ನ್ಯೂಯಾರ್ಕ್: ದೀಪಾವಳಿಯನ್ನು ಫೆಡರಲ್ ರಜಾದಿನವನ್ನಾಗಿ ಮಾಡುವ ಮಸೂದೆಯನ್ನು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ನ ಡೆಮೋಕ್ರಾಟ್ ಸದಸ್ಯರಾದ ಗ್ರೇಸ್ ಮೆಂಗ್ ಅವರು ಮಂಡಿಸಿದ್ದಾರೆ.
ನನ್ನ ದೀಪಾವಳಿ ರಜಾ ದಿನದ ಕಾಯಿದೆಯು ಎಲ್ಲಾ ಅಮೆರಿಕನ್ನರಿಗೆ ಈ ದಿನದ ಪ್ರಾಮುಖ್ಯತೆಯ ಬಗ್ಗೆ ತಿಳಿಸುವ ಒಂದು ಹೆಜ್ಜೆಯಾಗಿದೆ ಅಲ್ಲದೆ ಅಮೆರಿಕಾದ ವೈವಿಧ್ಯತೆಗೆ ಇದು ಸಾಕ್ಷಿ ಒದಗಿಸುತ್ತದೆ ಎಂದು ಅವರು ಹೇಳಿದ್ದಾರೆ. “ದೀಪಾವಳಿಯು ಪ್ರಪಂಚದಾದ್ಯಂತದ ಶತಕೋಟಿ ಜನರಿಗೆ ಪ್ರಮುಖ ಪರ್ವವಾಗಿದೆ ಎಂದು ಅವರು ಹೇಳಿದ್ದಾರೆ.
ಮಸೂದೆಯಲ್ಲಿ ಹೀಗೆ ನಮೂದಾಗಿದ್ದು, ಮಿಲಿಯಗಟ್ಟಲೆ ಅಮೆರಿಕನ್ನರು, ಧಾರ್ಮಿಕ ಮತ್ತು ಜಾತ್ಯತೀತರು, ದೀಪಾವಳಿಯನ್ನು ಆಚರಿಸುತ್ತಾರೆ, ಇದನ್ನು ‘ದೀಪಗಳ ಹಬ್ಬ’ ಎಂದೂ ಕರೆಯುತ್ತಾರೆ ಎಂದು ಹೇಳಿದೆ. ಮಸೂದೆಯನ್ನು ಹೌಸ್ನ 14 ಸದಸ್ಯರು ಪ್ರಾಯೋಜಿಸಿದ್ದಾರೆ. 13 ಡೆಮೋಕ್ರಾಟ್ಗಳು ಮತ್ತು ರಿಪಬ್ಲಿಕನ್ – ಮತ್ತು ವ್ಯಾಪಕ ಬೆಂಬಲ ವ್ಯಕ್ತಪಡಿಸಿದ್ದಾರೆ.
ದೀಪಾವಳಿ ದಿನದ ಕಾಯಿದೆಯನ್ನು ಕಾಂಗ್ರೆಸ್ ಅಳವಡಿಸಿಕೊಂಡರೆ, ಇದು 12 ನೇ ಫೆಡರಲ್ ರಜಾದಿನವಾಗಿ ಪರಿಣಮಿಸುತ್ತದೆ. ಅಲ್ಲದೆ ಕ್ರಿಸ್ಮಸ್ ನಂತರದ ಎರಡನೇ ಧಾರ್ಮಿಕ ರಜಾದಿನವಾಗಿ ಪರಿಗಣಿತವಾಗುತ್ತದೆ. ಮಸೂದೆಯನ್ನು ಮೇ 15 ರಂದು ಪರಿಚಯಿಸಲಾಗಿದ್ದು, ಅದೇ ದಿನ ಮೇಲ್ವಿಚಾರಣೆ ಮತ್ತು ಹೊಣೆಗಾರಿಕೆಯ ಸದನ ಸಮಿತಿಗೆ ರವಾನಿಸಲಾಗಿದೆ. ಮುಂದೆ ಅದಕ್ಕೆ ಸದನದ ಅನುಮೋದನೆ ಅಗತ್ಯವಿದೆ.