ಕೊಕ್ಕಡ ಎಂಡೋ ಪಾಲನಾ ಕೇಂದ್ರವನ್ನು ಸರ್ಕಾರವೇ ನಿರ್ವಹಿಸಲು ಒತ್ತಾಯಿಸಿ ಮನವಿ

ಕೊಕ್ಕಡ ಎಂಡೋ ಪಾಲನಾ ಕೇಂದ್ರವನ್ನು ಸರ್ಕಾರವೇ ನಿರ್ವಹಿಸಲು ಒತ್ತಾಯಿಸಿ ಮನವಿ

DA   ¦    Oct 09, 2019 04:07:34 PM (IST)
ಕೊಕ್ಕಡ ಎಂಡೋ ಪಾಲನಾ ಕೇಂದ್ರವನ್ನು ಸರ್ಕಾರವೇ ನಿರ್ವಹಿಸಲು ಒತ್ತಾಯಿಸಿ ಮನವಿ

ಬೆಳ್ತಂಗಡಿ: ಕೊಕ್ಕಡ ಎಂಡೋ ಪಾಲನಾ ಕೇಂದ್ರವನ್ನು ಸರಕಾರ ನಿರ್ವಹಿಸಬೇಕೆಂದು ಆಗ್ರಹಿಸಿ ಎಂಡೋ ಸಂತ್ರಸ್ತ ಪಾಲಕರು ಶಾಸಕ ಹರೀಶ್ ಪೂಂಜ ಅವರಲ್ಲಿ ಮನವಿ ಸಲ್ಲಿಸಿದರು.

ಕೊಕ್ಕಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಪಾಲನಾ ಕೇಂದ್ರ ನಡೆಸುತ್ತಿರುವ ಸಿಯೋನ್ ಸಂಸ್ಥೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಗ್ರಾಮಕರಣಿಕರು ಸಂತ್ರಸ್ಥರ ಮನೆ ಮನೆಗೆ ಬಂದು ಸಿಯೋನ್ ಸಂಸ್ಥೆಯ ಪರವಾಗಿ ಲಾಬಿ ನಡೆಸುತ್ತಿದ್ದಾರೆ ಎಂದು ಶಾಸಕರ ಎದುರು ಆಕ್ರೋಶ ವ್ಯಕ್ತ ಪಡಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಶಾಸಕರು ಶನಿವಾರದೊಳಗೆ ಕೇಂದ್ರವನ್ನು ಸರಕಾರವೇ ನಿರ್ವಹಣೆ ಮಾಡುವಂತ್ತೆ ವ್ಯವಸ್ಯೆ ಮಾಡಿಸುತ್ತೇನೆ ಎಂದು ಭರವಸೆ ನೀಡಿದರು.

ಈ ಸಂದರ್ಭ ಪೋಷಕರು ಶನಿವಾರದೊಳಗೆ ವ್ಯವಸ್ಥೆ ಆಗದಿದ್ದಲ್ಲಿ ಸೋಮವಾರ ಪಾಲನಾ ಕೇಂದ್ರಕ್ಕೆ ಬೀಗ ಹಾಕುತ್ತೇವೆ. ನಾವು ಜೈಲಿಗೆ ಹೋಗಲು ಸಿದ್ದರಿದ್ದೇವೆ ಎಂದು ತಿಳಿಸಿದರು.

ಎಂಡೋ ಸಂತ್ರಸ್ತರ ಹೋರಾಟ ಸಮಿತಿಯ ಅಧ್ಯಕ್ಷ ಶ್ರೀಧರ್ ಗೌಡ ಕೆಂಗುಡೇಲ್., ಎಪಿಎಂಸಿ ಮಾಜಿ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ಕೊಕ್ಕಡ ಸಿಎ ಬ್ಯಾಂಕ್ ಅಧ್ಯಕ್ಷ ನಾರಾಯಣ ಗೌಡ,.ಅಲ್ಬರ್ಟ್ ಮೆನೆಜಸ್, .ತುಕ್ರಪ್ಪ ಶೆಟ್ಟಿ ನೂಜೆ., ರೇವತಿ ಥಾಮನ್ಕರ್. ಉಪಸ್ಥಿತರಿದ್ದರು.