ಧಾರ್ಮಿಕ ಭಾವನೆಗೆ ಧಕ್ಕೆ: ಬಂಟ್ವಾಳದಲ್ಲಿ ನಾಲ್ವರ ಬಂಧನ

ಧಾರ್ಮಿಕ ಭಾವನೆಗೆ ಧಕ್ಕೆ: ಬಂಟ್ವಾಳದಲ್ಲಿ ನಾಲ್ವರ ಬಂಧನ

MV   ¦    Jun 14, 2020 09:19:16 AM (IST)
ಧಾರ್ಮಿಕ ಭಾವನೆಗೆ ಧಕ್ಕೆ: ಬಂಟ್ವಾಳದಲ್ಲಿ ನಾಲ್ವರ ಬಂಧನ

ಬಂಟ್ವಾಳ: ಹಿಂದೂ ರುದ್ರಭೂಮಿಯ ಶಿವನ ವಿಗ್ರಹದ ಪೀಠದ ಮೇಲೆ ಶೂ ಧರಿಸಿ ಓಡಾಟ ನಡೆಸಿ,  ಅಸಭ್ಯರೀತಿಯಲ್ಲಿ ಟಿಕ್ ಟಾಕ್ ಮಾಡಿ ಧಾರ್ಮಿಕ ಭಾವನೆ ಗಳಿಗೆ ಧಕ್ಕೆಯುಂಟು ಮಾಡಿದ ಆರೋಪದಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.   

 ಸಜೀಪ ನಿವಾಸಿಗಳಾದ ಮಸೂದ್, ಅಜೀಮ್, ಅಬ್ದುಲ್ ಲತೀಪ್ ಹಾಗೂ ಅರ್ಪಾಜ್ ಬಂಧಿತ ಆರೋಪಿಗಳು.

 

ಲಾಕ್ ಡೌನ್ ನ ಈ ಅವಧಿಯಲ್ಲಿ ನಾಲ್ವರು ಆರೋಪಿಗಳು ಸಜೀಪದ ಕಂಚಿನಡ್ಕ ಪದವು ರುದ್ರ ಭೂಮಿಯೊಳಗೆ ಅಕ್ರಮವಾಗಿ ಪ್ರವೇಶ ಮಾಡಿ ಅಲ್ಲಿರುವ ಶಿವನ ವಿಗ್ರಹ ಪೀಠದ ಮೇಲೆ ಶೂಧರಿಸಿ ಕುಳಿತು ಕೊಂಡು ಓಡಾಟ ನಡೆಸಿದ್ದಾರೆ ಈ ವಿಡಿಯೋ ಟಿಕ್ ಟಾಕ್ ಮೂಲಕ ಹಾಗೂ ಇನ್ನಿತರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಇದರ ಜೊತೆ ವಿಗ್ರಹ ದ ಸಮೀಪ ಬಿಯರ್ ಬಾಟಲಿ, ಗಾಂಜಾ ಸೇವನೆ ಮಾಡಿದ ಬಗ್ಗೆ ಸಾಕ್ಷ್ಯಗಳು ದೊರೆತಿವೆ, ಅಲ್ಲದೆ ಸೇವಿಸುವ ವಿಡಿಯೋ ಕೂಡ ವೈರಲ್ ಆಗಿದೆ.

ಇದು ಹಿಂದು ಧಾರ್ಮಿಕ ಶ್ರದ್ಧಾ ಕೇಂದ್ರ ಕ್ಕೆ ಧಕ್ಕೆಯಾಗಿದೆ ಎಂದು ರುದ್ರಭೂಮಿ ಅಧ್ಯಕ್ಷ ಠಾಣೆ ಗೆ ದೂರು ನೀಡಿದ್ದರು.

ಈ ದೂರಿನ ಹಿನ್ನೆಲೆಯಲ್ಲಿ ಬಂಟ್ವಾಳ ಡಿ.ವೈ.ಎಸ್.ಪಿ.ವೆಲಂಟೈನ್ ಡಿ.ಸೋಜ ಅವರ ನಿರ್ದೇಶನ ಅವರ ಮಾರ್ಗದರ್ಶನದಲ್ಲಿ ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ ಅವರ ನೇತೃತ್ವದಲ್ಲಿ ಬಂಟ್ವಾಳ ಗ್ರಾಮಾಂತರ ಠಾಣಾ ಎಸ್.ಐ .ಪ್ರಸನ್ನ ಅವರ ತಂಡ ಆರೋಪಿಗಳ ಬಂಧನದ ಕಾರ್ಯಚರಣೆ ನಡೆಸಿದ್ದು, 

ದೂರು ನೀಡಿದ ಕೆಲವೇ ಗಂಟೆಗಳಲ್ಲಿ ಪ್ರಸನ್ನ ಅವರ ತಂಡ ನಾಲ್ವರು ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.