ನಮ್ಮ ಬದುಕಿನ ಜೊತೆಗೆ ಇನ್ನೊಬ್ಬರ ಬದುಕನ್ನು ನಾವು ಆಳವಾಗಿ ತಿಳಿದುಕೊಂಡಷ್ಟು ನಮ್ಮಲ್ಲಿ ಹೊಸ ಅನುಭವಗಳು ಸೃಷ್ಠಿಯಾಗುತ್ತದೆ, ಆ ಎಲ್ಲಾ ಅನುಭವ ಯಾವತ್ತು ನಮ್ಮನ್ನು ಕಾಡಲಿಕ್ಕೆ ಶುರು ಮಾಡುತ್ತದೋ ಆವಾಗ ನಾವು ನಿಜವಾದ ಬರಹಗಾರರು ಆಗಲಿಕ್ಕೆ ಸಾಧ್ಯ ಎಂದು ಬರಹಗಾರ, ಪ್ರಾಧ್ಯಾಪಕ ರಾಜೇಶೇಖರ ಹಳೆಮನಿ ತಿಳಿಸಿದರು.
ಅವರು ಇತ್ತೀಚೆಗೆ ಉಜಿರೆ ಎಸ್.ಡಿ. ಎಂ ಕಾಲೇಜಿನ ಬಿವೋಕ್, ಡಿಜಿಟಲ್ ಮೀಡಿಯಾ ಹಾಗು ಫಿಲ್ಮಂಮೇಕಿಂಗ್ ವಿಭಾಗ ಆಯೋಜಿಸಿದ್ದ ‘ಪಕೋಡಾ ಟೇಲ್ಸ್, ಕಥೆಯೊಂದು ಹೇಳೋಣ’ ಅನ್ನುವ ವಿನೂತನಾ ಕಥಾ ಕಮ್ಮಟದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಉದಯೋನ್ಮುಕ ಬರಹಗಾರ ದಾನೀಶ್ ಎಂ ಮಾತನಾಡಿ, ಕಲೆ ಯಾವತ್ತು ಬದುಕಿನ ಕನ್ನಡಿ, ಎಲ್ಲಾ ಕಲಾಪ್ರಕಾರಗಳು ಬದುಕಿನ ವಿವಿಧ ಮಜಲುಗಳನ್ನು ಆಕರ್ಷಕವಾಗಿ ಜನರಿಗೆ ತಲುಪಿಸುವ ಕೆಲಸ ಮಾಡುತ್ತದೆ. ಎಂದಿಗೂ ಕಲೆ ಇದನ್ನೆ ಮಾಡುತ್ತದೆ ಅನ್ನುವ ವಿಚಾರ ಪ್ರತಿಯೊಬ್ಬ ಬರಹಗಾರರು ಮನಗೊಂಡಿರಬೇಕು ಎಂದು ಕಿವಿಮಾತು ಹೇಳಿದರು.
ಸಮಾರಂಭದ ಮತ್ತೋರ್ವ ಅಥಿತಿ ಧಾರಾವಾಹಿ ಸಂಭಾಷಣೆಗಾರ್ತಿ ಪದ್ಮೀನಿ ಜೈನ್ ಮಾತಾಡಿ, ಕಥೆ ಬರಿಯುವುದಕ್ಕಿಂತಲೂ ಹೆಚ್ಚು ಸ್ವಾರಸ್ಯಕರ ಹಾಗೂ ಕ್ಷಿಷ್ಟಕರ ಕೆಲಸ ಅಂದ್ರೆ ಕಥೆ ಹೇಳುವಂತದ್ದು. ಬರೆಯುವ ವಿಧಾನದಲ್ಲಿ ತಿದ್ದಿ ತೀಡುವ ಅವಕಾಶವಿದೆ ಆದರೆ ಹೇಳುವ ವಿಧಾನದಲ್ಲಿ ಆ ಆವಾಕಾಶ ಇಲ್ಲ, ಎಲ್ಲವೂ ನಿಯೋಜಿತವಾಗಿರಬೇಕು, ಆದರೂ ಅದೊಂದು ಖುಷಿಯ ಕೆಲಸ ಅಂದರು.
