ದುಬೈನಲ್ಲಿ ನಡೆದ ಕಾರ್ ರೇಸ್ ನಲ್ಲಿ ಮೂಡುಬಿದಿರೆ ಯುವಕನಿಗೆ ಪ್ರಶಸ್ತಿ

ದುಬೈನಲ್ಲಿ ನಡೆದ ಕಾರ್ ರೇಸ್ ನಲ್ಲಿ ಮೂಡುಬಿದಿರೆ ಯುವಕನಿಗೆ ಪ್ರಶಸ್ತಿ

Megha R Sanadi   ¦    Sep 19, 2020 06:20:17 PM (IST)
ದುಬೈನಲ್ಲಿ ನಡೆದ ಕಾರ್ ರೇಸ್ ನಲ್ಲಿ ಮೂಡುಬಿದಿರೆ ಯುವಕನಿಗೆ ಪ್ರಶಸ್ತಿ

ದುಬೈ: ದುಬೈನಲ್ಲಿ ನಡೆಯುವ ಅಂತರಾಷ್ಟ್ರೀಯ ಕಾರ್ ರೇಸ್ `ಎಂಡ್ಯುರೆನ್ಸ್ ಚಾಂಪಿಯನ್‍ಶಿಪ್ 2020′ ಅಲ್ಲ ಮೂಡುಬಿದಿರೆಯ ಯವಕ ಸುಹೈಬ್ ಆಲಿ ಇಂದ ಭಾರತ ತಂಡ ತೃತೀಯ ಸ್ಥಾನ ಪಡೆದುಕೊಂಡಿದೆ.

ದಕ್ಷಿಣ ಕನ್ನಡ ಜಿಲ್ಲಾ ಅಂಬೇಡ್ಕರ್ ಸೇನೆಯ ಅಧ್ಯಕ್ಷ ಎಂ. ಕೆ. ಅಬೂಬಕ್ಕರ್ ಅವರ ಪುತ್ರ ಸುಹೈಬ್ ಆಲಿ. ಆಳ್ವಾಸ್ ಇಂನಿಯರಿಂಗ್ ಕಾಲೇಜಿನಲ್ಲಿ ಪದವಿ ಪಡೆದಿದ್ದ ಇವರು, ಪ್ರಸ್ತುತ ಬೆಂಗಳೂರಿನಲ್ಲಿರುವ ಅಮೇರಿಕನ್ ಮೂಲದ ಬಿಟೆಕ್ನಾಲಜಿ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದಾರೆ.

ನಿರಂತರವಾಗಿ 6 ಗಂಟೆಗಳ ಕಾಲ ನಡೆದ ದುಬೈನ ಎಂಡ್ಯುರೆನ್ಸ್ ಚಾಂಪಿಯನ್‍ಶಿಪ್ ಕಾರ್ ರೇಸ್‍ನಲ್ಲಿ ಭಾರತದ ಐವರು ಚಾಲಕರನ್ನೊಳಗೊಂಡ ತಂಡ ಭಾಗವಹಿಸಿತ್ತು. ಕೊಲ್ಕತ್ತಾ ಮೂಲದ ಟೀಮ್ ಮ್ಯಾನೇಜರ್ ದೀಪಾಚಿಜನ್ ಬಿಸ್ವಾಸ್ ನೇತೃತ್ವದ ಐವರು ಚಾಲಕರ ತಂಡ ಇದಾಗಿದ್ದು, 24 ವರ್ಷ ಸುಹೈಬ್ ಆಲಿ ಕೂಡ ಈ ತಂಡದ ಒಬ್ಬರು ಸದಸ್ಯರಾಗಿದ್ದರು.