ಸಂಕಷ್ಟದಲ್ಲಿ ಮುಂಬಯಿಯ ಹೋಟೆಲ್ ಉದ್ಯಮ

ಸಂಕಷ್ಟದಲ್ಲಿ ಮುಂಬಯಿಯ ಹೋಟೆಲ್ ಉದ್ಯಮ

HSA   ¦    Jun 16, 2020 04:24:34 PM (IST)
ಸಂಕಷ್ಟದಲ್ಲಿ ಮುಂಬಯಿಯ ಹೋಟೆಲ್ ಉದ್ಯಮ

ಮುಂಬಯಿ: ಹಿಂದಿನಿಂದಲೂ ಮುಂಬಯಿಯಲ್ಲಿ ತಮ್ಮದೇ ಆಗಿರುವಂತಹ ಒಂದು ಗೌರವಾನ್ವಿತ ಉದ್ಯೋಗ ಮಾಡಿಕೊಂಡು ಬಂದಿರುವಂತಹ ಕನ್ನಡಿಗರು ಇಂದು ಸಂಕಷ್ಟದಲ್ಲಿದ್ದಾರೆ.

ಕೊರೋನಾದಿಂದಾಗಿ ಸಂಪೂರ್ಣ ದೇಶವೇ ಕೆಲವು ತಿಂಗಳ ಕಾಲ ಲಾಕ್ ಡೌನ್ ಆಗಿದೆ. ಆದರೆ ದೇಶದ ವಾಣಿಜ್ಯ ರಾಜಧಾನಿ ಮುಂಬಯಿಯಲ್ಲಿ ಕೊರೋನಾವು ಹೆಚ್ಚಾಗುತ್ತಲೇ ಇದ್ದು, ಮಹಾರಾಷ್ಟ್ರದಲ್ಲಿ ಮಾತ್ರ ಲಾಕ್ ಡೌನ್ ಇನ್ನೂ ಮುಂದುವರಿಯುತ್ತಲೇ ಇದೆ.

ಹೀಗಾಗಿ ಹೋಟೆಲ್ ಉದ್ಯಮವನ್ನು ನಡೆಸಿಕೊಂಡು ಬರುವಂತಹ ಸಾವಿರಾರು ಮಂದಿ ಕನ್ನಡಿಗರು ಹಾಗೂ ಅದೇ ಹೋಟೆಲ್ ಗಳಲ್ಲಿ ದುಡಿಯುತ್ತಿದ್ದ ಕನ್ನಡಿಗರು ಇಂದು ಉದ್ಯೋಗವಿಲ್ಲದೆ ಪರದಾಡುವಂತಾಗಿದೆ.

ಹೋಟೆಲ್ ಉದ್ಯಮ ಹಾಗೂ ಉದ್ಯೋಗದಲ್ಲಿದ್ದ ಕಾರ್ಮಿಕರಿಗೆ ಸರ್ಕಾರವು ನೆರವು ನೀಡಬೇಕು ಎಂದು ಕನ್ನಡಿಗರು ಮನವಿ ಮಾಡಿಕೊಂಡಿದ್ದಾರೆ.