ವಚನ ಮಂಟಪ ಉಪನ್ಯಾಸ ನೀಡಲಿರುವ ಡಾ. ಬಂಜಗೆರೆ ಜಯಪ್ರಕಾಶ್

ವಚನ ಮಂಟಪ ಉಪನ್ಯಾಸ ನೀಡಲಿರುವ ಡಾ. ಬಂಜಗೆರೆ ಜಯಪ್ರಕಾಶ್

Sep 23, 2020 05:44:47 PM (IST)
ವಚನ ಮಂಟಪ ಉಪನ್ಯಾಸ ನೀಡಲಿರುವ ಡಾ. ಬಂಜಗೆರೆ ಜಯಪ್ರಕಾಶ್

ದುಬೈ: ಖ್ಯಾತ ಸಂಶೋಧಕ ಹಾಗೂ ಸಂಸ್ಕೃತಿ ಚಿಂತಕ ಡಾ. ಬಂಜಗೆರೆ ಜಯಪ್ರಕಾಶ್ ಅವರು ಸೆ.25ರಂದು ಶುಕ್ರವಾರ ವಚನ ಮಂಟಪ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವರು.

ವಚನ ಮಂಟಪ ಮಸ್ಕತ್ ಆಯೋಜಿಸುತ್ತಿರುವ ಈ ಕಾರ್ಯಕ್ರಮವು ವರ್ಚುವಲ್ ಆಗಿದ್ದು, ದುಬೈನಲ್ಲಿ ಸಂಜೆ 5.30ಕ್ಕೆ, ಲಂಡನ್ ನಲ್ಲಿ ಮಧ್ಯಾಹ್ನ 2.30 ಮತ್ತು ಭಾರತದಲ್ಲಿ ಸಂಜೆ 7 ಗಂಟೆಗೆ ಪ್ರಸಾರವಾಗಲಿದೆ.

ಡಾ. ಬಂಜಗೆರೆ ಜಯಪ್ರಕಾಶ್ ಅವರು `ಬಸವೋತ್ತರ ಶರಣರ ಸಾಂಸ್ಕೃತಿಕ ದಂಗೆಗಳು’ ಎನ್ನುವ ವಿಚಾರದ ಬಗ್ಗೆ ವಿಷಯ ಮಂಡನೆ ಮಾಡಲಿರುವರು.

ಪ್ರಕಾಶ್ ಉಳ್ಳೆಗಡ್ಡಿ ಮತ್ತು ಧರ್ಮಶ್ರೀ ಪ್ರಕಾಶ್ ಬಸವಾನುಯಾಯಿ ಅವರು ಈ ಕಾರ್ಯಕ್ರಮವನ್ನು ಆಯೋಜನೆ ಮಾಡುತ್ತಲಿದ್ದಾರೆ. ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಆಯೋಜಕರು ಮನವಿ ಮಾಡಿಕೊಂಡಿರುವರು.