ಇಸ್ರೇಲ್ ನಲ್ಲಿ ವಿಘ್ನ ವಿನಾಶಕನಿಗೆ ಭಾರತೀಯರಿಂದ ವಿಶೇಷ ಪೂಜೆ

ಇಸ್ರೇಲ್ ನಲ್ಲಿ ವಿಘ್ನ ವಿನಾಶಕನಿಗೆ ಭಾರತೀಯರಿಂದ ವಿಶೇಷ ಪೂಜೆ

YK   ¦    Sep 16, 2018 12:49:37 PM (IST)
ಇಸ್ರೇಲ್ ನಲ್ಲಿ ವಿಘ್ನ ವಿನಾಶಕನಿಗೆ ಭಾರತೀಯರಿಂದ ವಿಶೇಷ ಪೂಜೆ

ಇಸ್ರೇಲ್: ಗೌರಿ ಗಣೇಶ ಹಬ್ಬದ ಪ್ರಯುಕ್ತ ದೇಶದಾದ್ಯಂತ ವಿಘ್ನ ವಿನಾಶಕ ಗಣಪನನ್ನು ಪ್ರತಿಷ್ಠಾಪಿಸಿ ಪೂಜಿಸುವುದು ಹಿಂದಿನಿಂದಲೂ ಬಂದಿರುವ ಸಂಪ್ರದಾಯ. ಹೊರ ದೇಶದಲ್ಲಿ ವಾಸವಾಗಿರುವ ಭಾರತೀಯ ಪ್ರಜೆಗಳು ವಿಘ್ನವಿನಾಶಕನನ್ನೂ ಅದ್ಧೂರಿಯಾಗಿ ಸ್ವಾಗತಿಸಿ ವಿಜೃಂಭಣೆಯಿಂದ ಆಚರಿಸಿಸುತ್ತಾರೆ.

ಅಂತೆಯೇ ಇಸ್ರೇಲ್ ನಲ್ಲಿ ಉದ್ಯೋಗ ಮಾಡುತ್ತಿರುವ ಸಾವಿರಾರು ಭಾರತೀಯ ಪ್ರಜೆಗಳು ಗೌರಿ ಗಣೇಶ ಹಬ್ಬವನ್ನು ಸಂಭ್ರಮ ಸಡಗರದಿಂದ ಶನಿವಾರ ಆಚರಿಸಿದರು. ಕಳೆದ 11ವರ್ಷದಿಂದ ಇಸ್ರೇಲ್ ನಲ್ಲಿ ಉದ್ಯೋಗ ಮಾಡುತ್ತಿರುವ ಭಾರತೀಯ ಪ್ರಜೆಗಳು ಗೌರಿ ಗಣೇಶ ಹಬ್ಬವನ್ನು ಆಚರಿಸಿಕೊಂಡು ಬರುತ್ತಿದ್ದಾರೆ.

ಗಣೇಶ ಹಬ್ಬದ ಹಿನ್ನೆಲೆ ಕುಣಿತ ಭಜನೆ ಮೂಲಕ ಮಹಾಪೂಜೆಯನ್ನು ಮಧ್ಯಾಹ್ನ ನೆರವೇರಿಸಲಾಯಿತು. ಆ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆಯನ್ನು ಆಯೋಜಿಸಲಾಗಿತ್ತು. ಸಮಾರಂಭದಲ್ಲಿ ಸುಮಾರು ಸಾವಿರಕ್ಕೂ ಅಧಿಕ ಮಂದಿ ಭಾರತೀಯ ಪ್ರಜೆಗಳು ಭಾಗಿಯಾಗಿದ್ದರು. 

More Images