ಕುಂದಾಪುರದ ಮಾಜಿ ಕ್ರೀಡಾಪಟು ಕುವೈಟ್ ನಲ್ಲಿ ಕೊರೋನಾದಿಂದ ಸಾವು

ಕುಂದಾಪುರದ ಮಾಜಿ ಕ್ರೀಡಾಪಟು ಕುವೈಟ್ ನಲ್ಲಿ ಕೊರೋನಾದಿಂದ ಸಾವು

HSA   ¦    Jul 17, 2020 04:12:10 PM (IST)
ಕುಂದಾಪುರದ ಮಾಜಿ ಕ್ರೀಡಾಪಟು ಕುವೈಟ್ ನಲ್ಲಿ ಕೊರೋನಾದಿಂದ ಸಾವು

ಕುವೈಟ್: ಕುವೈಟ್ ನಲ್ಲಿದ್ದ ಕುಂದಾಪುರದ ಮಾಜಿ ಕ್ರೀಡಾಪಟುವೊಬ್ಬರು ಕೋವಿಡ್-19 ಸೋಂಕಿನಿಂದ ಮೃತಪಟ್ಟಿರುವುದಾಗಿ ವರದಿಯಾಗಿದೆ.

ಕುವೈಟ್ ನಲ್ಲಿದ್ದ ಈ ಕ್ರೀಡಾಪಟು ಜು.16ರಂದು ಕುವೈಟ್ ನಲ್ಲಿ ನಿಧನರಾಗಿದ್ದಾರೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ. ಕಳೆದ ಕೆಲವು ವರ್ಷಗಳಿಂದ ಯುಎಇಯಲ್ಲಿ ಉದ್ಯೋಗದಲ್ಲಿದ್ದ ಇವರು ಕೆಲವು ವರ್ಷಗಳ ಮೊದಲು ಕುವೈಟ್ ಗೆ ತೆರಳಿದ್ದರು.

ಕೋವಿಡ್-19 ದೃಢಪಟ್ಟ ಬಳಿಕ ಇವರು ಕುವೈಟ್ ನ ಆಸ್ಪತ್ರೆಯಲ್ಲಿ 22 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಮತ್ತು ಅಂತ್ಯಕ್ರಿಯೆಯನ್ನು ಕುವೈಟ್ ನಲ್ಲಿ ನಡೆಸಲಾಗಿದೆ ಎಂದು ಕುಟುಂಬ ಮೂಲಗಳು ಹೇಳಿವೆ.

80ರ ದಶಕದಲ್ಲಿ ಇವರು ಕುಂದಾಪುರದ ಖ್ಯಾತ ಕ್ರೀಡಾಪಟು ಮತ್ತು ಭಂಡಾರ್ ಕಾರ್ಸ್ ಕಾಲೇಜಿನ ಖ್ಯಾತ ಕಬಡ್ಡಿ ಮತ್ತು ವಾಲಿಬಾಲ್ ಆಟಗಾರರಾಗಿದ್ದರು.