ವಾಷಿಂಗ್ಟನ್: ಭಾರತ ಇತ್ತೀಚೆಗೆ ಬಾಸ್ಮತಿಯೇತರ ಬಿಳಿ ಅಕ್ಕಿ ರಫ್ತಿನ ಮೇಲೆ ನಿಷೇಧ ಹೇರಿದ ನಂತರ ಅಮೆರಿಕದಾದ್ಯಂತ ಜನರು ಆತಂಕಗೊಂಡಿದ್ದು ಅಕ್ಕಿ ಖರೀದಿಗೆ ಮುಗಿಬಿದ್ದಿದ್ದಾರೆ. ಅಕ್ಕಿ ಖರೀದಿ, ಸಂಗ್ರಹಣೆಗೆ ಜನ ಧಾವಿಸುತ್ತಿದ್ದು, ಬೆಲೆ ಸಿಕ್ಕಾಪಟ್ಟೆ ಏರಿಕೆ ಆಗಿದೆ. ಭಾರತವು ಪ್ರಮುಖ ಅಕ್ಕಿ ರಫ್ತುದಾರನಾಗಿರುವುದರಿಂದ ಕಳೆದ ವಾರ ಘೋಷಿಸಲಾದ ನಿಷೇಧವು ಜಾಗತಿಕ ಆಹಾರ ಮಾರುಕಟ್ಟೆಯಲ್ಲಿ ಆಘಾತವನ್ನು ಉಂಟುಮಾಡಿದೆ. ವಾಷಿಂಗ್ಟನ್‌ನಲ್ಲಿ ವಾಸಿಸುವ ಅರುಣಾ ಎಂಬುವವರು ಈ ಬಗ್ಗೆ ಮಾತನಾಡಿ ಆತಂಕ ಹೊರಹಾಕಿದ್ದಾರೆ.
‘ನಾನು ಸುಮಾರು 10 ಕ್ಕಿಂತಲೂ ಹೆಚ್ಚು ಸ್ಟೋರ್‌ಗಳಿಗೆ ಭೇಟಿ ನೀಡಿದ್ದೇನೆ. ನಾನು ಬೆಳಿಗ್ಗೆ 9 ಗಂಟೆಗೆ ಸೋನಾ ಮಸೂರಿ ಅಕ್ಕಿ ಚೀಲವನ್ನು ಹುಡುಕಲು ಪ್ರಾರಂಭಿಸಿದೆ. ಸಂಜೆ 4 ಗಂಟೆಗೆ ಮೂರು ಪಟ್ಟು ಬೆಲೆಗೆ ಒಂದು ಅಕ್ಕಿ ಚೀಲ ಸಿಕ್ಕಿತು ಎಂದಿದ್ದಾರೆ.
Those who call Indian Christians ‘Rice Bag Converts’ are rioting to hoard rice bags in Texas! pic.twitter.com/r8df7oylHN
— Ashok Swain (@ashoswai) July 26, 2023
ಅನಿವಾಸಿ ಭಾರತೀಯರು ಭಾರತೀಯ ಪಾಕಪದ್ಧತಿಯಲ್ಲಿ ಪ್ರಧಾನವಾದ ಬಾಸ್ಮತಿ ಅಲ್ಲದ ಬಿಳಿ ಅಕ್ಕಿಯನ್ನು ತಮ್ಮ ಪೂರೈಕೆಯನ್ನು ಪಡೆಯಲು ಹರಸಾಹಸ ಮಾಡುತ್ತಿರುವಾಗ ನಿಷೇಧದ ಸುದ್ದಿ ಹೊಡೆತ ನೀಡಿದೆ. ದೈತ್ಯ ಮಳಿಗೆಗಳಲ್ಲಿ ಉಳಿದಿರುವ ಅಕ್ಕಿ ಚೀಲಗಳನ್ನು ಖರೀದಿಸಲು ಜನರು ಮುಗಿ ಬೀಳುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ.
Rice bag NRIs standing in line to collect rice in the US,just like how they stand in front of a ration shop.pic.twitter.com/L0YqEwqrsa
— Брат (@B5001001101) July 25, 2023
ಸಪ್ನಾ ಫುಡ್ಸ್‌ನಲ್ಲಿ, ಮೇರಿಲ್ಯಾಂಡ್‌ನ ಸಗಟು ಮಾರಾಟಗಾರ, ಮಾಲೀಕ ತರುಣ್ ಸರ್ದಾನ ಅವರು ಅಕ್ಕಿಗೆ ಭಾರೀ ಬೇಡಿಕೆ ಇದೆ ಎಂದು ಹೇಳಿದ್ದಾರೆ.