ದುಬೈ: ಮೆಗಾ ಲೀಗ್ ಕ್ರಿಕೆಟ್ ಟೂರ್ನಮೆಂಟ್ ಲೊರೆಟ್ಟೊ ಫ್ರೆಂಡ್ಸ್ ಇವರ ಆಶ್ರಯದಲ್ಲಿ “ಯುಎಇ ಟ್ರೋಫಿ -2023” ಮಾರ್ಚ್ 12 ರಂದು ದುಬೈಯ ಓವಲ್ ಕ್ರಿಕೆಟ್ ಸ್ಟೇಡಿಯಂ ಮತ್ತು ಎಂಸಿಸಿ ಕ್ರಿಕೆಟ್ ಮೈದಾನದಲ್ಲಿ ನಡೆಯಿತು.
ಉತ್ತಮ ರೀತಿಯಲ್ಲಿ ಸಂಘಟಿಸಲ್ಪಟ್ಟ ಈ ಪಂದ್ಯಾಟವು ದುಬೈಯಲ್ಲಿ ನೆಲೆಸಿರುವ ಮಂಗಳೂರು ಮತ್ತು ಉಡುಪಿ ವಲಯದ ಅಂಡರ್ ಆರ್ಮ್ ಕ್ರಿಕೆಟ್ ಪ್ರೇಮಿಗಳನ್ನು ಒಗ್ಗೂಡಿಸುವ ಕಾರ್ಯದಲ್ಲಿ ಯಶಸ್ವಿಯಾಯಿತು.
ಲೊರೆಟ್ಟೊ ಫ್ರೆಂಡ್ಸ್ ಯುಎಇ ಇದರ ಕೋರ್ ಕಮಿಟಿ ಸದಸ್ಯರು ಪ್ರಾರ್ಥಿಸಿದರು. ಪಂದ್ಯಾವಳಿಯನ್ನು ಸಂಯೋಜಕರಾದ ರೋಶನ್ ನೊರೋನ್ಹಾ, ಕೋಶಾಧಿಕಾರಿ ಅರುಣ್ ಬರ್ಬೋಜಾ, ಕೋರ್ ಕಮಿಟಿ ಸದಸ್ಯರುಗಳಾದ ರೂಪೇಶ್ ಪಿಂಟೋ, ರಾಯ್ ಡಿಸೋಜಾ, ವಿನೋದ್ ಪಿಂಟೋ, ಸಚಿನ್ ನೊರೋನ್ಹಾ, ಪ್ರಸನ್ನ ವಿನೋದ್ ಪಿಂಟೋ ದೀಪವನ್ನು ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಡೆಸ್ಮಂಡ್ ನೊರೊನ್ಹಾ, ಗ್ರೆಟ್ಟಾ ಫೆರ್ನಾಂಡಿಸ್ ಮತ್ತು ಸೋನಾಲಿ ಪಿಂಟೋ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೋರ್ ಕಮಿಟಿ ಸದಸ್ಯ ಡೊನಾಲ್ಡ್ ನೊರೊನ್ಹಾ ಉದ್ಘಾಟನಾ ಕಾರ್ಯಕ್ರಮ ನಿರೂಪಿಸಿದರು. ಲೀಗ್ ಪಂದ್ಯಗಳು ವಿನೋದ್ ಪಿಂಟೋ ಮತ್ತು ಡೆಸ್ಮಂಡ್ ನೊರೊನ್ಹಾ ಅವರ ನೇತೃತ್ವದಲ್ಲಿ ಓವಲ್ ಕ್ರಿಕೆಟ್ ಕ್ರೀಡಾಂಗಣ ಮತ್ತು ಎಮ್ ಸಿಸಿ ಟರ್ಫ್ ಮೈದಾನದಲ್ಲಿ ಏಕಕಾಲದಲ್ಲಿ ಪ್ರಾರಂಭವಾಯಿತು.
ಪಂದ್ಯಾವಳಿಯ ಉತ್ತಮ ಆಯೋಜನೆ, ಸಮಯಪಾಲನೆ ಕುರಿತು ಎಲ್ಲಾ ತಂಡಗಳು ಮೆಚ್ಚುಗೆವ್ಯಕ್ತಪಡಿಸಿದರು. ಡಿಜೆ ನಾರ್ಮನ್ ಮತ್ತು ಡಿಜೆ ಡೆಲಾನ್ ಲೋಬೊ ಅವರು ದಿನವಿಡೀ ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಬ್ರಾಡ್‌ವೇ ಈವೆಂಟ್ಸ್ ಮತ್ತು ಡಕ್ಷನ್ ನ ಉಸ್ತುವಾರಿಕೆಯಲ್ಲಿ ಅದ್ಭುತವಾಗಿ ಮೂಡಿಬಂದ ಕಾರ್ಯಕ್ರಮದ ಉತ್ಸಾಹ ಭರಿತ ಕ್ಷಣಗಳನ್ನು ಲವ್ಲಿನ್ ಡಿಐಎಮ್ ಇ ಎಲ್ ಎಲ್ ಒ ಆವರು ಸೆರೆಹಿಡಿದರು.