‘ಪಕೋಡಾ ಟೇಲ್ಸ್, ದ ಕಲೆಕ್ಟಿವ್ ಆಫ್ ಕ್ರಿಯೇಟಿವಿಟಿ’ ಇದೊಂದು ಹೊಸ ಪ್ರಯೋಗವಾಗಿದ್ದು, ಕಾಲೇಜಿನ ವಿದ್ಯಾರ್ಥಿಗಳು ಹಾಗು ಕಲಾ ಪ್ರಕಾರಗಳಲ್ಲಿ ಆಸಕ್ತಿಯಿರುವ ಎಲ್ಲರಿಗೆ ಪ್ರಯೊಜನ ಆಗುವಂತೆ, ಅವರ ಪ್ರಯೋಗಗಳಿಗೆ, ಆಭಿವ್ಯಕ್ತಿಗೆ ವೇದಿಕೆಯ ಜೊತೆಗೆ ಅವರದೇ ಆದ ಒಂದು ಸಮುದಾಯವನ್ನು ರೂಪಿಸುವ ಮಹತ್ತರವಾದ ಉದ್ದೇಶವನ್ನು ಇಟ್ಟುಕೊಂಡು ಬಿವೋಕ್, ಡಿಜಿಟಲ್ ಮೀಡಿಯಾ ಹಾಗು ಫಿಲ್ಮಂಮೇಕಿಂಗ್ ವಿಭಾಗ ಈ ಒಂದು ಸರಣಿಯನ್ನು ಆಯೋಜಿಸಿದೆ. 12 ತಿಂಗಳು ವಿವಿಧ ಕಲಾಪ್ರಕಾರಗಳ ವಿಚಾರಗಳು, ಅಭಿವ್ಯಕ್ತಿಗಳು ಈ ವೇದಿಕೆಯಡಿಯಲ್ಲಿ ನಡೆಯಲಿಕ್ಕಿದೆ. ಪ್ರತಿ ತಿಂಗಳು ಆಯ್ದ ಒಂದು ಕಲಾಪ್ರಕಾರದ ವಿಷಯವನ್ನು ಪ್ರಚುರ ಪಡಿಸುವ ವಿಚಾರ ವಿನಿಮಯ ಬಿವೋಕ್ ವಿಭಾಗದ ಇನ್ಸ್ಟಾ ಗ್ರಾಂ ಹಾಗೂ ಯೂಟ್ಯೂಬ್ ಚಾನೆಲ್ಗಳ ಮೂಲಕ ಆರಂಭವಾಗಿ, ತಿಂಗಾಳಂತ್ಯಕೆ ಒಂದು ಕಡೆ ಸೇರಿ ಅನೌಪಾಚರಿಕವಾಗಿ ಮಾತನಾಡುವ ವಿಚಾರವನ್ನು ಹಂಚಿಕೊಳ್ಳುವ ಯೋಜನೆಯನ್ನು ಈ ಸರಣಿ ಕಾರ್ಯಕ್ರಮ ಹೊಂದಿದೆ. ಈ ನಿಟ್ಟಿನಲ್ಲಿ ಮೊದಲ ಪ್ರಯತ್ನವಾಗಿ ಕಥೆ ರಚಿಸಿ ಹೇಳುವ ‘ಕಥೆಯೊಂದು ಹೇಳೋಣ’ ಅನ್ನುವ ಕಾರ್ಯಕ್ರಮವನ್ನು ಆಯೋಜಿಲಾಗಿತು.
ಸಮಾರಂಭದಲ್ಲಿ ಕಾಲೇಜಿನ ಕಾರ್ಯದರ್ಶಿ ಡಾ.ಬಿ ಯಶೋವರ್ಮ, ಶ್ರೀಮತಿ ಸೋನಿಯಾ ಯಶೋವರ್ಮ, ಪ್ರಾಂಶುಪಾಲರಾದ ಡಾ.ಸತೀಶ್ಚಂದ್ರ, ಹಾಗು ಸ್ನಾತಕೋತ್ತರ ವಿಭಾಗಾದ ಡೀನ್ ಡಾ. ವಿಶ್ವನಾಥ್ ಹಾಗೂ ಬಿವೋಕ್ ವಿಭಾಗದ ಪ್ರಾಧ್ಯಪಾಕರಾದ, ಸುವೀರ್ ಜೈನ್, ಮಾಧವ ಹೊಳ್ಳ, ಅಶ್ವಿನಿ ಜೈನ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಬಿವೋಕ್ ವಿಭಾಗದ ಅನಿರುಧ್ಧ ಕಾರ್ಯಕ್ರಮವನ್ನು ನಿರೂಪಿಸಿದರು.