ಕಿಚ್ಚ ಸುದೀಪ್ ರವರಿಗೆ ದುಬಾಯಿಯಲ್ಲಿ "ಕನ್ನಡ ಕಲಾ ತಿಲಕ" ಬಿರುದು ಪ್ರದಾನ

ಕಿಚ್ಚ ಸುದೀಪ್ ರವರಿಗೆ ದುಬಾಯಿಯಲ್ಲಿ "ಕನ್ನಡ ಕಲಾ ತಿಲಕ" ಬಿರುದು ಪ್ರದಾನ

Deepak Somashekara, Dubai   ¦    Feb 04, 2021 02:42:06 PM (IST)
ಕಿಚ್ಚ ಸುದೀಪ್ ರವರಿಗೆ ದುಬಾಯಿಯಲ್ಲಿ "ಕನ್ನಡ ಕಲಾ ತಿಲಕ" ಬಿರುದು ಪ್ರದಾನ

ದುಬಾಯಿಯಲ್ಲಿ ಗಿನ್ನೆಸ್ ದಾಖಲೆಯ ಅತ್ಯಂತ ಎತ್ತರದ ವಾಸ್ತು ಶಿಲ್ಪ ಬುರ್ಜ್ ಖಲಿಫಾ ದ ಮೇಲೆ 2021 ಜನವರಿ 31 ನೇ ತಾರೀಕು ಶುಕ್ರವಾರ ರಾತ್ರಿ 8.10 ಕ್ಕೆ ಕಿಚ್ಚ ಸುದೀಪ್ ರವರ ವಿಕ್ರಾಂತ್ ರೋಣ ಕನ್ನಡ ಚಲನ ಚಿತ್ರದ ಲೋಗೊ ಮತ್ತು ಕನ್ನಡದ ಬಾವುಟ ಹಾಗೂ ಕಿಚ್ಚ ಸುದೀಪ್ ರವರ 25 ವರ್ಷಗಳ ಹೆಜ್ಜೆ ಗುರುತುಗಳು ಎಲ್.ಇ.ಡಿ. ಲೈಟ್ ಗಳ ಮೂಲಕ ವರ್ಣ ರಂಜಿತವಾಗಿ ಪ್ರಜ್ವಲಿಸಿ ಅನಾವರಣ ಗೊಂಡು ವಿಶ ದಾಖಲೆಯನ್ನು ಸೃಷ್ಠಿಸಿತ್ತು.

ಸಮಾರಂಭಕ್ಕೆ ಆಗಮಿಸಿದ್ದ ಕಿಚ್ಚ ಸುದೀಪ್ ರವರನ್ನು ಫೆಬ್ರವರಿ 1ನೇ ತಾರೀಕು ಅರಬ್ ಸಂಯುಕ್ತ ಸಂಸ್ಥಾನದಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರು ಹಾಗೂ ಯು.ಎ.ಇ.ಯಲ್ಲಿ ಕಾರ್ಯೋನ್ಮುಖವಾಗಿರುವ ಕರ್ನಾಟಕ ಪರ ಸಂಘಟನೆಗಳ ಅಧ್ಯಕ್ಷರ ಸಂದೇಶಗಳೊಂದಿಗೆ ಕಿಚ್ಚ ಸುದೀಪ್ ರವರ 25 ವರ್ಷಗಳ ಸಾಧನೆಗಳನ್ನು ಅಭಿನಂದಿಸಿ "ಕನ್ನಡ ಕಲಾ ತಿಲಕ್" ಬಿರುದು ನೀಡಿ ಸನ್ಮಾನಿಸಿ ಗೌರವಿಸಲಾಯಿತು.