News Kannada
Wednesday, September 28 2022

ಸಾಂಡಲ್ ವುಡ್

ದುಬೈಯಲ್ಲಿ “ವಿಕ್ರಾಂತ್ ರೋಣ” ಬಿಡುಗಡೆ, ಪ್ರಿಮೀಯರ್ ಶೋ ದಲ್ಲಿ ಕಿಚ್ಚ ಸುದೀಪ್ ಸಾಥ್ - 1 min read

'Vikrant Rona' to be released in Dubai, Kichcha Sudeep joins premiere show
Photo Credit : News Kannada

ದುಬೈ: ವಿಶ್ವದಾದ್ಯಂತ ವೀಕ್ಷಕರು ಕಾತರದಿಂದ ಎದುರು ನೋಡುತ್ತಿರುವ ಬಹು ನಿರೀಕ್ಷೆಯ “ವಿಕ್ರಾಂತ್ ರೋಣ” ಕಿಚ್ಚ ಸುದೀಪ್‌ರವರ ಸಿನಿ ಪಯಣದ ಅತ್ಯುತ್ತಮ ತಂತ್ರಜ್ಞಾನದಲ್ಲಿ ಕಲ್ಪನಾಲೋಕದ ಸಾಹಸಮಯ ರೋಮಾಂಚಕ ಚಿತ್ರವಾಗಿದೆ. ವಿಶ್ವದ ಚಿತ್ರರಂಗದ ಇತಿಹಾಸದಲ್ಲೇ, ಪ್ರಥಮ ಬಾರಿಗೆ ದುಬಾಯಿಯಲ್ಲಿ ಎನ್.ಎಫ್.ಟಿ ‘ಬ್ಲಾಕ್ ಟಿಕೇಟ್ಸ್’ ಪ್ರೀಮಿಯರ್ ಮೆಂಬರ್ ಶಿಪ್‌ನಲ್ಲಿ ವೀಕ್ಷಕರು ವೀಕ್ಷಿಸುವ ಪ್ರೀಮಿಯರ್ ಶೋ “ವಿಕ್ರಾಂತ್ ರೋಣ” ಐತಿಹಾಸಿಕ ದಾಖಲೆಯನ್ನು ನಿರ್ಮಿಸಲಿದೆ.

ದುಬಾಯಿ ದೇರಾ ಸಿಟಿ ಸೆಂಟರ್‌ನಲ್ಲಿ ಪ್ರತಿಷ್ಠಿತ ವಾಕ್ಸ್ ಸಿನೆಮಾ ದಲ್ಲಿ ಜುಲೈ 27ನೇ ತಾರೀಕು ರಾತ್ರಿ 7 ಗಂಟೆಗೆ “ವಿಕ್ರಾಂತ್ ರೋಣ” ಪ್ರೀಮಿಯರ್ ಶೋ ತೆರೆಯ ಮೇಲೆ ಮೂಡಿ ಬರಲಿದ್ದು ಪ್ರೇಕ್ಷಕರೊಂದಿಗೆ ಕಿಚ್ಚ ಸುದೀಪ್ ಮತ್ತು ತಂಡದವರು ಭಾಗವಹಿಸಲಿದ್ದಾರೆ. ಅಭಿನವ್ ಗಾರ್ಗ್ ಮಾಲಿಕತ್ವದ ಎನ್.ಎಫ್.ಟಿ. (ನಾನ್ ಫಂಜಿಬಲ್ ಟೋಕನ್) ‘ಬ್ಲಾಕ್ ಟಿಕೇಟ್ಸ್’ ಪ್ಲಾಟ್ ಫಾರಂ ತಂತ್ರಜ್ಞಾನದ ಮೆಂಬರ್ ಶಿಪ್ ಪಡೆದು ಪಾಸ್ ಖರೀದಿಸಿ ಪ್ರೀಮಿಯರ್ ಶೋ “ವಿಕ್ರಾಂತ್ ರೋಣ” ವನ್ನು ಕಿಚ್ಚ ಸುದೀಪ್ ರವರೊಂದಿಗೆ ವೀಕ್ಷಿಸುವ ಸುವರ್ಣಕಾಶ ಯೋಜಿಸಲಾಗಿದೆ.

“ವಿಕ್ರಾಂತ್ ರೋಣ” ಪ್ರೀಮಿಯರ್ ಶೋ ವೀಕ್ಷಿಸಲು ಎನ್.ಎಫ್.ಟಿ. ‘ಬ್ಲಾಕ್ ಟಿಕೇಟ್ಸ್’ ಪ್ಲಾಟ್ ಫಾರಂ ನಲ್ಲಿ ಸದಸ್ಯತ್ವ ಪಡೆಯಲು ಕೇವಲ ಐನೂರು ಸಂಖ್ಯೆಯಲ್ಲಿ ಮಾತ್ರ ಲಭ್ಯವಿದೆ. ಸಿಲ್ವರ್, ಗೋಲ್ಡ್, ಪ್ಲಾಟಿನಂ ಮತ್ತು ಡೈಮಂಡ್ ವಿಭಾಗದಲ್ಲಿ ಪಾಸ್ ಪಡೆದವರಿಗೆ ಎರಡು ಮಂದಿಗೆ ಪ್ರವೇಶ ಅವಕಾಶವಿದೆ. ಪೂರ್ತಿ ವಿವರಗಳು ವೆಬ್ ಸೈಟಿನಲ್ಲಿ ಲಭ್ಯವಿದೆ.

ಎನ್.ಎಫ್.ಟಿ. ‘ಬ್ಲಾಕ್ ಟಿಕೇಟ್ಸ್’ ಪ್ರೀಮಿಯರ್ ಮೆಂಬರ್ ಶಿಫ್ ಪಡೆಯಲು, ಕಾಫಿ ಅಂಡ್ ಬನ್ ಇನೊವೇಶನ್ ಗ್ಲೋಬಲ್ ಇನ್‌ವೆಸ್ಟ್ಮೆಂಟ್ ಕಂಪೆನಿಯ ಮಾಲಿಕರು ಪ್ರಿಯಾ ಸುದೀಪ್ ಮತ್ತು ಝಾಕಿರ್ ಹುಸ್ಸೈನ್ ಕರೀಂ ಖಾನ್ ಇವರುಗಳು “ವಿಕ್ರಾಂತ್ ರೋಣ” ಸಿನೆಮಾಕ್ಕಾಗಿ ಎನ್.ಎಫ್.ಟಿ. ‘ಬ್ಲಾಕ್ ಟಿಕೇಟ್ಸ್’ ಸಂಸ್ಥೆಗೆ ಅನುಮತಿ ನೀಡಿದ್ದಾರೆ. 27ನೇ ತಾರೀಕಿನಂದು ಪ್ರೀಮಿಯರ ಶೋದಲ್ಲಿ ಭಾಗವಹಿಸಲು ಸದಸ್ಯರಿಗೆ ರೆಡ್ ಕಾರ್ಪೆಟ್ ಸ್ವಾಗತ ದೊರೆಯಲಿದೆ ಹಾಗೂ ಕಿಚ್ಚ ಸುದೀಪ್ ರವರೊಂದಿಗೆ “ವಿಕ್ರಾಂತ್ ರೋಣ” ವೀಕ್ಷಿಸುವ ಅವಕಾಶ ದೊರೆಯಲಿದೆ.

“ವಿಕ್ರಾಂತ್ ರೋಣ” ವಿಶ್ವಾದಾದ್ಯಂತ ಜುಲೈ 28 ರಂದು ಬಿಡುಗಡೆ
2022 ಜುಲೈ 28 ರಂದು ಭಾರತ ಹಾಗೂ ವಿಶ್ವದ 55 ದೇಶಗಳಲ್ಲಿ “ವಿಕ್ರಾಂತ್ ರೋಣ” ಕನ್ನಡ ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ ಒಟ್ಟು ಹದಿನಾಲ್ಕು ಭಾಷೆಗಳಲ್ಲಿ ಇಂಗ್ಲೀಷ್, ಜರ್ಮನ್ ಮತ್ತು ಸ್ಪಾನೀಶ್ ಭಾಷೆಗಳಲ್ಲಿಯೂ ಸಹ ಸಿನಿ ಪ್ರೇಕ್ಷಕರನ್ನು ರಂಜಿಸಲಿದೆ.

“ವಿಕ್ರಾಂತ್ ರೋಣ” ಪಕ್ಷಿನೋಟ.
“ವಿಕ್ರಾಂತ್ ರೋಣ” ಕಲ್ಪನಾ ಲೋಕವನ್ನು ಸೃಷ್ಠಿಸಿ, ಸಾಹಸ, ರೋಮಾಂಚಕ ತಂತ್ರಜ್ಞಾನದಲ್ಲಿ ಅನೂಪ್ ಭಂಡಾರಿಯವರ ನಿರ್ದೇಶನದಲ್ಲಿ ಮೂಡಿ ಬಂದಿದೆ. ಪ್ರಧಾನ ಪಾತ್ರದ ನಾಯಕ ನಟ ಕಿಚ್ಚ ಸುದೀಪ್ರವರ ಅದ್ಭುತ ನಟನೆಯಯೊಂದಿಗೆ ಸಾಥ್ ನೀಡಿರುವ ಕಲಾವಿದರು ಜಾಕ್ಲಿನ್ ಫೆರ್ನಾಂಡಿಸ್, ನಿರೂಪ್ ಭಂಡಾರಿ, ನೀತಾ ಅಶೋಕ್, ರವಿಶಂಕರ್ ಗೌಡ, ವಾಸುಕಿ ಪ್ರಭುದೇವ್ ಪ್ರಮುಖ ಪಾತ್ರಧಾರಿಗಳು. ಅತೀ ದೊಡ್ಡ ಬಜೆಟ್ ನಲ್ಲಿ ನಿರ್ಮಾಣವಾಗಿರುವ “ವಿಕ್ರಾಂತ್ ರೋಣ” ವಿಶ್ವದ ಮೊದಲ ಎನ್.ಎಫ್.ಟಿ. ‘ಬ್ಲಾಕ್ ಟಿಕೇಟ್ಸ್’ ಪ್ರೀಮಿಯರ್ ಶೋದಲ್ಲಿ ವೀಕ್ಷಿಸಲು ಬರುವ ಅಭಿಮಾನಿ ಪ್ರೇಕ್ಷಕರೊಂದಿಗೆ ನೇರ ಮಾತುಕತೆಗಳ ವಿಚಾರ ವಿನಿಮಯಕ್ಕಾಗಿ ಕಿಚ್ಚ ಸುದೀಪ್ ಅತ್ಯಂತ ಕಾತರದಿಂದ ಇದ್ದಾರೆ.

See also  ಮನಿಲಾ: ಫಿಲಿಪ್ಪೀನ್ಸ್ ಅಧ್ಯಕ್ಷ ಮಾರ್ಕೋಸ್ ಗೆ ಕೋವಿಡ್ ಪಾಸಿಟಿವ್

ಇತ್ತಿಚಿನ ಕಳೆದೆರಡು ವರ್ಷಗಳು ಚಲನಚಿತ್ರ ಕ್ಷೇತ್ರಗಳನ್ನು ಮಂಕಾಗಿಸಿದ್ದು, ಇದೀಗ ಪುನ: ಮರಳಿ ಹೊಸ ಭರವಸೆಗಳನ್ನು ಮೂಡಿಸಿರುವ ಬಗ್ಗೆ ಪ್ರಿಯಾ ಸುದೀಪ್ ಸಂತಸ ವ್ಯಕ್ತಪಡಿಸಿದ್ದಾರೆ. ಎನ್.ಎಫ್.ಟಿ. ‘ಬ್ಲಾಕ್ ಟಿಕೇಟ್ಸ್’ ಪ್ಲಾಟ್ ಫಾರಂ ನಲ್ಲಿ ಚಿತ್ರ ವೀಕ್ಷಿಸುವವರಿಗೆ ನೂತನ ಅನುಭವ ನೀಡಲಿದೆ. ತಮ್ಮ ಸೀಟುಗಳನ್ನು ಕಾಯ್ದಿರಿಸುವುದು ಪ್ರೇಕ್ಷಕರು ಹಾಗೂ ಪ್ರೀಮಿಯರ್ ಶೋದಲ್ಲಿ ಕಿಚ್ಚ್ ಸುದೀಪ್ ರವರ ಜೊತೆಗೆ “ವಿಕ್ರಾಂತ್ ರೋಣ” ವೀಕ್ಷಿಸುವ ಅವಕಾಶ ಅವಿಸ್ಮರಣೀಯ ಎಂದು ‘ಬ್ಲಾಕ್ ಟಿಕೇಟ್ಸ್’ ಫೌಂಡರ್ ನಿಶಾಂತ್ ಚಂದ್ರ ಅಭಿಪ್ರಾಯ ಪಟ್ಟಿದ್ದರೆ.

“ವಿಕ್ರಾಂತ್ ರೋಣ” ಎನ್.ಎಸ್.ಟಿ. ನವ್ಯ ತಂತ್ರಜ್ಞಾನದಲ್ಲಿ ಸಿನೆಮಾ ಪ್ರೀಮಿಯರ್ ಶೋ ಬಿಡುಗಡೆಯಾಗುತ್ತಿರುವುದು ಕಿಚ್ಚ ಸುದೀಪ್ ರವರ ಪೂರ್ವಭಾವಿ ತಯಾರಿ ಅತ್ಯಂತ ಯಶಸ್ಸು ಪಡೆಯಲಿದ್ದಾರೆ. ಇದು ಚಲನಚಿತ್ರ ರಂಗಕ್ಕೆ ಮುಂಬರುವ ದಿನಗಳಲ್ಲಿ ಯಶಸ್ಸು ಸಾಧಿಸಲು ಆಶಾಕಿರಣ ಮೂಡಿಸಿದೆ. ಎಂದು ಎನ್.ಎಸ್.ಟಿ. ‘ಬ್ಲಾಕ್ ಟಿಕೇಟ್ಸ್’ ಫೌಂಡರ್ ಅನುಭವ್ ಗಾರ್ಗ್ ಸಂತಸ ವ್ಯಕ್ತಪಡಿಸಿದ್ದಾರೆ.

