ಬೆಳ್ತಂಗಡಿಯ ಅಲ್ಲಲ್ಲಿ ಗಾಳಿ ಸಹಿತ ಮಳೆ

ಬೆಳ್ತಂಗಡಿಯ ಅಲ್ಲಲ್ಲಿ ಗಾಳಿ ಸಹಿತ ಮಳೆ

DA   ¦    Dec 01, 2019 08:10:48 PM (IST)
ಬೆಳ್ತಂಗಡಿಯ ಅಲ್ಲಲ್ಲಿ ಗಾಳಿ ಸಹಿತ ಮಳೆ

ಬೆಳ್ತಂಗಡಿ: ಮಳೆಗಾಲ ಮುಗಿಯಿತು ಅನ್ನುವಷ್ಟರಲ್ಲಿ ಮಳೆ ಮತ್ತೊಮ್ಮೆ ಕಾಣಿಸಿಕೊಂಡಿದೆ. ಹದಿನೈದು ದಿನಗಳಿಂದೀಚೆಗೆ ಚಳಿಗಾಲದ ವಾತಾವರಣ ಪ್ರಾರಂಭವಾಗಿತ್ತು.

ಆದರೆ ಆದಿತ್ಯ ವಾರ ಮಧ್ಯಾಹ್ನವೇ ಬೆಳ್ತಂಗಡಿ ಪಟ್ಟಣ, ಉಜಿರೆ, ಗುರಿಪಳ್ಳ, ಕರಂಬಾರು, ಶಿರ್ಲಾಲು, ಧರ್ಮಸ್ಥಳದಲ್ಲಿ ಮತ್ತೆ ಮಳೆ ಸುರಿದರೆ ಸಂಜೆ ವೇಳೆ ವೇಣೂರು, ಅಳದಂಗಡಿ, ನಾರಾವಿ, ಗೇರುಕಟ್ಡೆ ಮೊದಲಾದೆಡೆ ದೊಡ್ಡದಾಗಿ ಗಾಳಿ ಸಹಿತ ಸುರಿದಿದೆ. ಇದರಿಂದ ಒಣಗಲು ಹಾಕಿದ ಕೊಯಿಲಿನ ಅಡಕೆಗೆ ತೊಂದರೆಯಾಗಿದೆ.

ಹೀಗೆ ಮುಂದುವರಿದರೆ ಮದುವೆ ಇತ್ಯಾದಿ ಕಾರ್ಯಗಳಿಗೆ ತೊಂದರೆಯಾಗಲಿದೆ ಎಂದು ಸಾರ್ವಜನಿಕರು ಆಡಿಕೊಳ್ಳುತ್ತಿದ್ದಾರೆ.