ಮೈಕ್ರೋ ಫೈನಾನ್ಸ್ ವಿರುದ್ಧ ಪುತ್ತೂರಿನಲ್ಲಿ ಪ್ರತಿಭಟನೆ

ಮೈಕ್ರೋ ಫೈನಾನ್ಸ್ ವಿರುದ್ಧ ಪುತ್ತೂರಿನಲ್ಲಿ ಪ್ರತಿಭಟನೆ

LK   ¦    Nov 08, 2019 02:16:08 PM (IST)
ಮೈಕ್ರೋ ಫೈನಾನ್ಸ್ ವಿರುದ್ಧ ಪುತ್ತೂರಿನಲ್ಲಿ ಪ್ರತಿಭಟನೆ

ಪುತ್ತೂರು: ಮೈಕ್ರೋ ಫೈನಾನ್ಸ್‍ಗಳ ದೌರ್ಜನ್ಯ ನಿಲ್ಲಲಿ , ಇವರು ನೀಡಿದ ಕಾನೂನುಬಾಹಿರ ಸಾಲಗಳನ್ನು ಮನ್ನಾ ಮಾಡಿ, ರಾಷ್ಟ್ರೀಕೃತ ಬ್ಯಾಂಕುಗಳು ಬಡವರಿಗೆ ಸಾಲ ನೀಡಲಿ ಎಂದು ಆಗ್ರಹಿಸಿ ಸಾವಿರಾರು ಮಂದಿ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಇಲ್ಲಿನ ನ.7ರಂದು ಇಲ್ಲಿನ ಕಿಲ್ಲೇ ಮೈದಾನದಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಯಿತು.

 ಸಭೆಯಲ್ಲಿ ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್‍ನ್ನು ಓಡಿಸಿಯೇ ಸಿದ್ಧ ಘೋಷಣೆಯನ್ನು ಮಾಡಲಾಯಿತು. ಪ್ರತಿಭಟನಾ ಸಭೆಯ ಬಳಿಕ ವಿವಿಧ ಬೆಡಿಕೆಗಳ ಮನವಿಯನ್ನು ಪುತ್ತೂರು ಸಹಾಯಕ ಕಮಿಷನರ್ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಯಿತು. ಫಲಾನುಭವಿಗಳಿಂದ ತಮ್ಮ ಸಾಲದ ವಿವರಗಳ ಅರ್ಜಿಯನ್ನು ಸಂಘಟನೆಗಳು ಪಡೆದುಕೊಂಡರು.

ದ.ಕ. ಜಿಲ್ಲಾ ಋಣಮುಕ್ತ ಹೋರಾಟ ಸಮಿತಿ, ಪುತ್ತೂರು ತಾಲೂಕು ಹಾಗೂ ಬೆಳ್ತಂಗಡಿ ತಾಲೂಕು ಋಣಮುಕ್ತ ಹೋರಾಟ ಸಮಿತಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಬೆಳ್ತಂಗಡಿ ಶಾಖೆ, ಜಿಲ್ಲಾ ದಲಿತ್ ಸೇವಾ ಸಮಿತಿ ಮತ್ತು ಪುತ್ತೂರು ತಾಲೂಕು ಬೀಡಿ ಕೆಲಸಗಾರರ ಸಂಘದ ಸಹಯೋಗದಲ್ಲಿ ಬಡ ಸಾಲ ಸಂತ್ರಸ್ಥ ಕುಟುಂಬಗಳ, ಪ್ರಜ್ಞಾವಂತ ನಾಗರೀಕರ ಪ್ರತಿಭಟನೆ ಹೆಸರಿನಲ್ಲಿ ಪ್ರತಿಭಟನೆ ನಡೆಯಿತು.  ಬೆಳಗ್ಗೆ ಕಿಲ್ಲೆ ಮೈದಾನದ ಫೆಂಡಾಲ್‍ನಿಂದ ಮೆರವಣಿಗೆ ಆರಂಭಗೊಂಡು ಪುತ್ತೂರು ಪೇಟೆಯಲ್ಲಿ ಸಂಚರಿಸಿ ಬಳಿಕ ಪುನಃ ಪೆಂಡಾಲ್‍ಗೆ ಬಂದು ಸೇರಿ ಪ್ರತಿಭಟನಾ ಸಭೆ ನಡೆಸಲಾಯಿತು.

More Images