ಭಾರತ್ ಬ್ಯಾಂಕ್, ಬಿಲ್ಲವರ ಮಹಾಮಂಡಲದ ಮಾಜಿ ಅಧ್ಯಕ್ಷ ಜಯ ಸಿ. ಸುವರ್ಣ ನಿಧನ

ಭಾರತ್ ಬ್ಯಾಂಕ್, ಬಿಲ್ಲವರ ಮಹಾಮಂಡಲದ ಮಾಜಿ ಅಧ್ಯಕ್ಷ ಜಯ ಸಿ. ಸುವರ್ಣ ನಿಧನ

HSA   ¦    Oct 21, 2020 10:30:32 AM (IST)
ಭಾರತ್ ಬ್ಯಾಂಕ್, ಬಿಲ್ಲವರ ಮಹಾಮಂಡಲದ ಮಾಜಿ ಅಧ್ಯಕ್ಷ ಜಯ ಸಿ. ಸುವರ್ಣ ನಿಧನ

ಮುಂಬಯಿ: ಬಿಲ್ಲವ ಮಹಾಮಂಡಲ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಮಾಜಿ ಅಧ್ಯಕ್ಷ ಹಾಗೂ ಭಾರತ್ ಬ್ಯಾಂಕ್ ನ ಮಾಜಿ ಅಧ್ಯಕ್ಷ ಜಯ ಸಿ. ಸುವರ್ಣ ಅವರು ಅ.21ರಂದು ಬೆಳಗ್ಗೆ ನಿಧನರಾದರು.

ಮಾಜಿ ಸಚಿವ ಜನಾರ್ದನ ಪೂಜಾರಿ ಅವರ ನಿಕಟವರ್ತಿಯಾಗಿದ್ದ ಜಯ ಸಿ. ಸುವರ್ಣ ಅವರು ಪ್ರಬಲ ಬಿಲ್ಲವ ನಾಯಕರಾಗಿದ್ದು, ಮುಂಬಯಿಯಲ್ಲಿನ ಎಲ್ಲಾ ಜಾತೀಯ ಸಂಘ ಸಂಸ್ಥೆಗಳೊಂದಿಗೆ ಒಳ್ಳೆಯ ಭಾಂದವ್ಯ ಇಟ್ಟುಕೊಂಡಿದ್ದರು.

ಕುದ್ರೋಳಿ ಆಡಳಿತ ಸಮಿತಿ ಗೌರವಾಧ್ಯಕ್ಷರಾಗಿ, ಗೆಜ್ಜೆಗಿರಿ ನಂದನ ಬಿತ್ತಿಲ್ ನ ಗೌರವಾಧ್ಯಕ್ಷರಾಗಿ, ಮುಂಬಯಿ ಬಿಲ್ಲವ ಭವನ ಮತ್ತು ಮುಲ್ಕಿಯ ಮಹಾಮಂಡಲವನ್ನು ನಿರ್ಮಿಸಿದ್ದರು.

ಇವರು ಪತ್ನಿ ಹಾಗೂ ನಾಲ್ಕು ಮಂದಿ ಗಂಡು ಮಕ್ಕಳನ್ನು ಅಗಲಿರುವರು. ಮಾಜಿ ಸಚಿವ ಜನಾರ್ದನ ಪೂಜಾರಿ ಅವರು ಜಯ ಸುವರ್ಣ ಅಗಲಿಕೆಗೆ ಶೋಕ ವ್ಯಕ್ತಪಡಿಸಿರುವರು.