News Kannada
Thursday, September 28 2023
ಅಮೇರಿಕಾ

ಬಂಟ್ಸ್ ಅಸೋಸಿಯೇಷನ್ ಆಫ್ ನಾರ್ತ್ ಅಮೇರಿಕಾ ಬಾನ ಸಂಸ್ಥೆ ವತಿಯಿಂದ ಬಾನ 2022 ಸಮಾವೇಶ

america
Photo Credit : News Kannada

ಅಮೇರಿಕಾ: ಬಂಟ್ಸ್ ಅಸೋಸಿಯೇಷನ್ ಆಫ್ ನಾರ್ತ್ ಅಮೇರಿಕಾ ಬಾನ ಸಂಸ್ಥೆ ವತಿಯಿಂದ ಅಮೇರಿಕಾದ ಅಟ್ಲಾಂಟಾ ನಗರದಲ್ಲಿ ಬಾನ 2022 ಸಮಾವೇಶ, “ದ ಸ್ಟರ್ಲಿಂಗ್ ಅಟ್ಲಾಂಟಾ ಮಿಡ್ಟೌನ್” (The Starling Atlanta Midtown, Curio Collection by Hilton) ನಲ್ಲಿ ಜುಲೈ 1ರಿಂದ 4ರ ವರೆಗೆ ಅದ್ಧೂರಿಯಾಗಿ ನಡೆಯಲಿದೆ.

ಈಗಾಗಲೇ ಪೂರ್ವ ತಯಾರಿ ತ್ವರಿತವಾಗಿ ನಡಿಯುತಿದ್ದು, ಅಮೇರಿಕಾದ ಎಲ್ಲ ರಾಜ್ಯಗಳಿಂದಲೂ ಸಂಘಟನೆಯ ಸದಸ್ಯರು ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.

ಕರ್ನಾಟಕ ಕರಾವಳಿ ಹಾಗೂ ಬಾಂಬೆ ಪ್ರದೇಶಗಳಿಂದ ಬಂದು ಅಮೇರಿಕಾಲ್ಲಿ ನೆಲೆಸಿರುವ ಬಂಟ ಸಮುದಾಯದ ಜನರಿಗೆ ಇದೊಂದು ಸಂಭ್ರಮದ ಕ್ಷಣ. ಸುಮಾರು ನಾಲ್ಕು ನೂರಕ್ಕೂ ಹೆಚ್ಚು ಮಂದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಕೊರೊನ ಪಿಡುಗಿನ ನಂತರದಲ್ಲಿ ಇದೆ ಮೊದಲ ಬಾರಿಗೆ ಈ ಸಮಾವೇಶ ನಡೆಯುತ್ತಿರುವುದು ವಿಶೇಷ. ಆತಿಥೇಯ ಅಟ್ಲಾಂಟಾ ಬಾನ ಸಂಘಟನೆ ಈ ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿ ವಹಿಸಿದ್ದು, ಬಾನದ ಅಧ್ಯಕ್ಷರಾದ ಶ್ರೀಯುತ ಶಿರೀಶ್ ಶೆಟ್ಟಿ ಮತ್ತು ಕಾರ್ಯಕಾರಿ ಸಮಿತಿಯ ವಿಶೇಷ ಮುತುವರ್ಜಿಯಿಂದ ಕಾರ್ಯಕ್ರಮದ ರೂಪುರೇಷೆಯನ್ನು ಸಿದ್ಧಪಡಿಸಿದ್ದಾರೆ.

ಅಮೇರಿಕಾದಲ್ಲಿ ಒಟ್ಟು ಇಪ್ಪತ್ತೆರಡು ಬಾನ ಸಮಾವೇಶ ಗಳು ನಡೆದಿದ್ದು, ಈಗ ಇಪ್ಪತ್ತಮೂರನೆ ಬಾರಿಗೆ ಈ ಕಾರ್ಯಕ್ರಮ ನಡೆಯಿತ್ತಿದೆ. 1979 ರಲ್ಲಿ ಪ್ರಾರಂಭವಾದ ಬಾನ ಸಂಸ್ಥೆ, 2019 ರ ಜುಲೈನಲ್ಲಿ ಅಟ್ಲಾಂಟಾ ಕಾರ್ಯಕಾರಿ ಸಮಿತಿ ಎರಡು ವರ್ಷಗಳ ಮಟ್ಟಿಗೆ ಸಂಸ್ಥೆಯ ಜವಾಬ್ದಾರಿಯನ್ನು ವಹಿಸಿಕೊಂಡಿತ್ತು. ಕೊರೊನದ ಕಾರಣದಿಂದಾಗಿ ಮೂರು ವರ್ಷಗಳ ಮಟ್ಟಿಗೆ ಈ ಜವಾಬ್ದಾರಿ ಮುಂದುವರಿಯಿತು.

