News Kannada
Sunday, February 25 2024
ಅಮೇರಿಕಾ

ಅಮೇರಿಕಾದಲ್ಲಿ ತುಳು ತರಗತಿಗಳ ಉದ್ಘಾಟನೆ; ಭಾರತದ ಪುರಾತನ ಭಾಷೆಯನ್ನು ಉಳಿಸಿ ಬೆಳೆಸುವ ಉದ್ದೇಶ

ಆಲ್‌ ಇಂಡಿಯಾ ತುಳು ಅಸೋಸಿಯೇಷನ್‌ ಆಯೋಜಿಸಿದ ʼಬಲೆ ತುಳು ಪಾತೆರ್ಗಾʼದ ೨೦೨೪ರ ಬ್ಯಾಚ್‌ನ ಉದ್ಘಾಟನೆಯಾಗಿದ್ದು, ವರ್ಚುವಲ್‌ ಆಗಿ ನಡೆದ ಕಾರ್ಯಕ್ರಮದಲ್ಲಿ ಜಗತ್ತಿನಾದ್ಯಂತ ಇರುವ ತುಳು ಕಲಿಕಾ ಆಸಕ್ತರು ಭಾಗವಹಿಸಿದರು. ೨೦೨೩ರ ಮೊದಲ ಬ್ಯಾಚ್‌ನ ಯಶಸ್ವಿ ಮುಕ್ತಾಯದ ನಂತರ ಎರಡನೆ ಬ್ಯಾಚ್‌ ಪ್ರಾರಂಭವಾಗಿದೆ.
Photo Credit : News Kannada

ಅಮೇರಿಕಾ: ಆಲ್‌ ಇಂಡಿಯಾ ತುಳು ಅಸೋಸಿಯೇಷನ್‌ ಆಯೋಜಿಸಿದ ʼಬಲೆ ತುಳು ಪಾತೆರ್ಗಾʼದ 2024ರ ಬ್ಯಾಚ್‌ನ ಉದ್ಘಾಟನೆಯಾಗಿದ್ದು, ವರ್ಚುವಲ್‌ ಆಗಿ ನಡೆದ ಕಾರ್ಯಕ್ರಮದಲ್ಲಿ ಜಗತ್ತಿನಾದ್ಯಂತ ಇರುವ ತುಳು ಕಲಿಕಾ ಆಸಕ್ತರು ಭಾಗವಹಿಸಿದರು. 2023ರ ಮೊದಲ ಬ್ಯಾಚ್‌ನ ಯಶಸ್ವಿ ಮುಕ್ತಾಯದ ನಂತರ ಎರಡನೆ ಬ್ಯಾಚ್‌ ಪ್ರಾರಂಭವಾಗಿದೆ.

ಸಮಾರಂಭದಲ್ಲಿ ತುಳು ಭಾಷೆಯ ಕಲಿಯುವಿಕೆ ಹಾಗು ಉಳಿಸುವಿಕೆಯ ಬಗ್ಗೆ ಚರ್ಚೆಯಾಗಿದ್ದು, ಪುರಾತನ ಭಾಷೆಗಳಲ್ಲಿ ಒಂದಾದ ತುಳುವಿನ ಸಾಂಸ್ಕೃತಿಕ ಮಹತ್ವದ ಬಗ್ಗೆ ಆಹ್ವಾನಿತರು ಮಾತನಾಡಿದರು.

ಈ ಸಂದರ್ಭದಲ್ಲಿ ತುಳು ಭಾಷೆಯ ಇತಿಹಾಸದ ಬಗ್ಗೆ ಮಾತನಾಡಿದ ಮುಂಬೈ ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕಿ ಡಾ.ಪೂರ್ಣಿಮಾ ಶೆಟ್ಟಿ, ಮಕ್ಕಳಿಗೆ ತುಳು ಕಲಿಸುವಲ್ಲಿ ಪೋಷಕರ ಪಾತ್ರದ ಬಗ್ಗೆ ತಿಳಿಸಿದರು.

AATA ನಿರ್ದೇಶಕ ಮಿಚಿಗನ್‌ ಪ್ರಶಾಂತ್‌ ಕುಮಾರ್‌ ರಚನೆಯ ತುಳುನಾಡಿನ ಸಂಸ್ಕೃತಿಯನ್ನು ಬಿಂಬಿಸುವ ʼವಾ ಪೋರ್ಲುಯಾʼ ತುಳು ಹಾಡನ್ನು ಪೂರ್ಣಿಮಾ ಶೆಟ್ಟಿ ಬಿಡುಗಡೆ ಮಾಡಿದರು. ಇದನ್ನು ಹಾಡಿದ ವಿಶ್ವೇಶ್‌ ಭಟ್‌ ಸಂಗೀತ ಸಂಯೋಜನೆಯನ್ನೂ ಮಾಡಿದ್ದಾರೆ.

ಬಲೆ ತುಳು ಪಾತೆರ್ಗಾದ ಪಠ್ಯಕ್ರಮ ಹಾಗು ವೇಳಾಪಟ್ಟಿಯ ಬಗ್ಗೆ ಮಾಹಿತಿ ನೀಡಿದ AATAದ ಸಂಸ್ಥಾಪಕ ಅಧ್ಯಕ್ಷ ಭಾಸ್ಕರ್‌ ಶೇರಿಗಾರ್‌, ಭಾಗವಹಿಸಿದ ಪ್ರತಿಯೊಬ್ಬರೂ ತರಗತಿಗಳ ಕೊನೆಯಲ್ಲಿ ತುಳುವಿನಲ್ಲಿ ಸಂಭಾಷಿಸಲು ಸಮರ್ಥರಾಗುವ ಬಗ್ಗೆ ಭರವಸೆ ನೀಡಿದ್ದಾರೆ.

AATA ರಾಯಭಾರಿ ರಿತೇಶ್‌ ಶೆಟ್ಟಿ, ಅಧ್ಯಕ್ಷರಾದ ಶ್ರೀವಳ್ಳಿ ರೈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು