ದುಬೈ: ಕನ್ನಡಿಗರು ದುಬೈ ಸಾರಥ್ಯದಲ್ಲಿ ಮತ್ತು ಜಿಸಿಸಿ ಕನ್ನಡ ಸಂಘಟನೆಗಳ ಸಹಯೋಗದೊಂದಿಗೆ “ಸಂಗೀತ ಸೌರಭ 2021” ಗಲ್ಫ್ ಗಾನ ಕೋಗಿಲೆ, ಮಕ್ಕಳ ಸಂಗೀತ ಸ್ಪರ್ಧೆಯನ್ನು ಗಲ್ಫ್ ಮಟ್ಟದಲ್ಲಿ ಮೇ.28ರಂದು ದುಬೈ ಅಡಿಟೋರಿಯಂನಲ್ಲಿ ಆಯೋಜಿಸಲಾಗಿದೆ.
ಜೂನಿಯರ್ ವಿಭಾಗದಲ್ಲಿ ನಿಶೆಲ್ ಲೋಬೋ ಯುಎಇ, ಶನಲ್ ಯುಎಇ, ರೋಶ್ನಿ ಓಮನ್, ಶರವಾಣಿ ಓಮನ್, ಮನ್ವಿತ್ ಬಹರಿನ್, ಸಮನ್ವಿ ಖತರ್, ಹಾಗೂ ಸೀನಿಯರ್ ವಿಭಾಗದಲ್ಲಿ ಅರುಶ್ ಓಮನ್, ಬಾಲ ಬಹರಿನ್, ಸೂರಜ್ ಓಮನ್, ಸನ್ನಿದಿ ಯುಎಇ, ಭಾಗ್ಯಶ್ರೀ ಕುವೈತ್, ಅನನ್ಯ ಓಮನ್ ಭಾಗಿಯಾಗಲಿದ್ದಾರೆ.
ಕಾರ್ಯಕ್ರಮದಲ್ಲಿ ಚಿನ್ಮಯಿ ಅತ್ರೆಯಾಸ್, ಹರೀಶ್ ಶೆಟ್ಟಿಗಾರ್, ಶ್ರೀಮತಿ ಮಾನಸ ಹೊಳ್ಳ ತೀರ್ಪುಗಾರರಾಗಿ ಭಾಗಿಯಾಗಲಿದ್ದಾರೆ. ಕಾರ್ಯಕ್ರಮದ ಪ್ರಾಯೋಜಕತ್ವವನ್ನು ಮೊಹಮ್ಮದ್ ಮುಸ್ತಫ್ಫಾ ವಹಿಸಿಕೊಂದ್ದಾರೆ.
ಈ ಸಂದರ್ಭದಲ್ಲಿ ಸಿಲ್ಲಿ ಲಲ್ಲಿ ಖ್ಯಾತಿಯವರ ಚೌಕಾ ಬಾರ ಸಿನಿಮಾದ ಮೋಷನ್ ಪೋಸ್ಟರ್ ಬಿಡುಗಡೆಗೊಳ್ಳಲಿದೆ.
ಈ ಕಾರ್ಯಕ್ರಮ ನ್ಯೂಸ್ ಕರ್ನಾಟಕ ಯೂಟ್ಯೂಬ್ ಚಾನಲ್ನಲ್ಲಿ ನೇರಪ್ರಾಸಾರವಾಗಲಿದೆ.