ಅನುಭವ್ ಗಾರ್ಗ್ – ಇವರ ಬಗ್ಗೆ…
‘ಬ್ಲಾಕ್ ಟಿಕೆಟ್ಸ್’ ಮಲ್ಟಿ ಚೈನ್ ಎನ್.ಎಸ್.ಟಿ. ‘ಬ್ಲಾಕ್ ಟಿಕೇಟ್ಸ್’ ಪ್ಲಾಟ್ ಫಾರಂ ನವ್ಯ ತಂತ್ರಜ್ಞಾನದ ಪರಿಕಲ್ಪನೆ, ಅನುಭವ್ ಗಾರ್ಗ್ ರವರದ್ದು. ಉಧ್ಯಮಿಗಳ ಸಾಲಿನಲ್ಲಿ ಎರಡನೆಯ ಪೀಳಿಗೆಯವರು. 2008 ರಲ್ಲಿ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಯಸಸ್ಸು ಕಂಡವರು. ಉತ್ತರ ಭಾರತದಲ್ಲಿ ಹಲವಾರು ಮಾಲ್‌ಗಳನ್ನು ನಿರ್ಮಿಸಿ ಪ್ರಸಿದ್ದಿಯೊಂದಿಗೆ ನೆಟ್‌ವರ್ಕ್ ಚಾನೆಲ್ ಪಾರ್ಟನರ್ ಆಗಿಯೂ ಸಹ ಅಪಾರ ಅನುಭವ ಪಡೆದಿರುವವರು ಅನುಭವ್ ಗಾರ್ಗ್. ತನ್ನ ಕಾರ್ಯವ್ಯಾಪ್ತಿಯನ್ನು 15 ಮಲ್ಟಿಪ್ಲೆಕ್ಸ್ ವರೆಗೆ ವಿಸ್ತರಿಸಿದ್ದಾರೆ.

ಚಲನ ಚಿತ್ರ ರಂಗದಲ್ಲಿ ಎದುರಿಸುವ ಹಲವಾರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ನೂತನ ತಂತ್ರಜ್ಞಾನದ ಬ್ಲಾಕ್ ಟಿಕೆಟಿಂಗ್ ಎನ್.ಎಫ್.ಟಿ. ‘ಬ್ಲಾಕ್ ಟಿಕೇಟ್ಸ್’ ಮೂಲಕ ಪರಿಹಾರ ಸಾಧ್ಯ ಎಂದು ಯಶಸ್ಸಿನ ಭರವಸೆಯಲ್ಲಿದ್ದಾರೆ. ಮೂಲತ: ಭಾರತದ ಗುರ್‌ಗಾವ್‌ಂ ನವರಾಗಿರುವ ಅಭಿನವ್ ಗಾರ್ಗ್, ಎಂಟ್ರಪ್ರಿನರ್ ಅರ್ಗನೈಸೇಶನ್ ಸ್ಥಾಪಕ ಸದಸ್ಯರಾಗಿದ್ದಾರೆ.
“ವಿಕ್ರಾಂತ್ ರೋಣ” ಅದ್ಧೂರಿ ಬಿಡುಗಡೆಗಾಗಿ ನವ್ಯ ತಂತ್ರಜ್ಞಾನದ ಮೂಲಕ ಪೂರ್ವಭಾವಿ ತಯಾರಿ ನಡೆದಿದ್ದು ಸಂಪೂರ್ಣ ಯಶಸ್ಸು ತನ್ನದಾಗಿಸಿ ಕೊಳ್ಳಲಿದೆ. ಈ ಶುಭ ಸಂದರ್ಭದಲ್ಲಿ ವಿಶ್ವದ ಸಮಸ್ಥ ಸಿನಿ ಪ್ರೇಕ್ಷಕರ ಪರವಾಗಿ ಕಿಚ್ಚ ಸುದೀಪ್ ಹಾಗೂ ತಂಡದವರಿಗೆ ಹಾರ್ದಿಕ ಶುಭ ಹಾರೈಕೆಗಳು.

ಬಿ. ಕೆ. ಗಣೇಶ್ ರೈ – ದುಬಾಯಿ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12790
NewsKannada

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು