ಕುಲಾಲ ಸಂಘ ಮೀರಾರೋಡ್-ವಿರಾರ್ ಸಮಿತಿಯ ಹಳದಿ ಕುಂಕುಮ    

ಕುಲಾಲ ಸಂಘ ಮೀರಾರೋಡ್-ವಿರಾರ್ ಸಮಿತಿಯ ಹಳದಿ ಕುಂಕುಮ    

YK   ¦    Mar 09, 2020 11:50:57 AM (IST)
ಕುಲಾಲ ಸಂಘ ಮೀರಾರೋಡ್-ವಿರಾರ್ ಸಮಿತಿಯ ಹಳದಿ ಕುಂಕುಮ      

ಮುಂಬೈ: ಪುರುಷರು ವಿವಿಧ ರೀತಿಯಲ್ಲಿ ಮಹಿಳೆಯರಿಗೆ ಸಹಕರಿಸುತ್ತಿದ್ದರೂ, ಜೀವನದಲ್ಲಿ ಹೆಚ್ಚಿನ ಸಮಸ್ಯೆಗಳನ್ನು ಎದುರಿಸುವ ಶಕ್ತಿ, ತಾಳ್ಮೆ ಮಹಿಳೆಯರಿಗಿದೆ.  ಹಳದಿ ಕುಂಕುಮ ಕಾರ್ಯಕ್ರಮದ ಮೂಲಕ ಕುಲಾಲ ಸಮುದಾಯದ ಮಹಿಳೆಯರು ಹೆಚ್ಚಿಗೆ ಸಂಘಟಿತರಾಗುವಂತಾಗಿದೆ ಇದು ನಿರಂತರವಾಗಿ ಮುಂದುವರಿಯುತ್ತಿರಲಿ ಎಂದು ಕುಲಾಲ ಸಂಘ ಮುಂಬಯಿಯ ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಸುಚಿತಾ ಬಂಜನ್ ನುಡಿದರು.

 ಈಚೆಗೆ ನಾಲಾಸೋಪಾರ (ಪ.) ಗ್ಯಾಲ್ಯಾಕ್ಷಿ ಹೊಟೇಲು ಸಭಾಗೃಹದಲ್ಲಿ ಜರಗಿದ ಕುಲಾಲ ಸಂಘ ಮೀರಾರೋಡ್-ವಿರಾರ್ ಸಮಿತಿಯ ಹಳದಿ ಕುಂಕುಮದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.

 ಸಮಾರಂಭದ ಮುಖ್ಯ ಅಥಿತಿಯಾಗಿ ಆಗಮಿಸಿದ ಡಿವೈನ್ ಸ್ಪಾರ್ಕ್ ನ ಮಹಿಳಾ ವಿಭಾಗದ ಪ್ರಮುಖರಾದ ಜಲಜಾಕ್ಷಿ ಕುಂಬ್ಲೆಯವರು ಮಾತನಾಡುತ್ತಾ ಹಳದಿ ಕುಂಕುಮವು ಸೌಭಾಗ್ಯದ ಸಂಕೇತವಾಗಿದ್ದು ಹಳದಿ ಕುಂಕುಮವು ಆಧುನೀಕತೆಯಿಂದ ದೂರಸರಿಯಬೇಕಾಗಿದೆ. ಸಂಸಾರದಲ್ಲಿ ಮಹಿಳೆಯರಿಗೆ ಪ್ರಮುಖ ಜವಾಬ್ಧಾರಿಯಿದ್ದು ಅದನ್ನು ನಿರ್ವಹಿಸಲು ಸಮರ್ಥರು ಎಂದರು.

 ವಸಾಯಿ - ವಿರಾರ್ ಮಹಾನಗರ ಪಾಲಿಕೆಯ ನಗರಸೇವಕಿ ಮಾಯಾ ಚೌದರಿ ಯವರು ಮುಖ್ಯ ಅಥಿತಿಯಾಗಿ ಉಪಸ್ಥಿತರಿದ್ದು ಈ ಪರಿಸರದಲ್ಲಿ ಮಕ್ಕಳಿಗೆ ಮಹಿಳೆಯರಿಗೆ ಸರಕಾರದ ವಿಶೇಷ ಯೋಜನೆ ಇದ್ದು ಇದರ ಪ್ರಯೋಜನವನ್ನು ಪಡೆಯಬೇಕು ಎಂದರು.

 ಮುಖ್ಯ ಅಥಿತಿ ಚೇತನಾ ವಿಜಯ್ ಕುಂದರ್ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ ಈ ಪರಿಸರದ ಮಹಿಳೆಯರನ್ನು ಒಗ್ಗೂಡಿಸುವಲ್ಲಿ ಕುಲಾಲ ಸಂಘದ ಸ್ಥಳೀಯ ಸಮಿತಿಯು ಉತ್ತಮ ಕಾರ್ಯವನ್ನು ಮಾಡುತ್ತಿದೆ ಎಂದರು.

 ಸಮಾಜ ಸೇವಕಿ ತುಳಸಿ ಪದ್ಮನಾಭ ಬಂಗೇರ ಮಾತನಾಡಿ ಶುಭ ಕಾರ್ಯಕ್ರಮಗಳಿಗೆ ಹಳದಿ ಕುಂಕುಮವು ಪ್ರಮುಖ್ಯವಾಗಿದ್ದು ಸ್ತ್ರಿಯರ ಸೌಂದರ್ಯಕ್ಕೂ ಅದು ಅಗತ್ಯ. ಮಹಿಳೆಯ ಹಣೆಯ ಮಧ್ಯದಲ್ಲಿ ಕುಂಕುಮ ಹಚ್ಚಿದಾಗ ವೈಜ್ನಾನಿಕವಾಗಿ ಶರೀರಕ್ಕೆ ಶಕ್ತಿ ಬರುತ್ತದೆ ಎಂದರು.

