NewsKarnataka
Friday, November 26 2021

ಮುಂಬೈ

ಏರ್‌ಟೆಲ್ ನಿಂದ ಹೊಸ ಪ್ಲ್ಯಾನ್ ಘೋಷಣೆ

ಮುಂಬೈ : ಟೆಲಿಕಾಂ ಕಂಪನಿಗಳು ಗ್ರಾಹಕರಿಗೆ ಆಕರ್ಷಕ ರಿಚಾರ್ಜ್ ಪ್ಲ್ಯಾನ್ ಗಳನ್ನ ನೀಡುತ್ತಲೇ ಇದ್ದು, ಇದೀಗ ದೇಶದ ಪ್ರಮುಖ ಟೆಲಿಕಾಂ ಕಂಪನಿಗಳಲ್ಲಿ ಒಂದಾದ ಏರ್‌ಟೆಲ್ ಹೊಸದೊಂದು ಆಫರ್ ಒಂದನ್ನು ಘೋಷಿಸಿದೆ. ತನ್ನ ನೆಟ್‌ವರ್ಕ್ ಅಡಿಯಲ್ಲಿ ಹೆಚ್ಚು ಗ್ರಾಹಕರನ್ನು ಸೆಳೆಯಲು ಏರ್‌ಟೆಲ್ ಕಂಪೆನಿ ಇದೀಗ ‘ಏರ್‌ಟೆಲ್ ಬ್ಲ್ಯಾಕ್’ ಎಂಬ ನೂತನ ಯೋಜನೆಯನ್ನು ಬಿಡುಗಡೆ ಮಾಡಿದ್ದು, ಈ ಆಫರ್ ನಲ್ಲಿ ಏರ್‌ಟೆಲ್ ನೆಟ್‌ವರ್ಕ್‌ ಮತ್ತು ಫೈಬರ್ ಸಂಪರ್ಕ ಸೇರಿದಂತೆ ಡಿಟಿಎಚ್ ಸೇವೆಯನ್ನು ಸಹ ಒಂದೇ ರೀಚಾರ್ಜ್ ಅಡಿಯಲ್ಲಿ ಪಡೆದುಕೊಳ್ಳಬಹುದಾಗಿದೆ.

 ಟೆಲಿಕಾಂ ಉದ್ಯಮದಲ್ಲೇ ಮೊಟ್ಟ ಮೊದಲ ಮತ್ತು ಏಕೈಕ ಸೇವೆಯಾಗಿ ‘ಏರ್‌ಟೆಲ್ ಬ್ಲ್ಯಾಕ್’ ಯೋಜನೆ ಬಿಡುಗಡೆಯಾಗಿದ್ದು, ಈ ಸೇವೆಯಲ್ಲಿ ನಿಮ್ಮ ಎಲ್ಲಾ ಏರ್‌ಟೆಲ್ ಸೇವೆಗಳಿಗೆ ಒಂದೇ ಒಂದು ರೀಚಾರ್ಜ್ ಯೋಜನೆ ಸಾಕೆಂದು ಕಂಪೆನಿ ತಿಳಿಸಿದೆ. ಏರ್‌ಟೆಲ್ ನೆಟ್‌ವರ್ಕ್‌ ಮತ್ತು ಫೈಬರ್ ಸಂಪರ್ಕ ಸೇರಿದಂತೆ ಡಿಟಿಎಚ್ ಸೇವೆಗಳು ಸೇರಿದಂತೆ, ಏರ್‌ಟೆಲ್ ಬ್ಲ್ಯಾಕ್‌ಗೆ ಸೇರುವ ಮೂಲಕ ನೀವು ಇನ್ನೂ ಹಲವು ಪ್ರಯೋಜನಗಳನ್ನು ಪಡೆಯಬಹುದು ಮತ್ತು ಹೆಚ್ಚು ಜವಾಬ್ದಾರಿಯಿಂದ ಮುಕ್ತರಾಗಬಹುದು ಎಂದು ಏರ್‌ಟೆಲ್ ತನ್ನ ಜಾಹಿರಾತುವಿನಲ್ಲಿ ತಿಳಿಸಿದೆ.

