ಬಂಟ್ವಾಳ: ಗುಡ್ಡ ಜರಿದು ಮೂವರು ಕಾರ್ಮಿಕರು ದುರ್ಮರಣ

ಬಂಟ್ವಾಳ: ಗುಡ್ಡ ಜರಿದು ಮೂವರು ಕಾರ್ಮಿಕರು ದುರ್ಮರಣ

YK   ¦    Dec 07, 2019 09:30:10 PM (IST)
 ಬಂಟ್ವಾಳ: ಗುಡ್ಡ ಜರಿದು ಮೂವರು ಕಾರ್ಮಿಕರು ದುರ್ಮರಣ

ಬಂಟ್ವಾಳ: ಜೆಸಿಬಿ ಮೂಲಕ ಮಣ್ಣು ತೆಗೆಯುತ್ತಿದ್ದ ವೇಳೆ ಧರೆ ಜರಿದು ಮೂವರು ಕಾರ್ಮಿಕರು ಮೃತಪಟ್ಟು, ಓರ್ವ ಗಂಭೀರ ಗಾಯಗೊಂಡ ಘಟನೆ ವಿಟ್ಲ ಸಮೀಪದ ಒಡಿಯೂರು ಎಂಬಲ್ಲಿ ನಡೆದಿದೆ.

ಇಲ್ಲಿನ ವಿಟ್ಲ, ಕಸಬಾ ನಿವಾಸಿಗಳಾದ ರಮೇಶ್, ಪ್ರಕಾಶ್, ಬಾಳಪ್ಪ ಮೃತ ಕಾರ್ಮಿಕರಾಗಿದ್ದು, ಪ್ರಭಾಕರ ಗಂಭೀರ ಗಾಯಗೊಂಡವರು ಎಂದು ತಿಳಿದು ಬಂದಿದೆ.

ಶ್ರೀ ಕ್ಷೇತ್ರ ಒಡಿಯೂರು ದೇವಸ್ಥಾನಕ್ಕೆ ಸೇರಿದ ಅನ್ನಛತ್ರದ ಕಟ್ಟಡ ಕಾಮಗಾರಿಯನ್ನು ಜೆಸಿಬಿ ಮೂಲಕ ಮಾಡುವ ವೇಳೆ ಗುಡ್ಡ ಜರಿದು ಈ ಅವಘಡ ಸಂಭವಿಸಿದೆ. ಈ ವೇಳೆ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಮಣ್ಣಿನಲ್ಲಿ ಸಿಲುಕಿದ್ದ ಇನ್ನೋರ್ವ ಕಾರ್ಮಿಕ ಗಂಭೀರ ಗಾಯಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.


ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.