 ಕುಲಾಲ ಸಂಘದ ಅಧ್ಯಕ್ಷರಾದ ದೇವದಾಸ್ ಕುಲಾಲ್ ಮಾತನಾಡುತ್ತಾ ಕುಲಾಲ ಸಮಾಜದ ಮಹಿಳೆಯರು ಒಗ್ಗಟ್ಟಿನಿಂದ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಪ್ರಶಂಸನೀಯ. ನಾವು ಎಲ್ಲಾ ಸಮುದಾಯಗಳೊಂದಿಗೆ ಸಂಬಂಧ ಬೆಳೆಸುತ್ತಾ ಬಂದಿರುತ್ತೇವೆ. ಮಂಗಳೂರಲ್ಲಿ ನಿರ್ಮಾಣವಾಗುತ್ತಿರುವ ಕುಲಾಲ್ ಭವನದ ಯೋಜನೆಯು ಆದಷ್ಟು ಬೇಗನೆ ಪೂರ್ಣಗೊಳ್ಳಲಿ ಎಂದರು.

 ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಸುಂದರ್ ಮೂಲ್ಯ ಮಾತನಾಡಿ ಸ್ಥಳೀಯ ಸಮಿತಿಯ ಸೇವಾಕಾರ್ಯದಲ್ಲಿ ಮಹಿಳೆಯರು ಮಹತ್ತರ ಪಾತ್ರವನ್ನು ನಿರ್ವಹಿಸಿತ್ತಿರುವರು. ಮಹಿಳೆಯರ ಹೆಚ್ಚಿನ ಕೆಲಸದಲ್ಲಿ ಪುರುಷರು ಹಾಗೂ ಮಕ್ಕಳ ಸಹಕಾರವಿದೆ.  ನಮ್ಮವರು ಎಲ್ಲಾ ಕ್ಷೇತ್ರಗಳಲ್ಲಿ ಸಂಸ್ಕಾರಯುತವಾಗಿ ಬೆಳೆಯುತ್ತಿದ್ದಾರೆ ಎಂದರು.

 ವೇದಿಕೆಯಲ್ಲಿ ಸ್ಥಳೀಯ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಗೀತಾ ಯೋಗೇಶ್ ಬಂಗೇರ, ಉಪಕಾರ್ಯಾಧ್ಯಕ್ಷೆ  ಚಂದ್ರಾವತಿ ಸಾಲ್ಯಾನ್, ಕಾರ್ಯದರ್ಶಿ ರೇಣುಕಾ ಸಾಲ್ಯಾನ್, ಕೋಶಾಧಿಕಾರಿ ಸಾವಿತ್ರಿ ಎಸ್ ಬಂಗೇರ, ಜತೆ ಕಾರ್ಯದರ್ಶಿಗಳಾದ ಪ್ರಮೀಳಾ ಎಂ. ಬಂಜನ್, ಸ್ವಪ್ನ ಎ. ಮುಲ್ಯ, ಜೊತೆ ಕೋಶಾಧಿಕಾರಿ ಜಯಂತಿ ಉಮೇಶ್ ಬಂಗೇರ,

ಪುಷ್ಪ ಸುಂದರ್ ಮೂಲ್ಯ, ದೇವಕಿ ಸುನಿಲ್ ಸಾಲ್ಯಾನ್ ಉಪಸ್ಥಿತರಿದ್ದರು.  ಸಭೆಯಲ್ಲಿ ಉಪಸ್ಥಿತರಿದ್ದ ಸಂಘದ ಉಪಾಧ್ಯಕ್ಷ ರಘು ಮೂಲ್ಯ ಪಾದೆಬೆಟ್ಟು, ಉದ್ಯಮಿ ಸುನಿಲ್ ಸಾಲ್ಯಾನ್, ಸ್ಥಳೀಯ ಸಮಿತಿಯ ಸಲಹೆಗಾರ ನ್ಯಾ. ಉಮಾನಾಥ ಮೂಲ್ಯ ಮಾತನಾಡಿ ಶುಭ ಕೋರಿದರು.

 ಮಹಿಳಾ ವಿಭಾಗದ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಬಳಿಕ ಅರಸಿನ ಕುಂಕುಮ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮಕ್ಕೆ ವಿಶೇಷವಾಗಿ ಸಹಕರಿಸಿದ ಗ್ಯಾಲಕ್ಷಿ ಸಭಾಗೃಹದ ಶಶಿಧರ ಕೆ. ಶೆಟ್ಟಿ ಯವರನ್ನು ಗೌರವಿಸಲಾಯಿತು. ಉಮೇಶ್ ಬಂಗೇರ, ಮೋಹನ್ ಬಂಜನ್, ಚಂದು ಮೂಲ್ಯ, ಸತೀಶ್ ಮೂಲ್ಯ್, ಚಂದ್ರಶೇಖರ ಕುಲಾಲ್, ಚಂದ್ರಹಾಸ ಮೂಲ್ಯ, ಯಶೋಧರ ಬಂಗೇರ, ಉದಯ ಮೂಲ್ಯ ಮಾಣಿ ಸಹಕರಿಸಿದರು.

 

More Images