ಏರ್‌ಟೆಲ್ ಬ್ಲ್ಯಾಕ್ ಮೂಲಕ ಬಳಕೆದಾರರು ಅವರ ಅಗತ್ಯಗಳಿಗೆ ಅನುಗುಣವಾಗಿ ಯೋಜನೆಗಳನ್ನು ಕಸ್ಟಮೈಸ್ ಮಾಡಲು ಆಯ್ಕೆ ನೀಡಲಾಗಿದ್ದು, ಇದಕ್ಕಾಗಿ ಏರ್‌ಟೆಕ್ ನಾಲ್ಕು ನೂತನ ಪ್ಲಾನ್ ಗಳನ್ನು ಬಿಡುಗಡೆ ಮಾಡಿದೆ. ರೂ. 998 ರಿಂದ ರೂ. 2099 ವರೆಗೆ ಲಭ್ಯವಿರುವ ಈ ಯೋಜನೆಗಳ ವಿವಿಧ ಸಂಯೋಜನೆಯಲ್ಲಿ ಡಿಟಿಎಚ್+ ಮೊಬೈಲ್, ಫೈಬರ್+ ಮೊಬೈಲ್ ಮತ್ತು ಆಲ್ ಇನ್ ಒನ್ ಯೋಜನೆಗಳು ಸೇರಿದ್ದು, ಏರ್‌ಟೆಲ್ ಆಪ್ ಮೂಲಕ ಅಥವಾ https://www.airtel.in/airtel-black ಗೆ ಭೇಟಿ ನೀಡಿ ಈ ಎಲ್ಲಾ ಯೋಜನೆಗಳ ಲಾಭ ಪಡೆಯಬಹುದಾಗಿದೆ.

ಇನ್ನು ಏರ್‌ಟೆಲ್ ಬ್ಲ್ಯಾಕ್ ಆಫರ್ ಅಡಿಯಲ್ಲಿ, ಏರ್‌ಟೆಲ್ ಕಂಪೆನಿಯ ಯಾವುದೇ ಏರ್‌ಟೆಲ್ ಬ್ಲ್ಯಾಕ್ ರೀಚಾರ್ಜ್‌ ಮೇಲೆ 30 ದಿನಗಳವರೆಗೆ ಉಚಿತ ಸೇವೆಯನ್ನು ನೀಡುತ್ತಿದೆ. ಗ್ರಾಹಕರು ಹೊಸ ಸೇವೆ ಏರ್‌ಟೆಲ್ ಬ್ಲಾಕ್‌ಗೆ ಸೇರಿಕೊಂಡರೆ, ಆ ಸೇವೆಗಾಗಿ ನೀವು ಯಾವುದೇ ಪ್ರತ್ಯೇಕ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಅಲ್ಲದೆ, ಗ್ರಾಹಕರು ಏರ್‌ಟೆಲ್ ಬ್ಲ್ಯಾಕ್ ಪ್ಲಾನ್ ನೊಂದಿಗೆ ಯಾವುದೇ ಹೊಸ ಏರ್‌ಟೆಲ್ ಸೇವೆಗೆ ಸೈನ್ ಅಪ್ ಮಾಡಿದರೆ, ಮುಂದಿನ 30 ದಿನಗಳವರೆಗೆ ಆ ಸೇವೆ ಸಂಪೂರ್ಣ ಉಚಿತವಿದ್ದು ಯಾವುದೇ ವೆಚ್ಚವನ್ನು ಪಾವತಿಸಬೇಕಾಗಿಲ್ಲ ಎಂದು ಕಂಪೆನಿ ತಿಳಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

Leave a Reply

Your email address will not be published. Required fields are marked *

News Kannada

The most exciting, trusted and preferred news websites of Karnataka and Kannadigas around the world.

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

error: Content is protected !!