ಮೂರು ದಿನಗಳ ಕಾರ್ಯಕ್ರಮ ಇದಾಗಿದ್ದು ಜುಲೈ ಒಂದರಂದು ಶುಕ್ರವಾರ ಶ್ರೀಕೃಷ್ಣ ಬೃಂದಾವನ ದೇಗುಲದ ಅರ್ಚಕರಿಂದ ದೀಪ ಬೆಳಗುವುದರೊಂದಿಗೆ ಶುಭಾರಂಭಗೊಳ್ಳಲಿದೆ. ಮೊದಲನೆಯ ದಿನದಂದು ಸ್ವಾಗತ, ಮ್ಯಾಜಿಕ್ ಶೋ, ಯುವಕರ ಸಮ್ಮಿಲನ, ಮತ್ತು ಸಂಜೆ ಕ್ಯಾಸಿನೊ ಆಟಗಳು ಹಾಗು ಇತರೆ ಮನರಂಜನಾ ಕಾರ್ಯಕ್ರಮಗಳನ್ನು ಸಂಯೋಜಿಸಲಾಗಿದೆ.
ಎರಡನೆಯ ದಿನದಂದು ಹತ್ತಿರದ ಉದ್ಯಾನವನದಲ್ಲಿ ಪಿಕ್ನಿಕ್ ವ್ಯವಸ್ಥೆಯನ್ನು ಮಾಡಲಾಗಿದ್ದು ಗಾಲ್ಫ್ ಆಟ, ಜತೆಗೆ ಊರಿನ ಬಾಲ್ಯದ ನೆನಪನ್ನು ಮರುಕಳಿಸುವ ಹಲವಾರು ಆಟಗಳ ಆಕರ್ಷಣೆ. ಸಂಜೆಗೆ RhimJim Band from Seattle ತಂಡದವರಿಂದ ಕಾರ್ಯಕ್ರಮ ಪ್ರದರ್ಶನ ನಡೆಯಲಿದೆ ಹಾಗು ಖ್ಯಾತ ಉದ್ಯಮಿ ರೇಷ್ಮಾ ಶೆಟ್ಟಿ ಮುಖ್ಯ ಭಾಷಣಕಾರರಾಗಿ ಪಾಲ್ಗೊಳ್ಳಲಿದ್ದಾರೆ.
ಮೂರನೆಯ ದಿನ ಸಂಘದ ಸಾಮಾನ್ಯ ಸಭೆಯ ಜತೆಗೆ ಹಲವಾರು ಮನರಂಜನಾ ಕಾರ್ಯಕ್ರಮಗಳನ್ನೂ ಯೋಜಿಸಲಾಗಿದೆ.

ಜ್ಹುಂಬ ನೃತ್ಯ, ಗಾಲ್ಫ್ ಆಟ, ಅಟ್ಲಾಂಟಾ ನಗರ ವೀಕ್ಷಣೆ ಹಾಗು ಸಂಜೆಗೆ ಸಮಾರೋಪ ಕಾರ್ಯಕ್ರಮದಲ್ಲಿ ಅಧ್ಯಕ್ಷರ ಭಾಷಣ, ಮುಖ್ಯ ಭಾಷಣಕಾರರಾಗಿ ಕಾರ್ಗೋ ಲಾಜಿಸ್ಟಿಕ್ಸ್ ನ ಶಶಿಕಿರಣ್ ಶೆಟ್ಟಿ ಭಾಗವಹಿಸಲಿದ್ದಾರೆ.

ಮೂರು ದಿನವೂ ವಿಶೇಷವಾದ ರುಚಿಕರ ಭೋಜನದ ವ್ಯವಸ್ಥೆಯನ್ನು ಮಾಡಲಾಗಿದೆ. ಸಮುದಾಯದ ಹಲವಾರು ಬಂಧುಗಳು, ಗಣ್ಯರು, ತುಳು ಭಾಷಿಕರು ಅಮೇರಿಕಾದ ಬೇರೆ ಬೇರೆ ನಗರಗಳಿಂದ ಬಂದು ಒಂದೆಡೆ ಸೇರುವ ಈ ಸಂದರ್ಭದಲ್ಲಿ ತುಳು ಭಾಷೆ ಸಂಸ್ಕೃತಿಯ ವೈಭವದ ಕಲರವ ಅಟ್ಲಾಂಟಾ ನಗರದಲ್ಲಿ ರಾರಾಜಿಸಲಿದೆ.

