಚಟುವಟಿಕೆಗಳನ್ನು ದಾಖಲೆಯಾಗಿಸುವ ಸಲುವಾಗಿ ವಿವಿಧ ಲೇಖಕರ ಬರಹಗಳುಳ್ಳ ಒಂದು ಸಮಗ್ರ ಹೊತ್ತಿಗೆಯನ್ನು ಪ್ರಕಟಿಸುವ ಸಿದ್ಧತೆಯಲ್ಲಿದೆ. ಈ ಹೊತ್ತಿಗೆಗೆ ಶ್ರೀ ಮನೋಹರ ತೋನ್ಸೆ ಸಂಪಾದಕರಾಗಿದ್ದು ಸರ್ವಶ್ರೀ ಗೋಪೀನಾಥ ರಾವ್, ಇರ್ಶಾದ್ ಮೂಡಬಿದ್ರಿ, ಸುಧಾಕರ ರಾವ್ ಪೇಜಾವರ ಮತ್ತು ಗೋಪಿಕಾ ಮಯ್ಯ ಮತ್ತು ರಜನಿ ಭಟ್ ಅವರು ಸಂಪಾದಕೀಯ ಮಂಡಲಿಯಲ್ಲಿರುವರು.

ಸಂಸ್ಥೆಯ ಅಧ್ಯಕ್ಷ ಪ್ರಕಾಶ್ ರಾವ್ ಪಯ್ಯಾರ್ ಸಮನ್ವಯಕಾರರಾಗಿರುವರು.

ಕಳೆದೆರಡು ದಶಕಗಳಿಂದ ಧ್ವನಿ ಬಳಗದೊಡನೆ ಸತತ ಒಡನಾಟದಲ್ಲಿರುವವರು ತಮ್ಮ ಲೇಖನವನ್ನು ನೀಡ ಬಯಸುವುದಾದರೆ ೦೧.೦೬.೨೦೨೦ ರ ಒಳಗೆ ಸಂಪಾದಕ ಮಂಡಳಿಯ ಸದಸ್ಯರನ್ನು ಸಂಪರ್ಕಿಸಬಹುದು.♣