ಕೆಡಿಎಂಸಿ ಕಾರ್ಪೋರೇಟರ್ ದಯಶಂಕರ್ ಶೆಟ್ಟಿ ನೇತೃತ್ವದಲ್ಲಿ ಆಹಾರ ವಸ್ತುಗಳ ವಿತರಣೆ

ಕೆಡಿಎಂಸಿ ಕಾರ್ಪೋರೇಟರ್ ದಯಶಂಕರ್ ಶೆಟ್ಟಿ ನೇತೃತ್ವದಲ್ಲಿ ಆಹಾರ ವಸ್ತುಗಳ ವಿತರಣೆ

Apr 28, 2020 04:04:29 PM (IST)
ಕೆಡಿಎಂಸಿ ಕಾರ್ಪೋರೇಟರ್ ದಯಶಂಕರ್ ಶೆಟ್ಟಿ ನೇತೃತ್ವದಲ್ಲಿ ಆಹಾರ ವಸ್ತುಗಳ ವಿತರಣೆ

ಮುಂಬಯಿ: ಕಲ್ಯಾಣ್ - ಡೊಂಬಿವಾಲಿ ಮುನ್ಸಿಪಲ್ ಕಾರ್ಪೊರೇಷನ್ (ಕೆಡಿಎಂಸಿ) ಅಧ್ಯಕ್ಷ - ಶಿವಸೇನೆ ಕಾರ್ಪೋರೇಟರ್ ದಯಶಂಕರ್ ಪಿ. ಶೆಟ್ಟಿ, ಅವರ ನೇತೃತ್ವದಲ್ಲಿ ಕಲ್ಯಾಣ್ - ಡೊಂಬಿವಲಿ ಪ್ರದೇಶದಲ್ಲಿ ಲಾಕ್‌ಡೌನ್ ನಿಂದಾಗಿ ಅಸಾಯಕರಾಗಿದ್ದ ಸಾವಿರಾರು ಜನರಿಗೆ ಸಹಕರಿಸುತ್ತಿರುವರು. ಈ ಕಠಿಣ ಸಮಯದಲ್ಲಿ ಸಹಾಯವನ್ನು ನೀಡಿದ ದಾನಿಗಳು ಮತ್ತು ಇತರರಿಗೆ ದಯಾಶಂಕರ್ ಪಿ. ಶೆಟ್ಟಿ ಕೃತಜ್ನತೆ ಅರ್ಪಿಸಿದರು. ರೆಡಿ-ಟು-ಈಟ್ ಸೆಂಟ್ರಲ್ ಕಮ್ಯುನಿಟಿ ಕಿಚನ್ ಅನ್ನು ಸ್ಥಾಪಿಸಿದ್ದು, ಮುಂಬರುವ ದಿನಗಳಲ್ಲಿ ಇದು ಸಹಕಾರಿಯಾಗುತ್ತದೆ.

ದಯಾಶಂಕರ್ ಪಿ.ಶೆಟ್ಟಿ ಮತ್ತು ಅವರ ತಂಡವು ಈ ಕಾರ್ಯವನ್ನು ನಿರ್ವಹಿಸುವಾಗ ಸಾಮಾಜಿಕ ದೂರವನ್ನು ಕಾಪಾಡಿಕೊಳ್ಳುತ್ತಾರೆ.

ಈಗಾಗಲೇ 17000 ಕ್ಕೂ ಹೆಚ್ಚು ಫೇಸ್ ಮಾಸ್ಕ್‌ಗಳನ್ನು , ಅಕ್ಕಿ, ಅಟ್ಟಾ / ಗೋಧಿ, ದಾಲ್ ಮತ್ತು ತೈಲವನ್ನು ಒಳಗೊಂಡಿರುವ 1800 ಕ್ಕೂ ಹೆಚ್ಚು ಆಹಾರ ಧಾನ್ಯ ಪ್ಯಾಕೆಟ್‌ಗಳನ್ನು ವಿತರಿಸಲಾಯಿತು. ಏಪ್ರಿಲ್ 27 ರವರೆಗೆ ಅವರು 4000 ಕೆಜಿಗಿಂತ ಹೆಚ್ಚು ಗೋಧಿ / ಗೋಧಿ ಹಿಟ್ಟು, 4000 ಕೆ.ಜಿ. ಅಕ್ಕಿ,  2000 ಕೆಜಿ ದಾಲ್ ಮತ್ತು 2000 ಲೀಟರ್ ಅಡುಗೆ ಎಣ್ಣೆ ಯನ್ನು ಈಗಾಗಲೇ ವಿತರಿಸಿದ್ದು ಇದು ಮುಂದುವರಿಯುತ್ತಿದೆ.

ಇವರ ತಂಡವು ಸುಮಾರು 6000 ಲೀಟರ್‌ಗಳನ್ನು ಎಫ್‌ಡಿಎ 3% ಹೈಡ್ರೋಜನ್ ಪೆರಾಕ್ಸೈಡ್ ಸೋಂಕು ನಿವಾರಕವನ್ನು ಸಂಗ್ರಹಿಸಿ ಪರಿಸರದಲ್ಲಿ ಸಿಂಪಡಿಸಿದೆ. ಇದಕ್ಕೆ ಕೆಡಿಎಂಸಿಯ ಯಂತ್ರಗಳನ್ನು ಬಳಸಲಾಗುತ್ತಿತ್ತು ಒಂದೆರಡು ಯಂತ್ರಗಳನ್ನು ಖರೀದಿಸಿ ಈ ಸೋಂಕುನಿವಾರಕವನ್ನು ಸಿಂಪಡಿಸಲು ತರಬೇತಿ ಪಡೆದ ವ್ಯಕ್ತಿಗಳನ್ನು ನೇಮಿಸಲಾಗಿದೆ.

ಈಶ್ವರ ಎಂ. ಐಲ್

More Images