See also  ಚಾಮರಾಜನಗರ: ವಾಹನಗಳ ಮೇಲೆ ಕಾಡಾನೆ ದಾಳಿ

ದೂರದ ದೇಶದಲ್ಲಿ ಹಲವಾರು ವರ್ಷಗಳಿಂದಲೂ ನೆಲೆಸಿರುವ ಬಂಟರು ತಮ್ಮ ಮೂಲ ನೆಲದ ಪರಂಪರೆ, ಭಾಷೆ, ಆಚಾರ ವಿಚಾರಗಳನ್ನು ಮರೆಯದೆ ಮುಂದಿನ ಜನಾಂಗಕ್ಕೆ ಅದನ್ನು ಪರಿಚಯಿಸಿ ದಾಟಿಸುವ ಪ್ರಾಮಾಣಿಕ ಪ್ರಯತ್ನವನ್ನು ಬಾನ ಸಂಸ್ಧೆ ಹತ್ತಾರು ವರ್ಷಗಳಿಂದಲೂ ನಡೆಸುತ್ತಲೇ ಬಂದಿದೆ. ಕಳೆದ ಮೂರು ವರ್ಷಗಳಿಂದ ಈಗಾಗಲೇ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಬಾನ ಹಮ್ಮಿಕೊಂಡಿದ್ದು, ಕೆಳಗಿನ ಯೋಜನೆಗಳು ಪ್ರಮುಖವಾಗಿದೆ.

ನಿಟ್ಟೆ ಎಜುಕೇಶನ್ ಟ್ರಸ್ಟ್ ಸಹಯೋಗದೊಂದಿಗೆ KNOW YOUR HERITAGE ಎಂಬ ವಿಶಿಷ್ಟ ಯೋಜನೆಯನ್ನು ಅಧ್ಯಕ್ಷರಾದ ಶಿರಿಶ್ ಶೆಟ್ಟಿಯವರು ಜಾರಿಗೆ ತಂದಿದ್ದು ನೂರಾರು ವರ್ಷಗಳ ನಂತರವು ಅಮೇರಿಕಾದಲ್ಲೇ ಹುಟ್ಟಿ ಬೆಳೆಯುವ ಮಕ್ಕಳಿಗೆ ತನ್ನ ಮೂಲ ನೆಲದ ಭೇಟಿ ಮತ್ತು ಪರಿಚಯ ಮಾಡುವ ಅವಕಾಶವನ್ನು ಕಲ್ಪಿಸುತ್ತದೆ.

ವಿಲೇಜ್ ಟಿವಿ ಟ್ರಸ್ಟ್ ಮಂಗಳೂರು ಇ-ಲರ್ನಿಂಗ್ ಸೆಂಟರ್ ತೆರೆಯಲು ಹಾಗು ಉಡುಪಿಯ ಗ್ರಾಮೀಣ ಬಂಟರ ಸಂಘದಲ್ಲಿ ಕಂಪ್ಯೂಟರ್ ಕಲಿಕಾ ಕೇಂದ್ರವನ್ನು ತೆರೆಯಲು ಬಾನ ಸಂಸ್ಥೆ ಧನ ಸಹಾಯವನ್ನು ಮಾಡಿದೆ. ಅದೇ ರೀತಿ ಅಟ್ಲಾಂಟಾ ಫುಡ್ ಬ್ಯಾಂಕ್ ಗೆ ಆರ್ಥಿಕ ನೆರವು ನೀಡಿದೆ.

ಕೊರೊನ ಮಹಾಮಾರಿಯ ಹಾವಳಿಯನ್ನು ಎದುರಿಸಲು ಸಹಾಯವಾಗುವಂತೆ ಹಲವಾರು ಮಾಹಿತಿ ಕಾರ್ಯಗಾರಗಳನ್ನು ಹಮ್ಮಿಕೊಂಡಿತ್ತು ಹಾಗು ಭಾರತದ ಸೆಂಟರ್ ಫಾರ್ ವೈಲ್ಡ್ಲೈಫ್ ಸರ್ವಿಸಸ್ (Center for Wildlife Services) ಸಹಯೋಗದೊಂದಿಗೆ ಕೊರೊನ ಪರಿಹಾರ ವ್ಯವಸ್ಥೆಯನ್ನು ಮಾಡಿದೆ.

ತುಳು ಭಾಷ ಕಲಿಕಾ ಕಾರ್ಯಗಾರವನ್ನು ತುಳು ಕೂಟದ ಸಹಯೋಗದೊಂದಿಗೆ ಹಮ್ಮಿಕೊಂಡಿತ್ತು. ಅಮೇರಿಕಾದ ಬಾನ ಸದಸ್ಯರ ಮಕ್ಕಳಿಗೆ ಅನುಕೂಲವಾಗುವಂತೆ ವಿದ್ಯಾರ್ಥಿವೇತನ ವ್ಯವಸ್ಥೆಯನ್ನು ಮಾಡಲಾಗಿದೆ.

ಬಾನ ಸಂಸ್ಥೆ ಯ ಈ ವರ್ಷದ ಸಮಾವೇಶದ ಯಶಸ್ಸಿಗೆ ಹಲವಾರು ಗಣ್ಯರು ಶುಭ ಹಾರೈಸಿದ್ದಾರೆ. ಕಾರ್ಯಕ್ರಮದ ಹೆಚ್ಚಿನ ವಿವರಗಳಿಗೆ https://bana.org/ ಅಥವಾ ಈಮೈಲ್ [email protected] ವಿಳಾಸಕ್ಕೆ ಸಂಪರ್ಕಿಸಬಹುದು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು