ಮಂಗಳೂರಿನಲ್ಲಿ 14 ನೇ ಮಹಡಿಯಿಂದ ಜಿಗಿದು ಮಹಿಳೆ ಆತ್ಮಹತ್ಯೆ

ಮಂಗಳೂರಿನಲ್ಲಿ 14 ನೇ ಮಹಡಿಯಿಂದ ಜಿಗಿದು ಮಹಿಳೆ ಆತ್ಮಹತ್ಯೆ

Jun 10, 2021 01:33:54 PM (IST)
 ಮಂಗಳೂರಿನಲ್ಲಿ  14 ನೇ ಮಹಡಿಯಿಂದ ಜಿಗಿದು ಮಹಿಳೆ ಆತ್ಮಹತ್ಯೆ

ಮಂಗಳೂರು: ನಗರದ ಕುಲಶೇಖರದಲ್ಲಿಪುಷ್ಪಲತಾ (64) ಎಂಬವರು ಗುರುವಾರ ಬೆಳಗ್ಗೆ 14 ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕಂಕನಾಡಿ ನಗರ ಠಾಣಾ ವ್ಯಾಪ್ತಿಯ ಕುಲಶೇಖರ ಚೌಕಿ ಪ್ಲಾಮ ಗ್ರಾಂಡ್ ಅಪಾರ್ಟ್ ಮೆಂಟ್ 14 ನೇ ಮಹಡಿಯಲ್ಲಿರುವ ಮನೆಯ ಬಾಲ್ಕನಿಯಿಂದ ಹಾರಿ ಅತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರು ಮಾನಸಿಕವಾಗಿ ಡಿಪ್ರೆಷನ್ ನಿಂದ ಬಳಲುತ್ತಿದ್ದು ಹಿಂದೆಯು ಅತ್ಮಹತ್ಯೆಗೆ ಪ್ರಯತ್ನ ನಡೆಸಿರುತ್ತಾರೆ ಎಂದು ಪೊಲೀಸರು ತಿಳಿಸಿದ್ದಾರೆ