ಬೆಳ್ತಂಗಡಿಗೆ ಹೊರರಾಜ್ಯಗಳಿಂದ 261 ಮಂದಿ ಆಗಮನ

ಬೆಳ್ತಂಗಡಿಗೆ ಹೊರರಾಜ್ಯಗಳಿಂದ 261 ಮಂದಿ ಆಗಮನ

DA   ¦    May 21, 2020 08:03:20 AM (IST)
ಬೆಳ್ತಂಗಡಿಗೆ ಹೊರರಾಜ್ಯಗಳಿಂದ 261 ಮಂದಿ ಆಗಮನ

ಬೆಳ್ಥಂಗಡಿ: ತಾಲೂಕಿಗೆ ಹೊರರಾಜ್ಯಗಳಿಂದ 261 ಮಂದಿ ಆಗಮಿಸಿದ್ಡ್ದು ಕೋವಿಡ್-೧೯ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅವರನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದೆ.

ಸೂಕ್ತ ವ್ಯವಸ್ಥೆಗಳು ಇಲ್ಲದಿರುವುದರಿಂದ ತಾಲೂಕಿನ ಪ್ರಮುಖ ಶಾಲೆಗಳಲ್ಲಿ ಉಳಿದುಕೊಂಡ ಯುವಕರು ತಾವೇ ಸ್ವಚ್ಛತೆ ಕಾರ್ಯ ನಡೆಸಿದ್ದಾರೆ. ಇದಕ್ಕೆ ಸ್ಥಳೀಯರ ವಿರೋಧವೂ ವ್ಯಕ್ತವಾಗಿತ್ತು. ಬೆಳ್ತಂಗಡಿ ತಾಲೂಕು ಆಡಳಿತ ವ್ಯಾಪ್ತಿಯಲ್ಲಿ ೪೮ ಗ್ರಾ.ಪಂ. ವ್ಯಾಪ್ತಿಯಲ್ಲೂ ಸರಕಾರಿ ಕ್ವಾರೆಂಟೈನ್ ಕೇಂದ್ರಗಳನ್ನು ತೆರೆಯಲಾಗಿದೆ. ಇವುಗಳಲ್ಲಿ ಹೆಚ್ಚಿನವು ಸರಕಾರಿ ವಸತಿ ಶಾಲೆಗಳನ್ನೇ ಗುರುತಿಸಲಾಗಿದೆ. ವಿದ್ಯುತ್, ನೀರು, ಶೌಚಾಲಯ ಸಮಸ್ಯೆಗಳೆ ಹೆಚ್ಚಾಗಿದೆ. ಈ ವರೆಗೆ ವಿದ್ಯಾರ್ಥಿಗಳು ಅನಿವಾರ್ಯ ಕಾರಣಗಳಿಂದ ಉಳಿದಕೊಂಡಿದ್ದರು. ಪ್ರಸಕ್ತ ಕ್ವಾರೆಂಟೈನ್‌ಗಳು ಅದೇ ಸ್ಥಿತಿಯಲ್ಲಿ ಉಳಿದುಕೊಳ್ಳಲು ತಯಾರಿಲ್ಲ. 

ತಾಲೂಕು ಆಡಳಿತ, ಶಾಸಕರ ಮುತುವರ್ಜಿಯಲ್ಲಿ ಸೂಕ್ತ ಸೌಲಭ್ಯ ಕಲ್ಪಿಸಲಾಗುತ್ತಿದೆಯಾದರೂ, ಮೂಲ ಸೌಕರ್ಯ ಕೊರತೆ ಇರುವ ಮಾಹಿತಿ ಲಭ್ಯವಾ ಗಿದೆ. ಸರಕಾರಿ ಶಾಲೆಗಳಲ್ಲದೆ ಕ್ವಾರೆಂಟೈನ್‌ಗಳೆ ಮೊತ್ತ ಭರಿಸುವುದಾದಲ್ಲಿ ಪಂಚಾಯತ್ ಅಥವಾ ಜಿಲ್ಲಾಡಳಿತ ಗುರುತಿಸಿದ ಖಾಸಗಿ ವಸತಿ ಗೃಹಗಳಲ್ಲಿ ಉಳಿದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಆದರೆ ಅನಿವಾರ್ಯವಾಗಿ ಬಂದವರು ಅವಶ್ಯವಾಗಿ ಬೇರೆ ವಿಧಿ ಇಲ್ಲದೆ ಸರಕಾರಿ ಕ್ವಾರೆಂಟೈನ್ ಬಳಸಬೇಕಾಗಿದೆ. ಹೆಚ್ಚಿನ ಸಮಯದಲ್ಲಿ ಸರಕಾರ ದಿನಕ್ಕೊಂದು ಆದೇಶ ತರುತ್ತಿರುವುದರಿಂದ ಅಧಿಕಾರಿಗಳಲ್ಲಿ ಮಾಹಿತಿ ಕೊರತೆ ಎದುರಾಗಿದೆ.

ಮಹಾರಾಷ್ಟ್ರದಿಂದ ೨೦೬, ಗುಜರಾತ್-೦೨, ತಮಿಳುನಾಡು-೧೨, ಕೇರಳ-೩೦, ತೆಲಂಗಾಣ-೦೩, ಆಂದ್ರಪ್ರದೇಶ-೦೪, ಗೋವಾ-೦೨, ಮಧ್ಯಪ್ರದೇಶ-೦೧, ಉತ್ತರಪ್ರದೇಶ-೦೧ ಸೇರಿ ಒಟ್ಟು ೨೬೧ ಮಂದಿ ಈವರೆಗೆ ವಿಮಾನ, ರೈಲು ಮಾರ್ಗವಾಗಿ ತಲುಪಿದ್ದಾರೆ. ಈಗಾಗಲೇ ಇವರ ಗಂಟಲು ಮಾದರಿ ದ್ರವ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ.