ದೆಹಲಿ ಕರ್ನಾಟಕ ಸಂಘದಿಂದ ಸಾಲುಮರದ ತಿಮ್ಮಕ್ಕರಿಗೆ ಸನ್ಮಾನ

ದೆಹಲಿ ಕರ್ನಾಟಕ ಸಂಘದಿಂದ ಸಾಲುಮರದ ತಿಮ್ಮಕ್ಕರಿಗೆ ಸನ್ಮಾನ

YK   ¦    Mar 22, 2019 05:24:42 PM (IST)
ದೆಹಲಿ ಕರ್ನಾಟಕ ಸಂಘದಿಂದ ಸಾಲುಮರದ ತಿಮ್ಮಕ್ಕರಿಗೆ ಸನ್ಮಾನ

ನವದೆಹಲಿ: ಈ ಬಾರಿಯ ಪದ್ಮಶ್ರೀ ಪುರಸ್ಕೃತ ಪರಿಸರವಾದಿ ಸಾಲುಮರದ ತಿಮ್ಮಕ್ಕ ಅವರನ್ನು ಈಚೆಗೆ ದೆಹಲಿ ಕರ್ನಾಟಕ ಸಂಘ ಅಭಿನಂದಿಸಿದೆ. ಸಂಘದ ಅಧ್ಯಕ್ಷರಾದ ಡಾ.ವೆಂಕಟಾಚಲ ಹೆಗಡೆ ಅವರು ಶಾಲು ಹಾಕಿ ಹೂಗುಚ್ಛ ನೀಡಿ ಸ್ಮರಣಿಕೆಯನ್ನು ನೀಡಿ ಅಭಿನಂದಿಸಿದರು.

ಇದೇ ಸಂದರ್ಭ ಸ್ನೇಹಾ ದೆಹಲಿ ಕನ್ನಡ ಲೇಡೇಸ್ ಅಸೋಸಿಯೇಶನ್ ನ ವತಿಯಿಂದ ತಿಮ್ಮಕ್ಕನವರನ್ನು ಅಭಿನಂದಿಸಲಾಯಿತು. ಪ್ರಧಾನ ಕಾರ್ಯದರ್ಶಿ ಸಿ.ಎಂ.ನಾಗರಾಜ ಕಾರ್ಯಕ್ರಮ ನಿರೂಪಿಸಿದರು.

ಉಪಾಧ್ಯಕ್ಷ ಡಾ.ಅವನೀಂದ್ರನಾಥ್ ರಾವ್ ವಂದಿಸಿದರು.