ಲಂಡನ್: ಕೇಂಬ್ರಿಡ್ಜ್ ಜಡ್ಜ್ ಬ್ಯುಸಿನೆಸ್ ಸ್ಕೂಲ್‌ನಲ್ಲಿ ಎಂಬಿಎ ವಿದ್ಯಾರ್ಥಿಗಳೊಂದಿಗೆ “21 ನೇ ಶತಮಾನದಲ್ಲಿ ಕೇಳಲು ಕಲಿಯುವುದು” ಎಂಬ ವಿಷಯದ ಕುರಿತು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಮಾತನಾಡಿದರು.
ಪ್ರಜಾಪ್ರಭುತ್ವ ತಳಹದಿ ಹೊಂದಿರುವ ಭಾರತ ಮತ್ತು ಅಮೆರಿಕದಲ್ಲಿ ಉತ್ಪಾದನಾ ವಲಯ ಕುಂಟುತ್ತಾ ಸಾಗಿದೆ. ಆದರೆ ಆ ಸ್ಥಾನವನ್ನು ಚೀನಾ ಅತಿಕ್ರಮಿಸಿದೆ ಎಂದು ತಿಳಿಸಿದರು.
ಭಾರತದಲ್ಲಿ ಪ್ರಜಾಪ್ರಭುತ್ವದ ಮೂಲ ಅಂಶಗಳಿಗೆ ಧಕ್ಕೆಯಾಗಿದೆ ಎಂದು ರಾಹುಲ್ ಗಾಂಧಿ ಇದೇ ವೇಳೆ ಪ್ರತಿಪಾದಿಸಿದರು.